ಭಾನುವಾರ, ಮೇ 16, 2021
22 °C

ಕಿಲ್ಲರ್‌ ಟಿ–ಸೆಲ್ಸ್‌ ಹೆಚ್ಚಿಸುವ ಲಸಿಕೆ ಅಭಿವೃದ್ಧಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಲಂಡನ್‌: ಕೋವಿಡ್‌–19 ವಿರುದ್ಧ ಇಲ್ಲಿನ ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದ ಸಂಶೋಧಕರ ತಂಡವು ಅಭಿವೃದ್ಧಿಪಡಿಸಿರುವ ಲಸಿಕೆಯು ಮಾನವನ ದೇಹಕ್ಕೆ ‘ದುಪ್ಪಟ್ಟು ಸುರಕ್ಷತೆ’ ನೀಡಬಲ್ಲದು ಎಂಬ ಅಂಶ ಬೆಳಕಿಗೆ ಬಂದಿದೆ. 

‘ಲಸಿಕೆಯ ಪ್ರಯೋಗವು ನಿಗದಿಯಂತೆ ನಡೆಯುತ್ತಿದ್ದು, ತಂಡದ ಗುರಿಯಂತೆ ಸೆಪ್ಟೆಂಬರ್‌ನಲ್ಲಿ ಈ ಲಸಿಕೆ ಬಳಕೆಗೆ ಲಭ್ಯವಾಗುವ ಸಾಧ್ಯತೆ ಇದೆ’ ಎಂದು ಆಕ್ಸ್‌ಫರ್ಡ್‌ ಲಸಿಕೆಯ ಪ್ರಯೋಗಕ್ಕೆ ಒಪ್ಪಿಗೆ ನೀಡಿದ ಬರ್ಕ್‌ಶೈಯರ್‌ ಸಂಶೋಧನಾ ಸಮಿತಿಯ ಅಧ್ಯಕ್ಷ ಡೇವಿಡ್‌ ಕಾರ್ಪೆಂಟರ್‌ ತಿಳಿಸಿದರು. 

ಕ್ಲಿನಿಕಲ್‌ ಟ್ರಯಲ್‌ ಬಳಿಕ, ಮನುಷ್ಯರ ಮೇಲೆ ಈ ಲಸಿಕೆಯ ಪ್ರಯೋಗ ಮಾಡಲಾಗುತ್ತಿದೆ. ಲಸಿಕೆ ಪಡೆದ ವ್ಯಕ್ತಿಗಳ ರಕ್ತದ ಮಾದರಿಯನ್ನು ಪರಿಶೀಲನೆ ನಡೆಸಿದ ಸಂದರ್ಭದಲ್ಲಿ, ರಕ್ತದಲ್ಲಿ ರೋಗ ನಿರೋಧಕ ಕಣಗಳು ಏರಿಕೆಯಾಗಿರುವುದರ ಜೊತೆಗೆ ‘ಕಿಲ್ಲರ್‌ ಟಿ–ಸೆಲ್ಸ್‌’ (ವೈರಸ್‌ ಇರುವ ಕೋಶಗಳನ್ನು ನಾಶಮಾಡಬಲ್ಲ ಬಿಳಿ ರಕ್ತ ಕಣದ ಒಂದು ಮಾದರಿ) ಹೆಚ್ಚಾಗಿರುವುದೂ ಪತ್ತೆಯಾಗಿದೆ. ದೇಹದಲ್ಲಿನ ರೋಗನಿರೋಧಕ ಕಣಗಳು ಕೆಲ ತಿಂಗಳಷ್ಟೇ ಕಾರ್ಯನಿರ್ವಹಿಸಿದರೆ, ಕಿಲ್ಲರ್‌ ಟಿ ಸೆಲ್ಸ್‌ಗಳು ಹಲವು ವರ್ಷಗಳ ಕಾಲ ದೇಹದಲ್ಲಿ ಇರುತ್ತವೆ.

ಹೀಗಾಗಿ ಈ ಲಸಿಕೆಯು ಕೋವಿಡ್‌–19 ವಿರುದ್ಧ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬಹುದು ಎನ್ನಲಾಗಿದೆ.

ಈ ಸಂಶೋಧನೆಯು ಯಶಸ್ವಿಯಾಗಿದ್ದರೂ, ಆಕ್ಸ್‌ಫರ್ಡ್‌ ಲಸಿಕೆಯು ಕೊರೊನಾ ವೈರಸ್‌ ಮೇಲೆ ದೀರ್ಘಾವಧಿವರೆಗೆ ಪರಿಣಾಮ ಬೀರಲಿದೆ ಎನ್ನುವುದಕ್ಕೆ ಯಾವುದೇ ಸಾಕ್ಷ್ಯವಿಲ್ಲ ಎಂದು ಮೂಲಗಳು ತಿಳಿಸಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು