ಟೋಕಿಯೊ: ಅಮೆರಿಕದ ಈಜುಪಟು ಕಾಲೆಬ್ ಡ್ರೆಸೆಲ್, ಐದು ಚಿನ್ನದ ಪದಕಗಳನ್ನು ಗೆಲ್ಲುವ ಮೂಲಕ ಟೋಕಿಯೊ ಒಲಿಂಪಿಕ್ಸ್ ಅಭಿಯಾನವನ್ನು ಕೊನೆಗೊಳಿಸಿದ್ದಾರೆ.

ಒಂದರ ಹಿಂದೆ ಒಂದರಂತೆ ಸತತವಾಗಿ ನಡೆದ ಸ್ಪರ್ಧೆಯ ನಡುವೆಯು ಅತೀವ ಒತ್ತಡವನ್ನು ನಿಭಾಯಿಸಿರುವ ಡ್ರೆಸೆಲ್, ವೈಯಕ್ತಿಕ ವಿಭಾಗದಲ್ಲಿ ಮೂರು ಮತ್ತು ರಿಲೇಯಲ್ಲಿ ಎರಡು ಚಿನ್ನ ತಮ್ಮದಾಗಿಸಿದರು. ಈ ಮೂಲಕ ಯಶಸ್ಸಿನ ಉತ್ತುಂಗಕ್ಕೇರಿದರು.

ಇದನ್ನೂ ಓದಿ:Tokyo Olympics | ಏಳು ಪದಕಕ್ಕೆ ಕೊರಳೊಡ್ಡಿದ ಎಮ್ಮಾ ಮೆಕಿಯನ್ ವಿಶ್ವ ದಾಖಲೆ

ಈಜುಕೊಳದಲ್ಲಿ ಅಮೆರಿಕ ಹೆಸರನ್ನು ಸುವರ್ಣವಾಗಿಸಿರುವ ಡ್ರೆಸೆಲ್, 100 ಮೀ. ಬಟರ್‌ಫ್ಲೈ, 50 ಮೀ. ಫ್ರೀಸ್ಟೈಲ್, 100 ಮೀ. ಫ್ರೀಸ್ಟೈಲ್, 4x100 ಮೀ. ಮೆಡ್ಲೆ ರಿಲೇ ಮತ್ತು 4x100 ಮೀ. ಫ್ರೀಸ್ಟೈಲ್ ರಿಲೇ ವಿಭಾಗದಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದರು.

24 ವರ್ಷದ ಡ್ರೆಸೆಲ್, ಆ ಮೂಲಕ ಒಲಿಂಪಿಕ್ಸ್‌ನಲ್ಲಿ ಒಟ್ಟು ಏಳು ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದಾರೆ.ಇದರೊಂದಿಗೆ ಈಜು ವಿಭಾಗದಲ್ಲಿ ಅಮೆರಿಕದ ಅಧಿಪತ್ಯ ಮುಂದುವರಿದಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಡ್ರೆಸೆಲ್, 'ವಿಶ್ವ ಚಾಂಪಿಯನ್‌ಶಿಪ್‌ಗೆ ಹೋಲಿಸಿದಾಗ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಒತ್ತಡ ತುಂಬಾ ಹೆಚ್ಚಿರುತ್ತದೆ. ಆ ಒಂದು ಕ್ಷಣದಲ್ಲಿ ನಿಮ್ಮ ಇಡೀ ಬದುಕು 20 ಅಥವಾ 40 ಸೆಕೆಂಡ್‌ಗಳಿಗೆ ಬಂದು ನಿಲ್ಲುತ್ತದೆ' ಎಂದಿದ್ದಾರೆ.

ಅಮೆರಿಕದ ಮಾಜಿ ದಿಗ್ಗಜರಾದ ಮೈಕಲ್ ಫೆಲ್ಪ್ಸ್ ಹಾಗೂ ಮಾರ್ಕ್ ಸ್ಪಿಟ್ಜ್ ಸಾಲಿಗೆ ಡ್ರೆಸೆಲ್ ಸೇರಿದ್ದಾರೆ. ಈ ಹಿಂದೆ ಒಲಿಂಪಿಕ್ಸ್ ಕ್ರೀಡಾಕೂಟವೊಂದರಲ್ಲಿ ಫೆಲ್ಸ್ ಎಂಟು ಮತ್ತು ಸ್ಪಿಟ್ಜ್ ಏಳು ಚಿನ್ನದ ಪದಕಗಳನ್ನು ಗೆದ್ದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.