ಶನಿವಾರ, ಏಪ್ರಿಲ್ 17, 2021
31 °C

ವಿಜ್ಞಾನದಲ್ಲಿ ಮಹಿಳೆಯ ಸಾಧನೆ ಅಪಾರ: ಪಿ.ಶೋಭನಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಮಹಿಳೆಯರ ಮನಸ್ಸಿಗೆ ಭಯ ಮೂಡುವ ಭಾವನೆಗಳನ್ನು ಸಮಾಜ ತುಂಬಿದೆ. ಆದರೆ, ಅದನ್ನು ಹಿಮ್ಮೆಟ್ಟಿಸುವಂತೆ ಮಹಿಳೆ ಇಂದು ವಿಜ್ಞಾನ ಕ್ಷೇತ್ರದಲ್ಲಿ ಪುರುಷರಿಗಿಂತ ಒಂದು ಹೆಜ್ಜೆ ಮುಂದೆ ಸಾಗಿದ್ದಾಳೆ’ ಎಂದು ಜವಾಹರಲಾಲ್‌ ನೆಹರೂ ಉನ್ನತ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕಿ ಪಿ.ಶೋಭನಾ ನರಸಿಂಹನ್ ಹೇಳಿದರು.

ಬೆಂಗಳೂರು ವಿಜ್ಞಾನ ವೇದಿಕೆಯು ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ‘ಬೆಂಗಳೂರು ವಿಜ್ಞಾನೋತ್ಸವ’ ಕಾರ್ಯಕ್ರಮದಲ್ಲಿ ‘ವಿಜ್ಞಾನ ಬದಲಾಯಿಸಿದ ಮಹಿಳೆ’ ಕುರಿತು ಅವರು ಮಾತನಾಡಿದರು.

‘ಸಮಾಜದಲ್ಲಿ ಅಂದಿನಿಂದ ಇಂದಿನವೆರೆಗೂ ಗಂಡು ಹೆಣ್ಣು ಎನ್ನುವ ಪಕ್ಷಪಾತ ಜೀವಂತವಾಗಿದೆ. ಒಮ್ಮೆ ನಾನು ಪ್ರಯಾಣಿಸುತ್ತಿದ್ದ ವಿಮಾನದ ಪೈಲಟ್‌ ಮಹಿಳೆ ಎಂದು ಗೊತ್ತಾದ ಕೂಡಲೇ ನನಗೆ ಭಯವಾಗಿತ್ತು. ಈ ರೀತಿ ಜನರಲ್ಲಿ ಮಹಿಳೆ ವಿಚಾರವಾಗಿ ಬೇರುಬಿಟ್ಟಿದೆ’ ಎಂದು ಅವರು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು