ಶನಿವಾರ, ಮೇ 21, 2022
22 °C
ಫ್ರೆಂಚ್ ಓಪನ್ ಟೆನಿಸ್ ಟೂರ್ನಿ: ಮಿಶ್ರ ಡಬಲ್ಸ್‌ನಲ್ಲಿ ಬ್ರಿಟನ್‌ಗೆ ಪ್ರಶಸ್ತಿ ತಂದುಕೊಟ್ಟ ಸಲಿಸ್ಬರಿ

ಫ್ರೆಂಚ್ ಓಪನ್ ಟೆನಿಸ್: ನಡಾಲ್–ಜೊಕೊವಿಚ್ ಹಣಾಹಣಿ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಪ್ಯಾರಿಸ್‌: ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ಕಳೆದ ಬಾರಿ ಫೈನಲ್‌ನಲ್ಲಿ ಸೆಣಸಿದ್ದ ಸ್ಪೇನ್‌ನ ರಫೆಲ್ ನಡಾಲ್ ಮತ್ತು ಸರ್ಬಿಯಾದ ನೊವಾಕ್ ಜೊಕೊವಿಚ್ ಅವರು ಈ ಬಾರಿ ಸೆಮಿಫೈನಲ್‌ನಲ್ಲಿ ಮುಖಾಮುಖಿಯಾಗಲಿದ್ದಾರೆ. ಟೆನಿಸ್‌ ಲೋಕದಲ್ಲಿ ಕುತೂಹಲ ಕೆರಳಿಸಿರುವ ಈ ಪಂದ್ಯ ಶುಕ್ರವಾರ ನಡೆಯಲಿದೆ. 

ಬುಧವಾರ ರಾತ್ರಿ ನಡೆದ ಕ್ವಾರ್ಟರ್ ಫೈನಲ್‌ನಲ್ಲಿ 6–3, 4–6, 6–4, 6–0ಯಲ್ಲಿ ಅರ್ಜೆಂಟೀನಾದ ಡೀಗೊ ಸ್ವಾರ್ಟ್ಸ್‌ಮನ್‌ ಅವರನ್ನು ಮಣಿಸಿದ್ದರೆ ಜೊಕೊವಿಚ್‌ 6–3, 6–2, 6–7(5/7), 7–5ರಲ್ಲಿ ಇಟಲಿಯ ಮಟಿಯೊ ಬೆರೆಟಿನಿ ಎದುರು ಗೆದ್ದಿದ್ದರು.

2006ರಲ್ಲಿ ಇದೇ ಅಂಗಣದಲ್ಲಿ ಈ ಇಬ್ಬರು ಆಟಗಾರರು ಮೊದಲ ಬಾರಿ ಸೆಣಸಿದ್ದರು. ನಂತರ ವಿವಿಧ ಟೂರ್ನಿಗಳಲ್ಲಿ ಒಟ್ಟು 57 ಬಾರಿ ಮುಖಾಮುಖಿಯಾಗಿದ್ದಾರೆ. ವಿಶ್ವ ರ‍್ಯಾಂಕಿಂಗ್‌ನಲ್ಲಿ ಮೊದಲ ಸ್ಥಾನದಲ್ಲಿರುವ ಜೊಕೊವಿಚ್ ಈ ಬಾರಿ ಫ್ರೆಂಚ್ ಓಪನ್ ಟೂರ್ನಿಯ ಚಾಂಪಿಯನ್ ಆದರೆ ಎಲ್ಲ ಗ್ರ್ಯಾನ್‌ಸ್ಲಾಂ ಟೂರ್ನಿಗಳಲ್ಲಿ ಎರಡು ಬಾರಿ ಪ್ರಶಸ್ತಿ ಗೆದ್ದ ಮೊದಲ ಆಟಗಾರ ಎನಿಸಿಕೊಳ್ಳಲಿದ್ದಾರೆ. ಆದರೆ ಅದಕ್ಕೆ ಸೆಮಿಫೈನಲ್‌ನಲ್ಲಿ ಜಯ ಗಳಿಸಬೇಕಾಗಿದೆ.

ಎರಡನೇ ಶ್ರೇಯಾಂಕಿತ ನಡಾಲ್ ದಾಖಲೆಯ 21ನೇ ಗ್ರ್ಯಾನ್‌ಸ್ಲಾಂ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದಾರೆ. ಆ ಕನಸು ನನಸಾಗಬೇಕಾದರೆ ಶುಕ್ರವಾರದ ಪಂದ್ಯದಲ್ಲಿ ಜಯ ಅನಿವಾರ್ಯ.

ಸಲಿಸ್ಬರಿ–ಕ್ರೌಜಿಕ್ ಜೋಡಿಗೆ ಪ್ರಶಸ್ತಿ

ಜೋ ಸಲಿಸ್ಬರಿ 39 ವರ್ಷಗಳ ನಂತರ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಮಿಶ್ರ ಡಬಲ್ಸ್‌ ವಿಭಾಗದಲ್ಲಿ ಪ್ರಶಸ್ತಿ ಗೆದ್ದ ಬ್ರಿಟನ್‌ನ ಮೊದಲ ಆಟಗಾರ ಎನಿಸಿದರು. ಅಮೆರಿಕದ ದ್ರೆಸಿರೆ ಕ್ರೌಜಿಕ್ ಜೊತೆಗೂಡಿ ಅವರು ರಷ್ಯಾ ಜೋಡಿ ಅಸ್ಲಾನ್ ಕರತ್ಸೇವ ಮತ್ತು ಎಲಿನಾ ವೆಸ್ನಿನಾ ವಿರುದ್ಧ 2-6, 6-4, 10-5ರಲ್ಲಿ ಜಯ ಗಳಿಸಿದರು.

29 ವರ್ಷದ ಸಲಿಸ್ಬರಿ ಅವರಿಗೆ ಇದು ಎರಡನೇ ಗ್ರ್ಯಾನ್‌ಸ್ಲಾಂ ಪ್ರಶಸ್ತಿಯಾಗಿದೆ. ಕಳೆದ ವರ್ಷದ ಆಸ್ಟ್ರೇಲಿಯನ್ ಓಪನ್‌ನ ಪುರುಷರ ಡಬಲ್ಸ್‌ನಲ್ಲಿ ರಾಜೀವ್ ರಾಮ್ ಜೊತೆಗೂಡಿ ಅವರು ಪ್ರಶಸ್ತಿ ಗಳಿಸಿದ್ದರು. 27 ವರ್ಷದ ಕ್ರೌಜಿಕ್ ಕಳೆದ ವರ್ಷ ರೊಲ್ಯಾಂಡ್ ಗ್ಯಾರೋಸ್‌ನಲ್ಲಿ ಮಹಿಳಾ ಡಬಲ್ಸ್ ವಿಭಾಗದಲ್ಲಿ ರನ್ನರ್ ಅಪ್‌ ಆಗಿದ್ದರು. ಅಲೆಕ್ಸಾ ಗ್ವರಾಚಿ ಜೊತೆ ಅವರು ಆಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು