ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಟಿಪಿ ರ‍್ಯಾಂಕಿಂಗ್‌ | 19 ವರ್ಷಗಳ ಬಳಿಕ ಅಗ್ರ 100ರ ಪಟ್ಟಿಯಿಂದ ಜಾರಿದ ಪೇಸ್

Last Updated 12 ನವೆಂಬರ್ 2019, 16:00 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ಅನುಭವಿ ಟೆನಿಸ್‌ ಪಟು ಲಿಯಾಂಡರ್‌ ಪೇಸ್‌ ಅವರು ಕಳೆದ 19 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಎಟಿಪಿ ಡಬಲ್ಸ್‌ ರ‍್ಯಾಂಕಿಂಗ್‌ನ ಅಗ್ರ 100 ಪಟ್ಟಿಯಲ್ಲಿ ಸ್ಥಾನ ಪಡೆದುಕೊಳ್ಳುವಲ್ಲಿ ವಿಫಲರಾಗಿದ್ದಾರೆ.

ಖಾತೆಯಲ್ಲಿ ಒಟ್ಟು 856 ಅಂಕಗಳನ್ನು ಹೊಂದಿರುವ ಪೇಸ್‌ 101ನೇ ಸ್ಥಾನದಲ್ಲಿದ್ದು, ಭಾರತದ ಆಟಗಾರರ ಪೈಕಿ ಉತ್ತಮ ರ್ಯಾಂಕಿಂಗ್‌ ಹೊಂದಿರುವ ನಾಲ್ಕನೇ ಆಟಗಾರ ಎನಿಸಿದ್ದಾರೆ. ರೋಹನ್‌ ಬೋಪಣ್ಣ(38), ದಿವಿಜ್‌ ಶರಣ್‌(46), ಪೂರವ್‌ ರಾಜ(93) ಪೇಸ್‌ಗಿಂತ ಮುಂದಿದ್ದಾರೆ.

2010ರಲ್ಲಿ ಪೇಸ್‌ ಅಗ್ರ ಹತ್ತರ ಬಳಗದಿಂದ ಕೆಳಗಿಳಿದಿದ್ದರು. ನಂತರದ ಎರಡು ವರ್ಷ ಕಳೆಯುವುದರೊಳಗೆ ಪೇಸ್‌ ಹೆಸರು 50ರ ಪಟ್ಟಿಯಿಂದಲೂ ದೂರಾಗಿತ್ತು.46 ವರ್ಷದ ಆಟಗಾರ ಅಕ್ಟೋಬರ್‌2000ದಲ್ಲಿ 118ನೇ ಸ್ಥಾನದಲ್ಲಿದ್ದರು. ಅದಾದ ಬಳಿಕ 100 ಪಟ್ಟಿಯಿಂದ ಕೆಳಗಿಳಿದಿರಲಿಲ್ಲ.

ಮಹೇಶ್‌ ಭೂಪತಿ ಜೊತೆಗೂಡಿ ಕಣಕ್ಕಿಳಿಯುತ್ತಿದ್ದ ಪೇಸ್‌ 1990–2000ದಲ್ಲಿಪುರುಷರ ಡಬಲ್ಸ್‌ನಲ್ಲಿ ಪ್ರಾಬಲ್ಯ ಮೆರೆದಿದ್ದರು. ಪೇಸ್‌ ಇದುವರೆಗೆ ಒಟ್ಟು 18 ಗ್ರಾಂಡ್‌ ಸ್ಲಾಂ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT