ಪ್ಯಾರಿಸ್: ವಿಶ್ವದ ಅಗ್ರಮಾನ್ಯ ಆಟಗಾರ ಯಾನಿಕ್ ಸಿನ್ನರ್ ಅವರು ಸರ್ಬಿಯಾದ ದಿಗ್ಗಜ ನೊವಾಕ್ ಜೊಕೊವಿಚ್ ಅವರನ್ನು ಮಣಿಸಿ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಫೈನಲ್ ತಲುಪಿದರು. ಇಟಲಿಯ ತಾರೆ ಸಿನ್ನರ್ ಅವರು ಭಾನುವಾರ ನಡೆಯುವ ಫೈನಲ್ನಲ್ಲಿ ಹಾಲಿ ಚಾಂಪಿಯನ್ ಕಾರ್ಲೋಸ್ ಅಲ್ಕರಾಜ್ ಅವರನ್ನು ಎದುರಿಸಲಿದ್ದಾರೆ.

ಶುಕ್ರವಾರ ರಾತ್ರಿ ನಡೆದ ಪುರುಷರ ಸಿಂಗಲ್ಸ್ ಸೆಮಿಫೈನಲ್ನಲ್ಲಿ 23 ವರ್ಷ ವಯಸ್ಸಿನ ಸಿನ್ನರ್ 6-4, 7-5, 7-6(3)ರಲ್ಲಿ ನೇರ ಸೆಟ್ಗಳಿಂದ ಆರನೇ ಶ್ರೇಯಾಂಕದ ಜೊಕೊವಿಚ್ ಅವರನ್ನು ಹಿಮ್ಮೆಟ್ಟಿಸಿ ರೋಲ್ಯಾಂಡ್ ಗ್ಯಾರೋಸ್ನಲ್ಲಿ ಮೊದಲ ಬಾರಿ ಫೈನಲ್ ತಲುಪಿದರು. ದಾಖಲೆಯ 25ನೇ ಗ್ರ್ಯಾನ್ಸ್ಲಾಮ್ ಕಿರೀಟದ ನಿರೀಕ್ಷೆಯಲ್ಲಿದ್ದ 38 ವರ್ಷ ವಯಸ್ಸಿನ ಜೊಕೊವಿಚ್ಗೆ ನಿರಾಸೆಯಾಯಿತು.

ಅದ್ಭುತ ಲಯದಲ್ಲಿರುವ ಸಿನ್ನರ್ ಒಂದೂ ಸೆಟ್ ಕಳೆದುಕೊಳ್ಳದೆ ಫೈನಲ್ ತಲುಪಿದ್ದು, ನಾಲ್ಕನೇ ಗ್ರ್ಯಾನ್ಸ್ಲಾಮ್ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದ್ದಾರೆ. 1968ರಲ್ಲಿ ಪ್ರಾರಂಭವಾದ ಓಪನ್ ಯುಗದಲ್ಲಿ 1976ರ ಚಾಂಪಿಯನ್ ಆ್ಯಡ್ರಿಯಾನೊ ಪನಟ್ಟಾ ನಂತರ ಇಲ್ಲಿ ಫೈನಲ್ ತಲುಪಿದ ಇಟಲಿಯ ಎರಡನೇ ಆಟಗಾರ ಎಂಬ ಹಿರಿಮೆಗೆ ಸಿನ್ನರ್ ಪಾತ್ರವಾಗಿದ್ದಾರೆ.

ವಿದಾಯದ ಪಂದ್ಯ?: ರೋಲ್ಯಾಂಡ್ ಗ್ಯಾರೋಸ್ನಲ್ಲಿ ಇದು ತನ್ನ ಕೊನೆಯ ಪಂದ್ಯವಾಗಬಹುದು ಎಂದು ಮೂರು ಬಾರಿಯ ಚಾಂಪಿಯನ್ ಜೊಕೊವಿಕ್ ಭಾವುಕರಾಗಿ ಹೇಳಿದರು. ಪಂದ್ಯದ ತಕ್ಷಣ ಕೈಗೆ ಚುಂಬಿಸಿ ನಂತರ ಅಂಕಣ ಸ್ಪರ್ಶಿಸುವ ಮೂಲಕ ಇದು ವಿದಾಯದ ಪಂದ್ಯವೆಂಬ ಸಂಕೇತ ರವಾನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.