ಬೆಂಗಳೂರು: ಹಿರಿಯ ಹಾಕಿಪಟು ಸಂದೀಪ್ ಸಿಂಗ್ ಅವರ ಜೀವನ ಆಧಾರಿತ ಚಲನಚಿತ್ರ ‘ಸೂರ್ಮಾ –ದಿ ಗ್ರೇಟೆಸ್ಟ್ ಕಮ್ ಬ್ಯಾಕ್ ಸ್ಟೋರಿ ಆಫ್ ದಿ ಹಾಕಿ ಲೆಜೆಂಡ್ ಸಂದೀಪ್ ಸಿಂಗ್’ ತೆರೆ ಕಾಣಲು ಸಿದ್ಧವಾಗಿದೆ.

ಸೋನಿ ಪಿಕ್ಚರ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಈ ಚಿತ್ರವನ್ನು ನಿರ್ಮಿಸಿದೆ. ಶಾದ್ ಅಲಿ ನಿರ್ದೇಶಿಸಿದ್ದಾರೆ. ನಟ ದಲ್ಜೀತ್ ದೊಸಾನ್ಜಿ ಅವರು ಸಂದೀಪ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ತಾಪ್ಸಿ ಪನ್ನು ಮತ್ತು ಅಂಗದ್ ಬೇಡಿ ತಾರಾಗಣದಲ್ಲಿದ್ದಾರೆ. ಹಿಂದಿ ಮತ್ತು ಪಂಜಾಬಿ ಭಾಷೆಗಳಲ್ಲಿ ನಿರ್ಮಾಣವಾಗಿರುವ ಚಿತ್ರವು ಜೂನ್ 29ರಂದು ದೇಶಾದ್ಯಂತ ಬಿಡುಗಡೆಯಾಗಲಿದೆ.

ಸಂದೀಪ್ ಅವರು 2006ರಲ್ಲಿ ಶತಾಬ್ದಿ ಎಕ್ಸ್‌ಪ್ರೆಸ್ ರೈಲಿನಲ್ಲಿ
ಪ್ರಯಾಣಿಸುತ್ತಿದ್ದಾಗ ಬೇರೊಬ್ಬರ ಬಂದೂಕಿನಿಂದ ಆಕಸ್ಮಿಕವಾಗಿ ಸಿಡಿದ ಗುಂಡು ತಗುಲಿದ್ದರಿಂದ ಸಂದೀಪ್ ಗಂಭೀರವಾಗಿ ಗಾಯಗೊಂಡಿದ್ದರು. ಜರ್ಮನಿಯಲ್ಲಿ ಆಯೋಜನೆಗೊಂಡಿದ್ದ ವಿಶ್ವಕಪ್ ಹಾಕಿ ಟೂರ್ನಿಯಲ್ಲಿ ಆಡುವ ಭಾರತ ತಂಡವನ್ನು ಸೇರಿಕೊಳ್ಳಲು ಅವರು ದೆಹಲಿಗೆ ಪ್ರಯಾಣಿಸುತ್ತಿರುವಾಗ ಈ ಘಟನೆ ನಡೆದಿತ್ತು.

ಇದರಿಂದಾಗಿ ಎರಡು ವರ್ಷಗಳ ಕಾಲ ಗಾಲಿ ಕುರ್ಚಿಯಲ್ಲೇ ಸಂದೀಪ್ ಬದುಕನ್ನು ಕಳೆಯಬೇಕಾಯಿತು. ಅವರ ಕ್ರೀಡಾ ಬದುಕು ಮುಗಿದೇ ಹೋಯಿತು ಎಂಬ ಮಾತುಗಳೂ ಕೇಳಿಬಂದಿದ್ದವು. ನಂತರ ಚೇತರಿಸಿಕೊಂಡ ಡ್ರ್ಯಾಗ್ ಫ್ಲಿಕರ್ ಸಂದೀಪ್ ಮತ್ತೆ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.