ಕಚನೊವ್‌ ಮುಡಿಗೆ ಕಿರೀಟ

7
ಪ್ಯಾರಿಸ್‌ ಮಾಸ್ಟರ್ಸ್‌ ಟೆನಿಸ್‌: ಜೊಕೊವಿಚ್‌ಗೆ ಆಘಾತ

ಕಚನೊವ್‌ ಮುಡಿಗೆ ಕಿರೀಟ

Published:
Updated:
Deccan Herald

ಪ್ಯಾರಿಸ್‌: ರಷ್ಯಾದ 22 ವರ್ಷ ವಯಸ್ಸಿನ ಆಟಗಾರ ಕರೆನ್‌ ಕಚನೊವ್‌, ಭಾನುವಾರ ರಾತ್ರಿ ಸರ್ಬಿಯಾದ ನೊವಾಕ್‌ ಜೊಕೊವಿಚ್‌ಗೆ ಆಘಾತ ನೀಡಿ ಪ್ಯಾರಿಸ್‌ ಮಾಸ್ಟರ್ಸ್‌ ಟೆನಿಸ್‌ ಟೂರ್ನಿಯ ಕಿರೀಟ ಮುಡಿಗೇರಿಸಿಕೊಂಡರು.

ಪುರುಷರ ಸಿಂಗಲ್ಸ್‌ ವಿಭಾದ ಫೈನಲ್‌ನಲ್ಲಿ ಕರೆನ್‌ 7–5, 6–4ರ ನೇರ ಸೆಟ್‌ಗಳಿಂದ ಗೆದ್ದರು. ಈ ಹೋರಾಟ ಒಂದು ಗಂಟೆ 37 ನಿಮಿಷ ನಡೆಯಿತು.

ಐದನೇ ಪ್ರಶಸ್ತಿಯ ಕನಸಿನೊಂದಿಗೆ ಕಣಕ್ಕಿಳಿದಿದ್ದ ಜೊಕೊವಿಚ್‌ಗೆ ಮೊದಲ ಸೆಟ್‌ನಲ್ಲೇ ಹಿನ್ನಡೆ ಎದುರಾಯಿತು. ಶರವೇಗದ ಸರ್ವ್‌ ಮತ್ತು ಆಕರ್ಷಕ ಹಿಂಗೈ ಹೊಡೆತಗಳ ಮೂಲಕ ಮಿಂಚಿದ ಕಚನೊವ್‌ 3–1ರ ಮುನ್ನಡೆ ಗಳಿಸಿದರು. ನಂತರವೂ ಗರ್ಜಿಸಿದ ಅವರು ಸೆಟ್‌ ಗೆದ್ದು ಸಂಭ್ರಮಿಸಿದರು.

ಎರಡನೇ ಸೆಟ್‌ನ ಶುರುವಿನಲ್ಲಿ ಜೊಕೊವಿಚ್‌ ಮಿಂಚಿದರು. ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಸರ್ಬಿಯಾದ ಆಟಗಾರ 2–1ರ ಮುನ್ನಡೆ ಪಡೆದಿದ್ದರು.  ನಂತರ ಕರೆನ್‌ ಪಾರಮ್ಯ ಮೆರೆದರು. ಕ್ರಾಸ್‌ಕೋರ್ಟ್‌ ಸ್ಮ್ಯಾಷ್‌ಗಳ ಮೂಲಕ ಗೇಮ್‌ ಜಯಿಸಿ ಜೊಕೊವಿಚ್‌ ಅವರ ಪ್ರಶಸ್ತಿಯ ಕನಸಿಗೆ ತಣ್ಣೀರು ಸುರಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !