ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಹಿಳೆಯರ ವಿರುದ್ಧ ಹೆಚ್ಚಿದ ಸೈಬರ್‌ ಅಪರಾಧ’

ರಾಮಯ್ಯ ಸಂಸ್ಥೆಯಲ್ಲಿ ‘ಸೈಬರ್ ಏಜ್’ ವಿಚಾರ ಸಂಕಿರಣಕ್ಕೆ ಚಾಲನೆ
Last Updated 22 ಮಾರ್ಚ್ 2019, 19:34 IST
ಅಕ್ಷರ ಗಾತ್ರ

ಬೆಂಗಳೂರು: ರಾಮಯ್ಯ ಇನ್‌ಸ್ಟಿಟ್ಯೂಟ್ ಆಫ್‌ ಟೆಕ್ನಾಲಜಿಯ ಮ್ಯಾನೇಜ್‌ಮೆಂಟ್‌ ಸ್ಟಡೀಸ್ ವಿಭಾಗ ಹಾಗೂ ರಾಷ್ಟ್ರೀಯ ಮಹಿಳಾ ಆಯೋಗ ಜಂಟಿಯಾಗಿ ನಗರದಲ್ಲಿ ಹಮ್ಮಿಕೊಂಡಿರುವ ‘ಸೈಬರ್ ಏಜ್‌’ ವಿಚಾರ ಸಂಕಿರಣಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.

ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಡಾ. ಶ್ಯಾಮಲಾ ಎಸ್‌. ಕುಂದರ್ ಮಾತನಾಡಿ, ‘ಸೈಬರ್‌ ಅಪರಾಧ ಸಂಬಂಧ ವರ್ಷಕ್ಕೆ 20 ಸಾವಿರದಿಂದ 30 ಸಾವಿರ ದೂರುಗಳು ಆಯೋಗಕ್ಕೆ ಬರುತ್ತವೆ ಮಹಿಳೆಯರು ಸೈಬರ್‌ ಅಪರಾಧಗಳಿಂದ ಎಷ್ಟು ನೊಂದುಕೊಳ್ಳುತ್ತಿದ್ದಾರೆ ಎಂಬುದು ಇದರಿಂದಲೇ ಗೊತ್ತಾಗುತ್ತದೆ’ ಎಂದರು.

‘ಸೈಬರ್‌ ಲಾ ಪೋರ್ಟಲ್’ ಸಂಸ್ಥಾ ಪಕಎನ್.ವಿಜಯಶಂಕರ್ ಮಾತನಾಡಿ, ‘ಸೈಬರ್ ಜಾಗವನ್ನು ತಂತ್ರಜ್ಞರು ಸೃಷ್ಟಿಸುತ್ತಿದ್ದಾರೆ. ಅಲ್ಲಿ ಸಂಭವಿಸುವ ಅಪರಾಧಗಳನ್ನು ತಡೆಯಲು ತಂತ್ರಜ್ಞರ ರೀತಿಯಲ್ಲೇ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಿದೆ’ ಎಂದರು.

‘ಸೈಬರ್‌ ಕ್ಷೇತ್ರದಲ್ಲಿ ಮಹಿಳೆಯರ ಖಾಸಗಿತನ ಹಾಗೂ ರಕ್ಷಣೆಗೆ ಧಕ್ಕೆ ಯಾಗದಂತೆ ಪರಿಹಾರಗಳನ್ನು ಕಂಡುಕೊಳ್ಳಬೇಕಿದೆ’ ಎಂದು ಹೇಳಿದರು.

ರಾಮಯ್ಯ ಇನ್‌ಸ್ಟಿಟ್ಯೂಟ್ ಆಫ್‌ ಟೆಕ್ನಾಲಜಿಯ ಶೈಕ್ಷಣಿಕ ರಿಜಿಸ್ಟ್ರಾರ್ಡಾ. ಅರ್ಚನಾ, ಮ್ಯಾನೇಜ್‌ಮೆಂಟ್ ಸ್ಟಡೀಸ್ ವಿಭಾಗದ ಮುಖ್ಯಸ್ಥ ಡಾ. ಪಿ.ವಿ.ರವೀಂದ್ರ,ಸಹಾಯಕ ಪ್ರಾಧ್ಯಾಪಕ ಜಿ.ವಿಜಯಕುಮಾರ್ ಸಂಕಿರಣದಲ್ಲಿ ಪಾಲ್ಗೊಂಡಿದ್ದರು.

‘ಮಹಿಳೆಯರ ಮೇಲೆ ನಡೆಯುವ ಸೈಬರ್ ಅಪರಾಧಗಳು ಹಾಗೂ ಅವರ ರಕ್ಷಣೆಗೆ ಕಾನೂನಿನಲ್ಲಿರುವ ಕ್ರಮಗಳು’ ವಿಷಯದಡಿ 22 ಹಾಗೂ 23ರಂದು ಈ ವಿಚಾರಣ ಸಂಕಿರಣ ಹಮ್ಮಿಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT