ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕದಿನ ಕ್ರಿಕೆಟ್ ವಿಶ್ವಕಪ್: ಕಿರೀಟಕ್ಕಾಗಿ ದಂಡನಾಯಕರ ಪೈಪೋಟಿ

Last Updated 30 ಮೇ 2019, 6:14 IST
ಅಕ್ಷರ ಗಾತ್ರ

ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯೆಂದರೆ ಕ್ರಿಕೆಟ್‌ಪ್ರಿಯರ ಪಾಲಿಗೆ ಮಹಾಮೇಳವಿದ್ದಂತೆ. ಹತ್ತು ದೇಶಗಳ ದಿಗ್ಗಜ ಆಟಗಾರರ ಕೌಶಲಗಳ ರಸದೌತಣ ಸವಿಯುವ ಸಂಭ್ರಮ ಒಂದೆಡೆ ಇರುತ್ತದೆ. ಇನ್ನೊಂದೆಡೆ ಹೊಸ ತಾರೆಗಳು ಉದಯಿಸುವ ಐತಿಹಾಸಿಕ ಪ್ರಕ್ರಿಯೆ ನಡೆಯುವ ವೇದಿಕೆಯೂ ಇದಾಗುತ್ತದೆ. ಆದ್ದರಿಂದಲೇ ಎಲ್ಲ ತಂಡಗಳ ಏಳು–ಬೀಳಿನ ಹೊಣೆ ನಾಯಕತ್ವ ವಹಿಸಿದವರಾಗಿರುತ್ತದೆ. ಗೆದ್ದರೆ ಕಿರೀಟ, ಸೋತರೆ ತಲೆದಂಡದಂತಹ ಪ್ರಸಂಗಗಳೂ ಈ ಹಿಂದೆ ನಡೆದುಹೋಗಿವೆ. ಇದೀಗ 12ನೇ ವಿಶ್ವಕಪ್ ಟೂರ್ನಿ ಆರಂಭವಾಗಲಿದೆ. ಇದರಲ್ಲಿ ಆಡುವ ಹತ್ತು ತಂಡಗಳ ನಾಯಕರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಅವರ ಸಾಮರ್ಥ್ಯ–ದೌರ್ಬಲ್ಯಗಳ ಕುರಿತ ಚುಟುಕುನೋಟ ಇಲ್ಲಿದೆ.

*
ಭಾರತ
ವಿರಾಟ್ ಕೊಹ್ಲಿ (ಬ್ಯಾಟ್ಸ್ ಮನ್)

ವಯಸ್ಸು -30
ಪಂದ್ಯಗಳು- 227
ರನ್ -10843
ಗರಿಷ್ಠ -183
ಶತಕ -41
ಅರ್ಧಶತಕ -49
ಶಕ್ತಿ: ಅತ್ಯುತ್ತಮ ಫಿಟ್ ನೆಸ್; ಛಲ ಬಿಡದ ಹೋರಾಟ
ದೌರ್ಬಲ್ಯ: ಮೇರೆ ಮೀರಿದ ಉತ್ಸಾಹ; ತಂತ್ರಗಾರಿಕೆಯಲ್ಲಿ ವೈಫಲ್ಯ

ಆಸ್ಟ್ರೇಲಿಯಾ
ಆ್ಯರನ್ ಫಿಂಚ್ (ಬ್ಯಾಟ್ಸ್ ಮನ್)

ವಯಸ್ಸು -32
ಪಂದ್ಯಗಳು -109
ರನ್ -4052
ಗರಿಷ್ಠ -153*
ಶತಕ -13
ಅರ್ಧಶತಕ -21
ಸಾಮರ್ಥ್ಯ: ಸ್ಫೋಟಕ ಬ್ಯಾಟಿಂಗ್; ಯಾವುದೇ ಹಂತದಲ್ಲಿ ಛಲಬಿಡದ ಕಾದಾಟ
ದೌರ್ಬಲ್ಯ: ನಾಯಕತ್ವದಲ್ಲಿ ಅನನುಭವ; ನಿಖರ ತಂತ್ರ ಹೂಡುವಲ್ಲಿ ವೈಫಲ್ಯ

ಇಂಗ್ಲೆಂಡ್
ಇಯಾನ್ ಮಾರ್ಗನ್
(ಬ್ಯಾಟ್ಸ್ ಮನ್)
ವಯಸ್ಸು- 32
ಪಂದ್ಯಗಳು -222
ರನ್ -6977
ಗರಿಷ್ಠ -124*
ಶತಕ -12
ಅರ್ಧಶತಕ -45
ಸಾಮರ್ಥ್ಯ: ಅಗ್ರ ಕ್ರಮಾಂಕದಲ್ಲಿ ಉತ್ತಮ ಬ್ಯಾಟಿಂಗ್; ಅನುಭವ ಸಂಪತ್ತು
ದೌರ್ಬಲ್ಯ: ಲಯ ಕಾಪಾಡಿಕೊಳ್ಳಲು ವೈಫಲ್ಯ; ನಾಯಕತ್ವದಲ್ಲಿ ಜಾಣ್ಮೆಯ ಕೊರತೆ

ಅಫ್ಗಾನಿಸ್ತಾನ
ಗುಲ್ಬದಿನ್ ನಯೀಬ್
(ಬೌಲರ್)
ವಯಸ್ಸು -28
ಪಂದ್ಯಗಳು -55
ರನ್- 830
ವಿಕೆಟ್ -50
ಶ್ರೇಷ್ಠ ಬೌಲಿಂಗ್- 43ಕ್ಕೆ6
5 ವಿಕೆಟ್ ಗೊಂಚಲು- 1 ಬಾರಿ
ಸಾಮರ್ಥ್ಯ: ವೇಗದ ಬೌಲಿಂಗ್ ದಾಳಿ; ಕೆಳ ಕ್ರಮಾಂಕದಲ್ಲಿ ಭರ್ಜರಿ ಬ್ಯಾಟಿಂಗ್
ದೌರ್ಬಲ್ಯ: ಅನುಭವದ ಕೊರತೆ; ಲಯ ಉಳಿಸಿಕೊಳ್ಳುವ ವೈಫಲ್ಯ

ಬಾಂಗ್ಲಾದೇಶ
ಮಷ್ರಫೆ ಮೊರ್ತಜಾ(ಬೌಲರ್)

ವಯಸ್ಸು- 35
ಪಂದ್ಯಗಳು- 209
ರನ್ -1752
ವಿಕೆಟ್ -265
ಶ್ರೇಷ್ಠ ಬೌಲಿಂಗ್- 26ಕ್ಕೆ6
5 ವಿಕೆಟ್ ಗೊಂಚಲು -1 ಬಾರಿ
ಸಾಮರ್ಥ್ಯ: ಸ್ವಿಂಗ್ ಬೌಲಿಂಗ್ ದಾಳಿ; ಸ್ಫೋಟಕ ಬ್ಯಾಟಿಂಗ್
ದೌರ್ಬಲ್ಯ: ಅತಿ ಎಂದೆನಿಸುವ ಉತ್ಸಾಹ;
ಲಯ ಕಾಪಾಡಿಕೊಳ್ಳಲು ವೈಫಲ್ಯ

ನ್ಯೂಜಿಲೆಂಡ್
ಕೇನ್ ವಿಲಿಯಮ್ಸನ್ (ಬ್ಯಾಟ್ಸ್ ಮನ್)

ವಯಸ್ಸು- 28
ಪಂದ್ಯಗಳು -139
ರನ್-5554
ಗರಿಷ್ಠ -145*
ಶತಕ- 11
ಅರ್ಧಶತಕ -37
ಸಾಮರ್ಥ್ಯ: ಅಗ್ರ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಬಲ; ಉತ್ತಮ ನಾಯಕತ್ವ
ದೌರ್ಬಲ್ಯ: ಏಕಾಏಕಿ ಲಯ ತಪ್ಪುವುದು; ನಿರ್ಧಾರಗಳಲ್ಲಿ ಎಡಹುವುದು

ಪಾಕಿಸ್ತಾನ
ಸರ್ಫರಾಜ್ ಅಹಮ್ಮದ್ (ವಿಕೆಟ್ ಕೀಪರ್)

ವಯಸ್ಸು- 32
ಪಂದ್ಯಗಳು -106
ರನ್ -2128
ಗರಿಷ್ಠ -105
ಶತಕ- 2
ಅರ್ಧಶತಕ -10
ಕ್ಯಾಚ್ ಗಳು- 99
ಸ್ಟಂಪ್ಸ್ -23
ಸಾಮರ್ಥ್ಯ: ಮಧ್ಯಮ ಕ್ರಮಾಂಕದ ಆಧಾರ; ವಿಕೆಟ್ ಹಿಂದೆ ಕೈಚಳಕ
ದೌರ್ಬಲ್ಯ: ತಪ್ಪು ನಿರ್ಧಾರಗಳು; ದಿಢೀರ್ ಲಯ ಕಳೆದುಕೊಳ್ಳುವುದು

ದಕ್ಷಿಣ ಆಫ್ರಿಕಾ
ಫಾಫ್ ಡು ಪ್ಲೆಸಿ(ಬ್ಯಾಟ್ಸ್ ಮನ್)

ವಯಸ್ಸು -34
ಪಂದ್ಯಗಳು -134
ರನ್ -5120
ಗರಿಷ್ಠ -185
ಶತಕ -11
ಅರ್ಧಶತಕ -32
ಸಾಮರ್ಥ್ಯ: ಉತ್ತಮ ಆರಂಭಿಕ ಬ್ಯಾಟ್ಸ್ ಮನ್; ವೇಗ, ಸ್ಪಿನ್ ದಾಳಿಗೆ ಬೆದರದ ಬ್ಯಾಟಿಂಗ್
ದೌರ್ಬಲ್ಯ: ನಾಯಕತ್ವದಲ್ಲಿ ಕಾಣದ ಯಶಸ್ಸು; ನಿರ್ಧಾರ ಕೈಗೊಳ್ಳುವಲ್ಲಿ ವೈಫಲ್ಯ

ಶ್ರೀಲಂಕಾ
ದಿಮುತ್ ಕರುಣಾರತ್ನೆ (ಬ್ಯಾಟ್ಸ್ ಮನ್)

ವಯಸ್ಸು -31
ಪಂದ್ಯಗಳು- 18
ರನ್ -267
ಗರಿಷ್ಠ -77
ಅರ್ಧಶತಕ- 2
ಸಾಮರ್ಥ್ಯ: ತಾಳ್ಮೆಯ ಬ್ಯಾಟಿಂಗ್; ಉತ್ತಮ ಆರಂಭ ಒದಗಿಸಬಲ್ಲ ಸಾಧನೆ
ದೌರ್ಬಲ್ಯ: ಅನುಭವದ ಕೊರತೆ; ನಿಧಾನಗತಿಯಲ್ಲಿ ರನ್ ಕಲೆ ಹಾಕುವುದು

ವೆಸ್ಟ್ ಇಂಡೀಸ್
ಜೇಸನ್ ಹೋಲ್ಡರ್ (ಆಲ್ ರೌಂಡರ್)
ವಯಸ್ಸು- 27
ಪಂದ್ಯಗಳು -95
ರನ್ -1574
ಗರಿಷ್ಠ -99*
ಅರ್ಧಶತಕ- 8
ವಿಕೆಟ್ -121
ಶ್ರೇಷ್ಠ- 27ಕ್ಕೆ5
ಸಾಮರ್ಥ್ಯ: ಸ್ಫೋಟಕ ಬ್ಯಾಟಿಂಗ್ ಮೂಲಕ ರನ್ ಗಳಿಕೆ; ಮೊನಚಾದ ಬೌಲಿಂಗ್
ದೌರ್ಬಲ್ಯ: ನಾಯಕತ್ವದಲ್ಲಿ ಅನುಭವದ ಕೊರತೆ; ಲಯ ಉಳಿಸಿಕೊಳ್ಳಲು ಪರದಾಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT