ಬುಧವಾರ, ಸೆಪ್ಟೆಂಬರ್ 29, 2021
20 °C

ಕಾರಿಗೆ ಬೆಂಕಿ ಹಚ್ಚಿ, ಭಾರತೀಯ ಸೈನಿಕನ ಅಪಹರಿಸಿದ ಶಂಕಿತ ಉಗ್ರರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀನಗರ: ದಕ್ಷಿಣ ಕಾಶ್ಮೀರದ ಕುಲ್ಗಾಂ ಜಿಲ್ಲೆಯಲ್ಲಿ ಶಂಕಿತ ಉಗ್ರರು ಭಾನುವಾರ ಸಂಜೆ ಭಾರತೀಯ ಸೈನಿಕನನ್ನು ಅಪಹರಿಸಿದ್ದಾರೆ. ನಂತರ ಅವರ ವಾಹನಕ್ಕೆ ಬೆಂಕಿ ಹಚ್ಚಿದ್ದಾರೆ.

‘ಬೆಟಾಲಿಯನ್‌-162ನ ರೈಫಲ್‌ಮನ್ ಶಕೀರ್ ಮನ್ಸೂರ್‌ ಅವರು ಭಾನುವಾರ ಸಂಜೆ 5ರಿಂದ ಕಾಣೆಯಾಗಿದ್ದಾರೆ. ಅವರು ಬಳಸುತ್ತಿದ್ದ ಕಾರು ಸುಟ್ಟ ಸ್ಥಿತಿಯಲ್ಲಿ ಕುಲ್ಗಂ ಬಳಿ ಪತ್ತೆಯಾಗಿದೆ. ಸೈನಿಕನನ್ನು ಭಯೋತ್ಪಾದಕರು ಅಪಹರಿಸಿದ್ದಾರೆ ಎಂದು ಶಂಕಿಸಲಾಗಿದೆ. ಅವರ ಪತ್ತೆಗಾಗಿ ಕಾರ್ಯಾಚರಣೆ ಪ್ರಗತಿಯಲ್ಲಿದೆ’ ಎಂದು ಸೇನೆಯ ಶ್ರೀನಗರ 15-ಕಾರ್ಪ್ಸ್ ಟ್ವೀಟ್ ಮಾಡಿದೆ.

ದಮ್ಹಾಲ್‌ನ ಹಾಂಜಿಪೊರಾ ಕಾರ್ಯನಿರ್ವಹಿಸುತ್ತಿರುವ, ಶೋಪಿಯಾನ್ ಜಿಲ್ಲೆಯ ನಿವಾಸಿ ಮನ್ಸೂರ್‌ ಅವರ ಕಾರನ್ನು ಅಡ್ಡಗಟ್ಟಿ ಉಗ್ರರು ಅವರನ್ನು ಅಪಹರಿಸಿದ್ದಾರೆ. ನಂತರ ಕಾರನ್ನು ಸುಟ್ಟುಹಾಕಲಾಗಿದೆ ಎಂದು ಮೂಲಗಳು ತಿಳಿಸಿವೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು