ಶುಕ್ರವಾರ, ನವೆಂಬರ್ 27, 2020
20 °C

100ನೇ ವಸಂತಕ್ಕೆ ಕಾಲಿಟ್ಟ ಡಿ.ಎಸ್‌.ಮಜಿತಿಯಾ; ಐಎಎಫ್‌ನಿಂದ ಗೌರವ ಸಲ್ಲಿಕೆ

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ನಿವೃತ ಸ್ಕ್ವಾಡ್ರನ್‌ ನಾಯಕ ದಲಿಪ್‌ ಸಿಂಗ್‌ ಮಜಿತಿಯಾ ಅವರು 100ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಇದೇ ಸಂಭ್ರಮದಲ್ಲಿ ಭಾರತೀಯ ವಾಯುಪಡೆ ಶುಭ ಹಾರೈಸಿದೆ. 

ಎರಡನೇ ಮಹಾಯುದ್ಧದಲ್ಲಿ ಪ್ರಮುಖ ಪಾತ್ರವಹಿಸಿದ್ದ, 1947ರ ಆಗಸ್ಟ್‌ನಲ್ಲಿ ನಿವೃತರಾದ ಡಿ.ಎಸ್‌.ಮಜಿತಿಯಾ, ಅತ್ಯಂತ ಹಳೆಯ ಐಎಎಫ್‌ ಫೈಟರ್‌ ಪೈಲಟ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಭಾರತೀಯ ವಾಯುಪಡೆ ಮುಖ್ಯಸ್ಥ ಮಾರ್ಷಲ್‌ ಆರ್‌ಕೆಎಸ್‌ ಭದೌರಿಯಾ ಅವರು ಯೋಧರ ಪರವಾಗಿ ಶುಭಾಶಯ ತಿಳಿಸಿದ್ದಾರೆ. 

ಮಜಿತಿಯಾ ಅವರು ಪತ್ನಿ ಮತ್ತು ವಾಯುಪಡೆ ಅಧಿಕಾರಿಗಳ ಸಮ್ಮುಖದಲ್ಲಿ ಕೇಕ್‌ ಕತ್ತರಿಸುವ ಮೂಲಕ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಸಂಭ್ರಮದ ವಿಡಿಯೊ ಮತ್ತು ಹಳೆ ಭಾವಚಿತ್ರಗಳನ್ನು ಐಎಎಫ್‌ ತನ್ನ ಟ್ವಿಟರ್‌ ಮತ್ತು ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು