ಶುಕ್ರವಾರ, ಜುಲೈ 30, 2021
23 °C

ಪೊಲೀಸರು ಬಂಧಿಸಿದಾಗ 'ನಾನು ವಿಕಾಸ್ ದುಬೆ' ಎಂದು ಕಿರುಚಿದ ರೌಡಿಶೀಟರ್‌

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

vikas dube

ಉಜ್ಜಯನಿ: ಕಾನ್ಪುರ್‌ನಲ್ಲಿ ಎಂಟು ಮಂದಿ ಪೊಲೀಸರ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರೌಡಿಶೀಟರ್‌ ವಿಕಾಸ್‌ ದುಬೆಯನ್ನು ಮಧ್ಯಪ್ರದೇಶ ಪೊಲೀಸರು ಬಂಧಿಸಿದಾಗ, 'ಮೇ ವಿಕಾಸ್ ದುಬೆ ಹೂಂ, ಕಾನ್ಪುರ್‌ವಾಲಾ' (ನಾನು ವಿಕಾಸ್ ದುಬೆ, ಕಾನ್ಪುರದವನು) ಎಂದು ಆತ ಕಿರುಚಿದ್ದಾನೆ. ಆಗ ಪೊಲೀಸ್ ಸಿಬ್ಬಂದಿಯೊಬ್ಬರು, ಆವಾಜ್ ನಹೀ (ಸುಮ್ಮನಿರು) ಎಂದು ಏಟು ಕೊಟ್ಟಿದ್ದಾರೆ.

ಕುಖ್ಯಾತ ರೌಡಿ, ಹತ್ಯೆ ಪ್ರಕರಣ ಸೇರಿದಂತೆ 60 ಪ್ರಕರಣಗಳ ಆರೋಪಿಯಾಗಿರುವ ದುಬೆಯನ್ನು ಗುರುವಾರ ಬೆಳಗ್ಗೆ ಉಜ್ಜಯನಿ ದೇವಾಲಯವೊಂದರಲ್ಲಿ  ಬಂಧಿಸಲಾಗಿದೆ.

 ಮಂಗಳವಾರ ರಾತ್ರಿ ಫರೀದಾಬಾದ್‌ನ ಹೋಟೆಲ್‌ಗೆ ಬಂದಿದ್ದ ದುಬೆ, ತನಗಾಗಿ ಒಂದು ಕೊಠಡಿ ಬುಕ್‌ ಮಾಡಲು ಮುಂದಾಗಿದ್ದ. ಹೋಟೆಲ್‌ನ ಸಿಸಿಟಿವಿ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿತ್ತು ಮತ್ತು ಅದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು. ಆದರೆ ಪೊಲೀಸರು ಅಲ್ಲಿಗೆ ತಲುಪುವ ಮೊದಲೇ ಆತ ಪರಾರಿಯಾಗಿದ್ದ’ ಎಂದು ಅಧಿಕಾರಿಗಳು ಹೇಳಿದ್ದರು.

ಇನ್ನೊಂದೆಡೆ, ಉತ್ತರಪ್ರದೇಶ ಎಸ್‌ಟಿಎಫ್‌ ಹಾಗೂ ಕ್ರೈಂ ಬ್ರಾಂಚ್‌ ಪೊಲೀಸರು ಫರೀದಾಬಾದ್‌ನಲ್ಲಿ ಜಂಟಿ ಕಾರ್ಯಾಚರಣೆ ನಡೆಸಿ, ವಿಕಾಸ್‌ ದುಬೆಯ ಸಮೀಪವರ್ತಿಗಳೆನಿಸಿಕೊಂಡಿದ್ದ ಅಂಕುರ್‌, ಶ್ರವಣ್‌ ಹಾಗೂ ಕಾರ್ತಿಕೇಯ ಅಲಿಯಾಸ್‌ ಪ್ರಭಾತ್‌ ಎಂಬುವರನ್ನು ಬಂಧಿಸಿದ್ದರು.

ಇನ್ನಷ್ಟು... 

ವಿಕಾಸ್ ದುಬೆ ಪರಾರಿಯಾಗಲು ದಾಳಿಯ ಮಾಹಿತಿ ಮೊದಲೇ ನೀಡಿದ ಇಬ್ಬರು ಪೊಲೀಸರ ಬಂಧನ 

ಉತ್ತರ ಪ್ರದೇಶ: 8ಪೊಲೀಸರನ್ನು ಹತ್ಯೆಗೈದ ವಿಕಾಸ್ ದುಬೆ ಬಂಧಿಸಲು 25 ವಿಶೇಷ ತಂಡ 

ಫರೀದಾಬಾದ್‌ನಲ್ಲಿ ಕಾಣಿಸಿದ ವಿಕಾಸ್ ದುಬೆ: ಪೊಲೀಸರು ಬರುವ ಮೊದಲೇ ಪರಾರಿ 

ಕಾನ್ಪುರ: ದುಬೆ ಸಹಚರನ ಹತ್ಯೆ, ಆರು ಜನರ ಬಂಧನ 

ಕಾನ್ಪುರ 8 ಪೊಲೀಸರ ಹತ್ಯೆ ಪ್ರಕರಣ: ವಿಕಾಸ್ ದುಬೆ ಸಹಚರ ಅಮರ್ ದುಬೆ ಎನ್‌ಕೌಂಟರ್

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು