ಬುಧವಾರ, ಜೂನ್ 16, 2021
22 °C

ಅಮೆರಿಕ ಓಪನ್‌ ಟೆನಿಸ್‌ ಟೂರ್ನಿಯಿಂದ ಹಿಂದೆ ಸರಿದ ಕಿರ್ಗಿಯೋಸ್‌

ಎಪಿ Updated:

ಅಕ್ಷರ ಗಾತ್ರ : | |

Prajavani

ಸಿಡ್ನಿ: ಕೊರೊನಾ ವೈರಾಣು ಸೋಂಕಿನ ಕಾರಣ ಉಂಟಾದ ಬಿಕ್ಕಟ್ಟು ಹಾಗೂ ಸೋಂಕಿನಿಂದ ಮೃತಪಟ್ಟ ಸಾವಿರಾರು ಅಮೆರಿಕನ್ನರ ಗೌರವಾರ್ಥ ಅಮೆರಿಕ ಓಪನ್‌ ಟೆನಿಸ್ ಟೂರ್ನಿಯಿಂದ ಹಿಂದೆ ಸರಿಯುತ್ತಿರುವುದಾಗಿ ನಿಕ್‌ ಕಿರ್ಗಿಯೋಸ್‌ ಹೇಳಿದ್ದಾರೆ.

ಈ ಕುರಿತು ಭಾನುವಾರ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿರುವ ಅವರು, ಟೂರ್ನಿಯನ್ನು ಆಯೋಜಿಸುತ್ತಿರುವ ಅಮೆರಿಕ ಟೆನಿಸ್‌ ಸಂಸ್ಥೆಯ ಕ್ರಮಕ್ಕೆ ನನ್ನದೇನೂ ತಕರಾರು ಇಲ್ಲ ಎಂದಿದ್ದಾರೆ.

ಕೋವಿಡ್‌–19 ಪಿಡುಗಿನ ಕಾರಣ ಸುರಕ್ಷತೆ ಮತ್ತು ಆರೋಗ್ಯದ ಬಗ್ಗೆಯೂ ಆಸ್ಟ್ರೇಲಿಯಾದ ಆಟಗಾರ ಕಳವಳ ವ್ಯಕ್ತಪಡಿಸಿದ್ದಾರೆ. ವಿಶ್ವದ ಅಗ್ರ ಕ್ರಮಾಂಕದ ಆಟಗಾರ್ತಿ ಆಸ್ಟ್ರೇಲಿಯಾದ ಆ್ಯಷ್ಲೆ ಬಾರ್ಟಿ ಕೂಡ ಟೂರ್ನಿಯಲ್ಲಿ ಆಡುವುದಿಲ್ಲ ಎಂದು ಹೇಳಿದ್ದಾರೆ.

‘ಕ್ರೀಡಾ ಚಟುವಟಿಕೆಗಳು ಪುನರರಾಂಭಿಸಬಹುದು. ಹಾಗೆಯೇ ಕುಸಿದುಹೋದ ಆರ್ಥಿಕತೆಯನ್ನೂ ಮೇಲೆತ್ತಬಹುದು. ಆದರೆ ಕಳೆದುಕೊಂಡ ಜೀವಗಳನ್ನು ಮರುಪಡೆಯಲು ಎಂದಿಗೂ ಸಾಧ್ಯವಿಲ್ಲ‘ ಎಂದು ಕಿರ್ಗಿಯೋಸ್‌ ನುಡಿದರು.

ಕೋವಿಡ್‌ ಪಿಡುಗಿನ ನಡುವೆಯೂ ಪ್ರದರ್ಶನ ಪಂದ್ಯಗಳನ್ನು ಆಯೋಜಿಸಿಸುತ್ತಿರುವವರ ವಿರುದ್ಧ ಕಿರ್ಗಿಯೋಸ್‌ ಕಿಡಿ ಕಾರಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು