ಗುರುವಾರ, 30 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

CWC: ಎಡಗೈಯಲ್ಲಿ ಬೂಮ್ರಾ, ಬಲಗೈಯಲ್ಲಿ ಜಡೇಜ ಬೌಲಿಂಗ್; ಏನಿದು ಭಾರತದ ಹೊಸ ತಂತ್ರ?

Published 27 ಅಕ್ಟೋಬರ್ 2023, 7:26 IST
Last Updated 27 ಅಕ್ಟೋಬರ್ 2023, 7:26 IST
ಅಕ್ಷರ ಗಾತ್ರ

ಲಖನೌ: ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಸತತ ಐದು ಗೆಲುವುಗಳ ಹುಮ್ಮಸ್ಸಿನಲ್ಲಿರುವ ಟೀಮ್ ಇಂಡಿಯಾ ಈಗ ಮುಂದಿನ ಹಣಾಹಣಿಗೆ ಸಜ್ಜಾಗುತ್ತಿದೆ.

ಅಕ್ಟೋಬರ್ 29 ಭಾನುವಾರ ಲಖನೌದಲ್ಲಿ ನಡೆಯಲಿರುವ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡದ ಸವಾಲನ್ನು ಎದುರಿಸಲಿದೆ.

ಇದರಂತೆ ಟೀಮ್ ಇಂಡಿಯಾ ಆಟಗಾರರು ಈಗಾಗಲೇ ಲಖನೌಗೆ ಬಂದಿಳಿದಿದ್ದಾರೆ. ಈ ವೇಳೆ ಗುರುವಾರದಂದು ಟೀಮ್ ಇಂಡಿಯಾ ಆಟಗಾರರು ವಿಚಿತ್ರ ರೀತಿಯಲ್ಲಿ ಬೌಲಿಂಗ್ ಅಭ್ಯಾಸ ಮಾಡಿರುವುದು ಗಮನ ಸೆಳೆದಿತ್ತು.

ಈ ಸಂಬಂಧ ವಿಡಿಯೊವನ್ನು ಬಿಸಿಸಿಐ ಬಿಡುಗಡೆಗೊಳಿಸಿದೆ. ಎಲ್ಲರೂ ಬೌಲರ್‌ ಆಗಲು ಪ್ರಯತ್ನಿಸುತ್ತಿದ್ದಾರೆ. ಲಖನೌದಲ್ಲಿ 'ಲಕ್' (ಅದೃಷ್ಟ) ಪರೀಕ್ಷಿಸುತ್ತಿದ್ದಾರೆ ಎಂಬ ಅಡಿಬರಹವನ್ನು ನೀಡಿದೆ.

ಬಲಗೈ ವೇಗಿ ಜಸ್‌ಪ್ರೀತ್ ಬೂಮ್ರಾ, ಎಡಗೈಯಲ್ಲಿ ಸ್ಪಿನ್ ಮತ್ತು ಮಧ್ಯಮ ವೇಗದಲ್ಲಿ ಬೌಲಿಂಗ್ ಅಭ್ಯಾಸ ಮಾಡಿದರು. ಮತ್ತೊಂದೆಡೆ ಎಡಗೈ ಸ್ಪಿನ್ನರ್ ರವೀಂದ್ರ ಜಡೇಜ ಬಲಗೈ ಸ್ಪಿನ್ ಬೌಲಿಂಗ್ ಮಾಡಿದರು.

ಈ ವೇಳೆ ತಾವೇನು ಕಮ್ಮಿಯೇನಲ್ಲ ಎಂಬಂತೆ 'ಚೈನಾಮನ್' ಖ್ಯಾತಿಯ ಕುಲದೀಪ್ ಸಹ ಬಲಗೈಯಲ್ಲಿ ಬೌಲಿಂಗ್ ಮಾಡಿದರು. ಇದಕ್ಕೆ ಬಲಗೈ ಬ್ಯಾಟರ್‌ಗಳಾದ ಶುಭಮನ್ ಗಿಲ್ ಹಾಗೂ ಸೂರ್ಯಕುಮಾರ್ ಯಾದವ್ ಸಹ ಕೈಜೋಡಿಸಿದರು.

ಮಾಜಿ ನಾಯಕ ವಿರಾಟ್ ಕೊಹ್ಲಿ, ಮಧ್ಯಮ ವೇಗದಲ್ಲಿ ಬೌಲಿಂಗ್ ಮಾಡಿ ಅಭ್ಯಾಸ ನಡೆಸಿದರು. ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಗಾಯಗೊಂಡಾಗ ವಿರಾಟ್ ಅವರೇ ಓವರ್ ಪೂರ್ಣಗೊಳಿಸಿದ್ದರು.

ಆಫ್ ಸ್ಪಿನ್ನರ್ ಆರ್. ಅಶ್ವಿನ್, ಮಧ್ಯಮ ವೇಗಿ ಶಾರ್ದೂಲ್ ಠಾಕೂರ್ ಮತ್ತು ಮೊಹಮ್ಮದ್ ಸಿರಾಜ್ ಸಹ ಕಠಿಣ ಅಭ್ಯಾಸ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT