ಮಂಗಳವಾರ, ಅಕ್ಟೋಬರ್ 26, 2021
23 °C

ಟೆನಿಸ್‌: ಸೋಹಾ, ಆಕಾಂಕ್ಷಾ ಜೋಡಿಗೆ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಸ್ಥಳೀಯ ಪ್ರತಿಭೆ ಸೋಹಾ ಸಾದಿಕ್ ಮತ್ತು ಮಹಾರಾಷ್ಟ್ರದ ಆಕಾಂಕ್ಷಾ ಜೋಡಿ ಇಲ್ಲಿ ನಡೆದ ಎಐಟಿಎ ಆಶ್ರಯದ ಪಿಬಿಐ–ಸಿಎಸ್‌ಇ ಮಹಿಳೆಯರ ಟೆನಿಸ್ ಟೂರ್ನಿಯ ಡಬಲ್ಸ್ ವಿಭಾಗದ ಪ್ರಶಸ್ತಿ ಗೆದ್ದುಕೊಂಡರು.

ರಾಜ್ಯ ಟೆನಿಸ್ ಸಂಸ್ಥೆ ಆಯೋಜಿಸಿರುವ ಟೂರ್ನಿಯಲ್ಲಿ ಶುಕ್ರವಾರ ನಡೆದ ಫೈನಲ್‌ ಪಂದ್ಯದಲ್ಲಿ ಅಗ್ರ ಶ್ರೇಯಾಂಕದ ಜೋಡಿ ತಮಿಳುನಾಡಿನ ಸಂಹಿತಾ ಸಾಯಿ ಮತ್ತು ಅವಂತಿಕಾ ಸಾಯಿ ಅವರನ್ನು 6-0, 6-2ರಲ್ಲಿ ಸೋಹಾ–ಆಕಾಂಕ್ಷಾ ಮಣಿಸಿದರು.  

ಶನಿವಾರ ನಡೆಯಲಿರುವ ಸಿಂಗಲ್ಸ್‌ನಲ್ಲಿ ಸೋಹಾ ಮತ್ತು ಆಕಾಂಕ್ಷಾ ಪ್ರಶಸ್ತಿಗಾಗಿ ಪರಸ್ಪರ ಸೆಣಸುವರು. ಪಡುಕೋಣೆ–ದ್ರಾವಿಡ್ ಸೆಂಟರ್ ಫಾರ್ ಸ್ಪೋರ್ಟ್ಸ್ ಎಕ್ಸಲೆನ್ಸ್‌ ಆವರಣದಲ್ಲಿ ನಡೆದ ಸೆಮಿಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಮತ್ತು ಅಗ್ರ ಶ್ರೇಯಾಂಕದ ಸೋಹಾ ನಾಲ್ಕನೇ ಶ್ರೇಯಾಂಕದ ಆಟಗಾರ್ತಿ ಮಹಾರಾಷ್ಟ್ರದ ಪೂಜಾ ಇಂಗಳೆ ವಿರುದ್ಧ 7-6, 6-2ರಲ್ಲಿ ಜಯ ಗಳಿಸಿದರು. 

ಸಂಹಿತಾ ಸಾಯಿ ವಿರುದ್ಧ ನಡೆದ ನಾಲ್ಕರ ಘಟ್ಟದ ಪಂದ್ಯದಲ್ಲಿ ಆಕಾಂಕ್ಷಾ 6-0, 6-2ರಲ್ಲಿ ಗೆಲುವು ಸಾಧಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.