ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ ಓಪನ್ ಟೆನಿಸ್‌: 19ನೇ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಗೆದ್ದ ರಫೆಲ್‌

Last Updated 9 ಸೆಪ್ಟೆಂಬರ್ 2019, 6:51 IST
ಅಕ್ಷರ ಗಾತ್ರ

ನ್ಯೂಯಾರ್ಕ್: ಅಮೆರಿಕ ಓಪನ್ ಟೆನಿಸ್‌ ಟೂರ್ನಿಯ ಸಿಂಗಲ್ಸ್‌ನ ಫೈನಲ್‌ನಲ್ಲಿ ಸ್ಪೇನ್‌ನ ರಫೆಲ್‌ ನಡಾಲ್‌ ಅವರು ರಷ್ಯಾದ ಡ್ಯಾನಿಲ್‌ ಮೆಡ್ವೆಡೆವ್‌ ಅವರ ಎದುರು ಗೆದ್ದು ಬೀಗಿದರು.

ಭಾನುವಾರ ಇಲ್ಲಿ ನಡೆದ ಪಂದ್ಯದಲ್ಲಿರಷ್ಯಾದ ಡ್ಯಾನಿಲ್‌ ಮೆಡ್ವೆಡೆವ್‌ ಅವರ ಆಕ್ರಮಣಕಾರಿ ಆಟವನ್ನು ಸಮರ್ಥವಾಗಿ ಎದುರಿಸಿದ ನಡಾಲ್ 19ನೇ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಗೆ ಮುತ್ತಿಕ್ಕಿದ್ದಾರೆ.

ಡ್ಯಾನಿಲ್‌ ಮೆಡ್ವೆಡೆವ್‌ ಅವರ ಆಟಕ್ಕೆ ಎದೆಯೊಡ್ಡಿದ ನಡಾಲ್ 7-5, 6-3, 5-7, 4-6, 6-4 ಅಂತರದಲ್ಲಿ ಗೆದ್ದು,ಅಮೆರಿಕ ಓಪನ್‌ನ ನಾಲ್ಕನೇ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

19ನೇ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಗೆದ್ದ ವೇಳೆ ಭಾವುಕರಾದ ರಫೆಲ್‌ ನಡಾಲ್‌
19ನೇ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಗೆದ್ದ ವೇಳೆ ಭಾವುಕರಾದ ರಫೆಲ್‌ ನಡಾಲ್‌

ಜಯದ ಖುಷಿಯಲ್ಲಿ ಮಾತನಾಡಿದ ನಡಾಲ್, ನನ್ನ ಇಡೀ ಟೆನಿಸ್ ಜೀವನದಲ್ಲಿ ಇದೊಂದು ಭಾವನಾತ್ಮಕ ದಿನ. ರೋಚಕ ಫೈನಲ್. ಅತ್ಯುತ್ತಮ ಆಟ ಎಂದು ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT