ಬ್ರಿಜ್ಟೌನ್, ಬಾರ್ಬಡಸ್ (ಎಎಫ್ಪಿ): ಇಂಗ್ಲೆಂಡ್ ತಂಡದವರು ಇಲ್ಲಿ ನಡೆದ ಟ್ವೆಂಟಿ–20 ಕ್ರಿಕೆಟ್ ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯ ದಲ್ಲಿ ವೆಸ್ಟ್ಇಂಡೀಸ್ ತಂಡವನ್ನು ಐದು ರನ್ಗಳಿಂದ ಮಣಿಸಿದರು. ಆದರೆ ಮೊದಲೆರಡು ಪಂದ್ಯ ಜಯಿಸಿದ್ದ ವಿಂಡೀಸ್ 2–1ರಲ್ಲಿ ಸರಣಿ ಗೆದ್ದುಕೊಂಡಿತು.

ಕೆನ್ಸಿಂಗ್ಟನ್ ಓವಲ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಆತಿಥೇಯ ವಿಂಡೀಸ್ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 160 ರನ್ ಪೇರಿಸಿತು.

ಮಿಂಚಿದ ಲಂಬ್: ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಲು ಮುಂದಾದ ಇಂಗ್ಲೆಂಡ್ಗೆ ಉತ್ತಮ ಆರಂಭ ದೊರೆಯಿತು. ಈ ತಂಡದ ಮೈಕಲ್ ಲಂಬ್ ಕೇವಲ 40 ಎಸೆತಗಳಲ್ಲಿ 63 ರನ್ ಗಳಿಸಿದರು. ಅದರಲ್ಲಿ 9 ಬೌಂಡರಿ ಹಾಗೂ 2 ಸಿಕ್ಸರ್ಗಳಿದ್ದವು.

ಮೊದಲ ವಿಕೆಟ್ಗೆ ಲಂಬ್ ಹಾಗೂ ಅಲೆಕ್ಸ್ ಹೇಲ್ಸ್ 65 ಎಸೆತಗಳಲ್ಲಿ 98 ರನ್ ಸೇರಿಸಿದರು. ಸವಾಲಿನ ಗುರಿ ಎದುರು ವಿಂಡೀಸ್ ಆರಂಭದಲ್ಲಿ ಆಘಾತ ಎದುರಿಸಿತು. ಲೆಂಡ್ಲ್ ಸಿಮನ್ಸ್ (69; 55 ಎ.) ತಂಡದ ಗೆಲುವಿಗಾಗಿ ಪ್ರಯತ್ನಿಸಿದರು. ಆದರೆ ಇತರ ಬ್ಯಾಟ್ಸ್ಮನ್ಗಳಿ ವಿಫಲರಾದರು.

ಸಂಕ್ಷಿಪ್ತ ಸ್ಕೋರ್: ಇಂಗ್ಲೆಂಡ್: 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 165 (ಮೈಕೆಲ್ ಲಂಬ್ 63, ಅಲೆಕ್ಸ್ ಹೇಲ್ಸ್ 38, ಕ್ರಿಸ್ ಜೋರ್ಡಾನ್ ಔಟಾಗದೆ 25; ಕ್ರಿಶ್ಮಾರ್ ಸ್ಯಾಂಟೋಕಿ 27ಕ್ಕೆ2, ಶೆಲ್ಡೋನ್ ಕಾಟ್ರೆಲ್ 37ಕ್ಕೆ2);
ವೆಸ್ಟ್ಇಂಡೀಸ್: 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 160 (ಲೆಂಡ್ಲ್ ಸಿಮನ್ಸ್ 69, ದಿನೇಶ್ ರಾಮ್ದಿನ್ 33; ಕ್ರಿಸ್ ಜೋರ್ಡಾನ್ 39ಕ್ಕೆ3, ರವಿ ಬೋಪಾರ 28ಕ್ಕೆ2); ಫಲಿತಾಂಶ: ಇಂಗ್ಲೆಂಡ್ಗೆ 5 ರನ್ ಗೆಲುವು. ಸರಣಿ 2–1ರಲ್ಲಿ ವಿಂಡೀಸ್ ಪಾಲು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.