ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಲಿಂಪಿಕ್ ನಡೆಯದಿದ್ದರೆ ಬೇರೆ ಯೋಜನೆ ಏನು?: ಐಒಸಿಯನ್ನು ಪ್ರಶ್ನಿಸಿದ ಚಾಂಪಿಯನ್

Last Updated 18 ಮಾರ್ಚ್ 2020, 7:56 IST
ಅಕ್ಷರ ಗಾತ್ರ
ADVERTISEMENT
""

ಟೊಕಿಯೋ:ಒಂದು ವೇಳೆ ಟೊಕಿಯೋಒಲಿಂಪಿಕ್‌ ನಡೆಯದೇ ಇದ್ದರೆ, ನಿಮ್ಮ ಮುಂದಿರುವ ಬೇರೆ ಆಯ್ಕೆ ಏನು ಎಂದು ಅಂತರರಾಷ್ಟ್ರೀಯ ಒಲಿಂಪಿಕ್‌ ಸಮಿತಿಯನ್ನು (ಐಒಸಿ) ಒಲಿಂಪಿಕ್‌ ಪದಕ ವಿಜೇತ ಮಹಿಳಾ ಅಥ್ಲೀಟ್‌ ಕ್ಯಾಥೆರಿನಾ ಸ್ಟೆಫಾನಿದಿ ಪ್ರಶ್ನಿಸಿದ್ದಾರೆ. ಗ್ರೀಸ್‌ ದೇಶದವರಾದಕ್ಯಾಥೆರಿನಾ, 2016ರಲ್ಲಿ ರಿಯೊ ಡಿ ಜನೈರೊದಲ್ಲಿ ನಡೆದ ಕೂಟದ ಪೋಲ್‌ವಾಲ್ಟ್‌ ಸ್ಪರ್ಧೆಯಲ್ಲಿ ಚಿನ್ನಕ್ಕೆ ಕೊರಳೊಡ್ಡಿದ್ದರು.

ಅಥ್ಲೀಟ್‌ಗಳು ಅಭ್ಯಾಸ ಮುಂದುವರಿಸಿ ಎಂದು ಐಒಸಿ ಸೂಚಿಸಿತ್ತು. ಎಲ್ಲೆಡೆ ಕೊರೊನಾ ವೈರಸ್‌ ಸೋಂಕು ಭೀತಿ ಆವರಿಸಿರುವ ಈ ಹೊತ್ತಿನಲ್ಲಿ ಐಒಸಿಯ ಈ ಸೂಚನೆಯು ಅಥ್ಲೀಟ್‌ಗಳನ್ನು ಸಂಕಷ್ಟಕ್ಕೆ ದೂಡಿದೆ. ಇದಕ್ಕೆ ಸಂಬಂಧಿಸಿದಂತೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಕ್ಯಾಥೆರಿನಾ, ‘ಒಲಿಂಪಿಕ್‌ ಮುಂದೂಡಿಕೆ ಇಲ್ಲ, ರದ್ದು ಮಾಡುವುದಿಲ್ಲ ಎಂದು ಹೇಳಲಾಗಿದೆ. ಆದರೆ, ಇದು (ಐಒಸಿ) ನಮ್ಮನ್ನು ಸಂಕಷ್ಟಕ್ಕೆ ದೂಡಿದೆ’ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

‘ಟೋಕಿಯೊ ಒಲಿಂಪಿಕ್‌ ನಡೆಯಬೇಕು ಎಂಬ ಬಯಕೆ ನಮಗೂ ಇದೆ. ಆದರೆ, ನಡೆಯದೇ ಇದ್ದರೆ ನಿಮ್ಮ ಬಳಿಯಿರುವ ‘ಪ್ಲಾನ್‌ ಬಿ’ ಏನು?ಏಕೆಂದರೆ, ಯೋಜನೆಯ ಸಾಧ್ಯತೆಯ ಬಗ್ಗೆ ತಿಳಿಯುವುದು ನಾವು ತರಬೇತಿ ಮುಂದುವರಿಸುವ ವಿಚಾರದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.ನಾವೀಗ ಅಪಾಯದ ನಡುವೆಯೂ ಅಭ್ಯಾಸ ನಡೆಸುತ್ತಿದ್ದೇವೆ. ಹೀಗಾಗಿ ಬೇರೆ ಯೋಜನೆಯ ಸಾಧ್ಯತೆಯ ಬಗ್ಗೆ ತಿಳಿದರೆ,ಇದೇ ಪರಿಸ್ಥಿತಿಯಲ್ಲಿ ಅಭ್ಯಾಸ ಮುಂದುವರಿಸಬೇಕೆ ಬೇಡವೆ ಎಂಬುದನ್ನುನಿರ್ಧರಿಸಿಕೊಳ್ಳುತ್ತೇವೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕ್ಯಾಥೆರಿನಾ ಸ್ಟೆಫಾನಿದಿ (ಟ್ವಿಟರ್‌ ಚಿತ್ರ)

ಆದರೆ, ನಿಗದಿಯಂತೆ ಕ್ರೀಡಾಕೂಟವನ್ನು ಆಯೋಜಿಸುವ ತನ್ನ ನಿರ್ಧಾರಕ್ಕೆಐಒಸಿ ಅಂಟಿಕೊಂಡಿದೆ. ಮಂಗಳವಾರ ನಡೆದ ಕಾರ್ಯಕಾರಿ ಸಮಿತಿ ಬಳಿಕ ಹೇಳಿಕೆ ಬಿಡುಗಡೆ ಮಾಡಿರುವ ಐಒಸಿ,‘ಟೋಕಿಯೊ ಒಲಿಂಪಿಕ್ಸ್‌ 2020 ಕ್ರೀಡೆಗಳನ್ನು ನಡೆಸುವುದಕ್ಕೆ ಐಒಸಿ ಪೂರ್ಣ ಬದ್ಧತೆ ಹೊಂದಿದೆ. ಕ್ರೀಡೆ ಆರಂಭವಾಗಲು ನಾಲ್ಕು ತಿಂಗಳಿಗೂ ಹೆಚ್ಚು ಅವಧಿ ಉಳಿದಿದೆ. ಈ ಹಂತದಲ್ಲಿ ಕಠಿಣ ನಿರ್ಧಾರಕ್ಕೆ ಬರುವಂಥ ತುರ್ತು ಇಲ್ಲ. ಈ ಹಂತದಲ್ಲಿ ಯಾವುದೇ ಉಹಾಪೋಹ ತಿರುಗುಬಾಣವಾಗಬಹುದು’ ಎಂದು ತಿಳಿಸಿದೆ.

ಜುಲೈ 24ರಿಂದ ಆಗಸ್ಟ್‌ 9ರ ವರೆಗೆ ಕ್ರೀಡಾಕೂಟವನ್ನು ನಡೆಸಲು ನಿರ್ಧರಿಸಲಾಗಿದೆ.

ಗ್ರೀಸ್‌ನಲ್ಲಿ ಇದುವರೆಗೆ 387 ಜನರಲ್ಲಿಕೋವಿಡ್‌–19 ದೃಢಪಟ್ಟಿವೆ. ಐವರು ಮೃತಪಟ್ಟಿದ್ದಾರೆ. ಜಗತ್ತಿನಾದ್ಯಂತ ಸುಮಾರು 1.75 ಲಕ್ಷಕ್ಕೂ ಹೆಚ್ಚು ಜನರಲ್ಲಿ ಕೋವಿಡ್‌–19 ಪತ್ತೆಯಾಗಿದೆ. 7 ಸಾವಿರಕ್ಕೂ ಹೆಚ್ಚು ಜನರು ಕಳೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT