ಹಾಲು ಉತ್ಪಾದಕರ ಸಂಘಕ್ಕೆ ನಿರ್ದೇಶಕರ ಆಯ್ಕೆ

7

ಹಾಲು ಉತ್ಪಾದಕರ ಸಂಘಕ್ಕೆ ನಿರ್ದೇಶಕರ ಆಯ್ಕೆ

Published:
Updated:

ಬೆಂಗಳೂರು: ಬೆಂಗಳೂರು ದಕ್ಷಿಣ ತಾಲ್ಲೂಕು ಎಚ್.ಗೊಲ್ಲಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಹನುಮಯ್ಯ, ಚಿಕ್ಕಮುನಿಯಪ್ಪ, ಮಹದೇವಯ್ಯ, ವಿಜಿಕುಮಾರ್, ಸೆಲ್ವನಾಥನ್, ಸೂಸಪ್ಪ, ನಾಗರಾಜು, ರತ್ನಮ್ಮ, ಲಕ್ಷ್ಮಮ್ಮ, ಚಿಕ್ಕಗಾಳಪ್ಪ, ಹನುಮಂತಪ್ಪ, ಹನುಮಂತಯ್ಯ ಹಾಗೂ ಹನುಮಕ್ಕ ನೂತನ ನಿರ್ದೇಶಕರಾಗಿ ಆಯ್ಕೆಯಾದರು.

ಆಯ್ಕೆಯಾದವರನ್ನು ಅಭಿನಂದಿಸಿದ ಬೆಂಗಳೂರು ನಗರ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬಿ.ಆರ್.ಶಿವಮಾದಯ್ಯ, ‘ಆರ್ಥಿಕವಾಗಿ ಬಸವಳಿದಿರುವ ರೈತ ಕುಟುಂಬಗಳಿಗೆ ಹೈನುಗಾರಿಕೆ ಲಾಭದಾಯಕ ಕಸುಬು. ಯುವ ರೈತ ಕುಟುಂಬಗಳು ಹೈನುಗಾರಿಕೆಯಲ್ಲಿ ತೊಡಗಿ ಸಾಮಾಜಿಕ ಹಾಗೂ ಆರ್ಥಿಕವಾಗಿ ಸದೃಢರಾಗಬೇಕು’ ಎಂದರು. ‘ಒಕ್ಕಲುತನ ಮಾಡುತ್ತಿರುವವರ ಪ್ರಗತಿಯಲ್ಲಿ ಸಹಕಾರ ಕ್ಷೇತ್ರದ ಪಾತ್ರ ಅತ್ಯಂತ ಮಹತ್ವದ್ದು. ಆಡಳಿತ ಮಂಡಳಿ ರೈತಪರವಾಗಿ ಶ್ರಮಿಸುವ ಮೂಲಕ ಮಾದರಿ ಸಂಘವಾಗಿ ರೂಪುಗೊಳ್ಳಬೇಕು’ ಎಂದು ಬೆಂಗಳೂರು ದಕ್ಷಿಣ ತಾಲ್ಲೂಕು ಆರಾಧನಾ ಸಮಿತಿ ಮಾಜಿ ಅಧ್ಯಕ್ಷ ದೊಡ್ಡಬೆಲೆ ಎಂ. ನಾರಾಯಣಪ್ಪ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !