ಶುಕ್ರವಾರ, ಸೆಪ್ಟೆಂಬರ್ 17, 2021
29 °C

Tokyo Olympics ಕುಸ್ತಿ: ಸೆಮಿಫೈನಲ್‌ನಲ್ಲಿ ದೀಪಕ್‌ಗೆ ಸೋಲು, ಕಂಚಿನ ಆಸೆ ಜೀವಂತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಟೋಕಿಯೊ: ಕುಸ್ತಿಪಟು ರವಿಕುಮಾರ್ ದಹಿಯಾ ಐತಿಹಾಸಿಕ ಸಾಧನೆಯನ್ನು ಸಮಗಟ್ಟುವಲ್ಲಿ ದೀಪಕ್ ಪುನಿಯಾ ವಿಫಲರಾಗಿದ್ದಾರೆ. 

ಟೋಕಿಯೊ ಒಲಿಂಪಿಕ್ಸ್ ಪುರುಷರ 86 ಕೆ.ಜಿ ವಿಭಾಗದಲ್ಲಿ ಭಾರತದ ಭರವಸೆಯಾಗಿರುವ ದೀಪಕ್ ಪೂನಿಯಾ ಸೆಮಿಫೈನಲ್‌ನಲ್ಲಿ ಸೋಲು ಅನುಭವಿಸಿದರು. 

ಇದನ್ನೂ ಓದಿ: 

ಅಂತಿಮ ನಾಲ್ಕರ ಘಟ್ಟದಲ್ಲಿ ದೀಪಕ್ ಪುನಿಯಾ, ಅಮೆರಿಕದ ಡೇವಿಡ್ ಮೊರಿಸ್ ವಿರುದ್ಧ 10-0 ಅಂತರದಲ್ಲಿ ಸೋಲಿಗೆ ಶರಣಾದರು. ಈಗ ಕಂಚಿನ ಪದಕಕ್ಕಾಗಿ ಹೋರಾಟಲಿದ್ದಾರೆ. ಈ ಮೂಲಕ ಪದಕದ ಆಸೆ ಜೀವಂತವಾಗಿದೆ. 

ಇದಕ್ಕೂ ಮೊದಲು ಪುರುಷರ 57 ಕೆ.ಜಿ ವಿಭಾಗದಲ್ಲಿ ರವಿಕುಮಾರ್ ದಹಿಯಾ ಪದಕ ಸುತ್ತಿಗೆ ಪ್ರವೇಶಿಸಿದ್ದರು. ಈ ಮೂಲಕ ಇತಿಹಾಸ ರಚಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು