ಸೋಮವಾರ, ಜುಲೈ 26, 2021
26 °C

ತನಿಖೆಗೆ ಅಸಹಕಾರ: ಟೆನಿಸ್‌ ಅಂಪೈರ್ ಅಮಾನತು

ಎಪಿ Updated:

ಅಕ್ಷರ ಗಾತ್ರ : | |

Prajavani

ಲಂಡನ್‌: ಪಂದ್ಯದ ಸ್ಕೋರ್‌ ತಿರುಚುವಂತೆ ಅಪರಿಚಿತ ವ್ಯಕ್ತಿಗಳು ತಮಗೆ ಆಮಿಷ ಒಡ್ಡಿದ್ದರ ಕುರಿತು ಮಾಹಿತಿ ನೀಡದ ಹಾಗೂ ತನಿಖೆಗೆ ಅಸಹಕಾರ ತೋರಿದ ಕಾರಣ ಟೆನಿಸ್‌ ಅಂಪೈರ್‌ ಅರ್ಮಾಂಡೊ ಬೆಲಾರ್ಡಿ ಗೊಂಜಾಲೆಜ್‌ ಅವರನ್ನು ಅಮಾನತು ಮಾಡಲಾಗಿದೆ.

ಅವರು ಇನ್ನು ಎರಡೂವರೆ ವರ್ಷ ಟೆನಿಸ್‌ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬಾರದೆಂದು ಟೆನಿಸ್‌ ಇಂಟಿಗ್ರಿಟಿ ಯೂನಿಟ್ (ಟಿಐಯು)‌ ಶುಕ್ರವಾರ ತಿಳಿಸಿದೆ.

ವೆನಿಜುವೆಲಾದ 40 ವರ್ಷ ವಯಸ್ಸಿನ ಅರ್ಮಾಂಡೊ, 2017 ಮತ್ತು 2018ರ ಅಮೆರಿಕ ಓಪನ್‌ ಹಾಗೂ 2016ರಲ್ಲಿ ಬ್ರೆಜಿಲ್‌ನ ರಿಯೊ ಡಿ ಜನೈರೊದಲ್ಲಿ ಆಯೋಜನೆಯಾಗಿದ್ದ ಪ್ಯಾರಾಲಿಂಪಿಕ್ಸ್‌ನಲ್ಲಿ ‘ಚೇರ್‌ ಅಂಪೈರ್‌’ ಆಗಿ ಕಾರ್ಯನಿರ್ವಹಿಸಿದ್ದರು.

‘ತಮಗೆ ನೀಡಿರುವ ಡಿಜಿಟಲ್‌ ಡಿವೈಸ್‌ನ ಸಹಾಯದಿಂದ ಪಂದ್ಯದ ಸ್ಕೋರ್‌ ತಿರುಚುವಂತೆ 2018ರಲ್ಲಿ ಬೆಲಾರ್ಡಿ ಅವರನ್ನು ಅಪರಿಚಿತ ವ್ಯಕ್ತಿಗಳು ಎರಡು ಬಾರಿ ಸಂಪರ್ಕಿಸಿದ್ದರು. ಅದಕ್ಕೆ ಬೆಲಾರ್ಡಿ ಒಪ್ಪಿರಲಿಲ್ಲ. ಆದರೆ ಆ ವ್ಯಕ್ತಿಗಳು ತಮ್ಮನ್ನು ಭ್ರಷ್ಟಾಚಾರಕ್ಕೆ ಪ್ರೇರೇಪಿಸಿದ್ದರ ಕುರಿತ ಮಾಹಿತಿಯನ್ನು ಅವರು ನಮಗೆ ನೀಡಿರಲಿಲ್ಲ. ಇದು ಅಕ್ಷಮ್ಯ ಅಪರಾಧ. ಭ್ರಷ್ಟಾಚಾರ ತಡೆ ನಿಯಮ ಉಲ್ಲಂಘಿಸಿರುವ ಕಾರಣ ಅವರನ್ನು ಅಮಾನತು ಮಾಡಲಾಗಿದೆ. ಜೊತೆಗೆ ₹3.81 ಲಕ್ಷ ದಂಡವನ್ನೂ ವಿಧಿಸಲಾಗಿದೆ’ ಎಂದು ಟಿಐಯು ಹೇಳಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು