ಗುರುವಾರ , ಜನವರಿ 27, 2022
21 °C
ಆಸ್ಟ್ರೇಲಿಯನ್ ಓಪನ್‌: ‘ಲಸಿಕೆ’ ಪ್ರಕರಣದಲ್ಲಿ ಆಸ್ಟ್ರೇಲಿಯಾ ಸರ್ಕಾರ ಹೇಳಿಕೆ

‘ಜೊಕೊವಿಚ್‌ ಪ್ರವೇಶ ಖಚಿತ ಇರಲಿಲ್ಲ’: ಆಸ್ಟ್ರೇಲಿಯಾ ಸರ್ಕಾರ ಹೇಳಿಕೆ

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

Prajavani

ಮೆಲ್ಬರ್ನ್‌/ಸಿಡ್ನಿ: ಕೋವಿಡ್‌–19ಕ್ಕೆ ಸಂಬಂಧಿಸಿದ ಲಸಿಕೆ ಹಾಕಿಸುವುದರಿಂದ ವಿನಾಯಿತಿ ಲಭಿಸಿದರೂ ದೇಶದೊಳಗೆ ಪ್ರವೇಶಕ್ಕೆ ನಿರ್ಬಂಧ ಇಲ್ಲ ಎಂದು ಟೆನಿಸ್ ಆಟಗಾರ ನೊವಾಕ್ ಜೊಕೊವಿಚ್ ಅವರಿಗೆ ಭರವಸೆ ನೀಡಿರಲಿಲ್ಲ ಎಂದು ಆಸ್ಟ್ರೇಲಿಯಾ ಭಾನುವಾರ ತಿಳಿಸಿದೆ.

ನ್ಯಾಯಾಲಯಕ್ಕೆ ನೀಡಿರುವ ಮಾಹಿತಿಯಲ್ಲಿ ವಕೀಲರು ಈ ವಿಷಯ ತಿಳಿಸಿದ್ದಾರೆ.

ಆಸ್ಟ್ರೇಲಿಯನ್‌ ಓಪನ್ ಟೂರ್ನಿಯಲ್ಲಿ ಪಾಲ್ಗೊಳ್ಳುವ ಎಲ್ಲರೂ ಲಸಿಕೆ ಹಾಕಿಸಿಕೊಳ್ಳಬೇಕು ಎಂಬ ನಿರ್ಬಂಧವಿದೆ. ಆದರೆ ವಿಶ್ವದ ಒಂದನೇ ನಂಬರ್ ಆಟಗಾರ, ಸರ್ಬಿಯಾದ ನೊವಾಕ್ ಜೊಕೊವಿಚ್ ಲಸಿಕೆ ಹಾಕಿಸಿಕೊಳ್ಳಲು ಸಿದ್ಧ ಇರಲಿಲ್ಲ. ಟೂರ್ನಿಯಲ್ಲಿ ಆಡಲು ಅವರಿಗೆ ವೈದ್ಯಕೀಯ ತಂಡ ವಿನಾಯಿತಿ ನೀಡಿತ್ತು. ಆದರೆ ದೇಶಕ್ಕೆ ಕಾಲಿಡುತ್ತಿದ್ದಂತೆ ಅವರನ್ನು ವಶಕ್ಕೆ ಪಡೆದುಕೊಂಡಿದ್ದ ಅಧಿಕಾರಿಗಳು ವಿಸಾ ರದ್ದುಮಾಡಿ ಪಾರ್ಕ್‌ ಹೋಟೆಲ್‌ನಲ್ಲಿ ಇರಿಸಿದ್ದಾರೆ. 

ಈ ಹಿನ್ನೆಲೆಯಲ್ಲಿ ಜೊಕೊವಿಚ್ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಸೋಮವಾರ ವಿಚಾರಣೆ ನಡೆಯಲಿರುವ ಹಿನ್ನೆಲೆಯಲ್ಲಿ ವಕೀಲರು ಮಾಹಿತಿ ಸಲ್ಲಿಸಿದ್ದಾರೆ. ಜೊಕೊವಿಚ್‌ ಅವರು ಲಸಿಕೆಗೆ ಸಂಬಂಧಿಸಿದ ಮಾಹಿತಿ ನೀಡಲು ಅಥವಾ ವೈದ್ಯಕೀಯ ವಿನಾಯಿತಿ ಪಡೆಯಲು ಕಾರಣವೇನೆಂದು ತಿಳಿಸಲು ಪ್ರಯತ್ನಿಸುವ ಸಾಧ್ಯತೆ ಇದೆ. 

‘ನೊವಾಕ್ ಪ್ರಕರಣದಿಂದ ಟೆನಿಸ್‌ಗೆ ನಷ್ಟ’

ನೊವಾಕ್ ಜೊಕೊವಿಚ್ ಅವರ ಲಸಿಕೆ ಮತ್ತು ವೀಸಾ ಪ್ರಕರಣದಿಂದ ಟೆನಿಸ್‌ಗೆ ಕೆಟ್ಟ ಹೆಸರು ಬಂದಿದೆ ಎಂದು ವಿಶ್ವದ ಮಾಜಿ ಒಂದನೇ ನಂಬರ್ ಆಟಗಾರ ಬ್ರಿಟನ್‌ನ ಆ್ಯಂಡಿ ಮರ್ರೆ ಅಭಿಪ್ರಾಯಪಟ್ಟಿದ್ದಾರೆ.   

‘ಜೊಕೊವಿಚ್ ಪ್ರಕರಣದಿಂದ ಎಲ್ಲರಿಗೂ ಬೇಸರವಾಗಿದೆ. ಜೊಕೊವಿಚ್ ಈಗ ಚೆನ್ನಾಗಿದ್ದಾರೆ ಎಂಬುದು ನನ್ನ ವಿಶ್ವಾಸ. ಅವರನ್ನು ನಾನು ಚೆನ್ನಾಗಿ ಬಲ್ಲೆ. ವರ್ಷಗಳಿಂದ ಅವರೊಂದಿಗೆ ಉತ್ತಮ ಸಂಬಂಧ ಹೊಂದಿದ್ದೇನೆ. ಭಾಗಿಯಾಗಿರುವ ಯಾರಿಗೂ ಈ ಪ್ರಕರಣದ ಶೋಭೆ ತರುವಂಥಾದ್ದಲ್ಲ’ ಎಂದು ಅವರು ಹೇಳಿದ್ದಾರೆ.

​ 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು