ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಪಂಚ ಕತ್ತಲಲ್ಲಿದ್ದಾಗ ಭಾರತ ಮುಂಚೂಣಿಯಲ್ಲಿತ್ತು: ಸಾಹಿತಿ ವಿಜಯಾ

ಸಾಹಿತಿ ವಿಜಯಾ ಸುಬ್ಬರಾಜ್ ಅಭಿಮತ
Last Updated 15 ಮೇ 2019, 18:24 IST
ಅಕ್ಷರ ಗಾತ್ರ

ಬೆಂಗಳೂರು: ‘ಪ್ರಪಂಚದ ಹೆಚ್ಚಿನ ದೇಶಗಳು ಅಂಧಕಾರ ಯುಗದಲ್ಲಿದ್ದಾಗಲೇ ನಮ್ಮ ದೇಶದಲ್ಲಿಶಸ್ತ್ರಚಿಕಿತ್ಸೆ, ಅಂಗಾಂಗ ಕಸಿ ಚಿರಪರಿಚಿತವಾಗಿತ್ತು. ಭೌತ ವಿಜ್ಞಾನ, ತಂತ್ರ ವಿಜ್ಞಾನ, ತಂತ್ರಜ್ಞಾನ, ತತ್ವಜ್ಞಾನ, ಖಗೋಳ ಶಾಸ್ತ್ರದಲ್ಲಿ ನಮ್ಮ ದೇಶ ಮುಂಚೂಣಿಯಲ್ಲಿತ್ತು’ ಎಂದು ಸಾಹಿತಿ ಡಾ. ವಿಜಯಾ ಸುಬ್ಬರಾಜ್ ತಿಳಿಸಿದರು.

ಬಿ.ಎಂ.ಶ್ರೀ. ಪ್ರತಿಷ್ಠಾನದ ಸಹಯೋಗದಲ್ಲಿ ಕರ್ನಾಟಕ ಲೇಖಕಿಯರ ಸಂಘ ನಗರದಲ್ಲಿ ಆಯೋಜಿಸಿದ್ದ ಸಾಹಿತ್ಯ ಸಂಚಲನ ಕಾರ್ಯಕ್ರಮದಲ್ಲಿ ಮನು (ಪಿ.ವಿ. ರಂಗನ್) ಅವರ ಹೊಸ ಪರಿಕಲ್ಪನೆಯ ಕೃತಿ ‘ಮಹಾಸಂಪರ್ಕ’ದ ಕುರಿತು ಉಪನ್ಯಾಸ ನೀಡಿದರು.

‘ಸಿಂಧೂ ಕಣಿವೆಯ ನಾಗರಿಕತೆಯೇ ನಮ್ಮ ಜನಾಂಗ ಎಷ್ಟು ಮುಂದುವರಿದಿದೆ ಎನ್ನುವುದನ್ನು ತಿಳಿಸುತ್ತದೆ.ನಮ್ಮವರ ಪಾಂಡಿತ್ಯಕ್ಕೆ ವೇದಗಳು ಹಾಗೂ ಕಾವ್ಯಗಳೇ ಪ್ರಮುಖ ಸಾಕ್ಷಿಯಾಗಿದೆ. ಪಿ.ವಿ. ರಂಗನ್ ಅವರು ‘ಮಹಾಸಂಪರ್ಕ’ ಕೃತಿಯಲ್ಲಿ ಇದನ್ನು ವಿವರಿಸಿದ್ದಾರೆ’ ಎಂದು ಹೇಳಿದರು.

‘ಬಹು ದೂರದ ತಾರಾ ಲೋಕದಿಂದ ಅತ್ಯಂತ ಬುದ್ಧಿಶಾಲಿ ಜನಾಂಗವೊಂದು ಭೂ ಲೋಕಕ್ಕೆ ಆಗಮಿಸಿ, ಇಲ್ಲಿನ ಜನರಿಗೆ ತಾವು ತಿಳಿದ ವಿಷಯವನ್ನು ಉಪದೇಶಿಸಿದ ಬಗ್ಗೆ ‘ಮಹಾಸಂಪರ್ಕ’ದಲ್ಲಿ ಮಾಹಿತಿಯಿದೆ. ಲೈಂಗಿಕ ಸಂಪರ್ಕದಿಂದ ಉತ್ತಮ ತಳಿಯ ಮಾನವರನ್ನು ಹುಟ್ಟಿಸಲು ಪ್ರಯತ್ನಿಸಿದ್ದಕ್ಕೆ‘ಮಹಾಭಾರತ’ದಲ್ಲಿ ಹಲವುಉದಾಹರಣೆಗಳು ಸಿಗುತ್ತವೆ’ ಎಂದರು.

‘ಬದಲಾದ ಸನ್ನಿವೇಶದಲ್ಲಿ ಮಾನವನ ಅತಿಯಾಸೆಗೆ ನೈಸರ್ಗಿಕ ಸಂಪತ್ತನ್ನು ಕಳೆದುಕೊಳ್ಳುತ್ತಿದ್ದೇವೆ. ಅಪರೂಪದ ಪ್ರಾಣಿ ಸಂಕುಲಗಳೂ ನಾಶವಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಕವಯಿತ್ರಿಪ್ರೊ.ಎಂ.ಆರ್. ಕಮಲಾ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು. 14 ಕವಯಿತ್ರಿಯರು ಕವನ ವಾಚಿಸಿದರು. ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ವನಮಾಲಾ ಸಂಪನ್ನಕುಮಾರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT