ಶುಕ್ರವಾರ, ಜುಲೈ 30, 2021
25 °C

ರಾಜಸ್ಥಾನ| ಅನರ್ಹತೆ ನೋಟಿಸ್‌ ಅನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ ಪೈಲಟ್‌ ಬಣ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಜೈಪುರ: ರಾಜಸ್ಥಾನ ವಿಧಾನಸಭೆ ಸ್ಪೀಕರ್‌ ನೀಡಿರುವ ಅನರ್ಹತೆಯ ನೋಟಿಸ್‌ ಅನ್ನು ಸಚಿನ್‌ ಪೈಲಟ್‌ ಬಣ ಗುರುವಾರ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದೆ. 

ಸಚಿನ್‌ ಪೈಲಟ್‌ ಪರವಾಗಿ ಅವರ ಬೆಂಬಲಿಗ ಶಾಸಕ ಪೃಥ್ವಿರಾಜ್‌ ಮೀನಾ ಅವರು ನೋಟಿಸ್‌ ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

 

 

 

ಸಚಿನ್‌ ಪೈಲಟ್‌ ಮತ್ತು ಅವರ ಬೆಂಬಲಿಗ ಶಾಸಕರು ಪಕ್ಷ ವಿರೋಧಿ ಚಟವಟಿಕೆಯಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್‌ ರಾಜಸ್ಥಾನ ಕಾಂಗ್ರೆಸ್‌ ಘಟಕವು ಸ್ಪೀಕರ್‌ ಸಿ.ಪಿ ಜೋಶಿ ಅವರಿಗೆ ದೂರು ನೀಡಿತ್ತು. ಇದೇ ಆಧಾರದಲ್ಲಿ ಸಚಿನ್‌ ಪೈಲಟ್‌ ಮತ್ತು ಅವರ ಜೊತೆ ಗುರುತಿಸಿಕೊಂಡಿರುವ 18 ಶಾಸಕರಿಗೆ ಬುಧವಾರ ಅನರ್ಹತೆಯ ನೋಟಿಸ್‌ ನೀಡಿರುವುದಾಗಿ ಸಿ.ಪಿ ಜೋಶಿ ಹೇಳಿದ್ದರು. ಶಾಸಕರು ಎರಡು ದಿನಗಳ ಒಳಗಾಗಿ ಉತ್ತರಿಸಬೇಕು ಎಂದು ನೋಟಿಸ್‌ನಲ್ಲಿ ತಾಕೀತು ಮಾಡಲಾಗಿತ್ತು.

 

ಈ ನೋಟಿಸ್‌ ವಿರುದ್ಧ ಸದ್ಯ ಪೈಲಟ್‌ ಬಣ ನ್ಯಾಯಾಲಯದ ಬಾಗಿಲು ತಟ್ಟಿದೆ. ಇಂದು ಮಧ್ಯಾಹ್ನ 3ಗಂಟೆಗೆ ಅರ್ಜಿಯ ವಿಚಾರಣೆ ನಡೆಯಲಿದೆ. ವಕೀಲರಾದ ಹರೀಶ್‌ ಸಾಳ್ವೆ ಮತ್ತು ಮುಕುಲ್‌ ರೋಹ್ಟಗಿ ಅವರು ಪೈಲಟ್‌ ಬಣವನ್ನು ಕೋರ್ಟ್‌ನಲ್ಲಿ ಪ್ರತಿನಿಧಿಸಲಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು