ಸೋಮವಾರ, ಜನವರಿ 20, 2020
27 °C

ಮಹಿಳಾ ಕುಸ್ತಿಪಟುಗಳ ಅಮಾನತು

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ : ಲಖನೌದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಶಿಬಿರಕ್ಕೆ ಗೈರುಹಾಜರಾದ ಎಂಟು ಮಂದಿ ಮಹಿಳಾ ಕುಸ್ತಿಪಟುಗಳನ್ನು, ಭಾರತ ಕುಸ್ತಿ ಫೆಡರೇಷನ್‌ನ ಶಿಸ್ತು ಸಮಿತಿ ಒಂದು ವರ್ಷ ಅವಧಿಗೆ ಅಮಾನತು ಮಾಡಿದೆ.

‘ಈ ಕುಸ್ತಿಪಟುಗಳು ಶಿಬಿರಕ್ಕೆ ಬಂದರೂ ಟ್ರಯಲ್ಸ್‌ಗೆ ಮಾತ್ರ ಹಾಜ ರಾಗಿ ನಂತರ ವಾಪಸು ಹೋಗಿರುವ ಕಾರಣ ಅವರ ಮೇಲೆ ಕ್ರಮ ಕೈಗೊಳ್ಳಲಾಗಿದೆ’ ಎಂದು ಫೆಡರೇಷನ್‌ ಸಹಾಯಕ ಕಾರ್ಯದರ್ಶಿ ವಿನೋದ್‌ ತೋಮಾರ್‌ ತಿಳಿಸಿದರು.

ಅಮಾತುಗೊಂಡ ಕುಸ್ತಿಪಟುಗಳು: ಅಂಕುಶ್‌ (53 ಕೆ.ಜಿ ವಿಭಾಗ)), ರೋನಕ್‌ (64 ಕೆ.ಜಿ), ಸುಮನ್‌ (68 ಕೆ.ಜಿ)– ಎಲ್ಲರೂ ಹರಿಯಾಣದವರು. ಬಂಟಿ (55 ಕೆ.ಜಿ) ಮತ್ತು ಸುಷ್ಮಾ ಶೌಕೀನ್‌ (57 ಕೆ.ಜಿ) ಇಬ್ಬರೂ ದೆಹಲಿಯವರು. ಶೀತಲ್‌ ತೋಮಾರ್‌ (50 ಕೆ.ಜಿ, ರಾಜಸ್ತಾನ), ರೇಷ್ಮಾ ಮಾನೆ (69 ಕೆ.ಜಿ, ಮಹಾರಾಷ್ಟ್ರ),
ನಿಕ್ಕಿ (76 ಕೆ.ಜಿ, ರೈಲ್ವೇಸ್‌).

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು