ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಸಮಾಜಕ್ಕೆ ಮರಳಿ ಪ್ರೀತಿ ನೀಡಲು' ವೀರಪ್ಪನ್ ಪುತ್ರಿ ವಿದ್ಯಾರಾಣಿ ರಾಜಕೀಯಕ್ಕೆ

ತಮಿಳುನಾಡು ಬಿಜೆಪಿ ಯುವ ಘಟಕದ ಉಪಾಧ್ಯಕ್ಷರಾಗಿ ನೇಮಕ
Last Updated 21 ಜುಲೈ 2020, 8:27 IST
ಅಕ್ಷರ ಗಾತ್ರ

ಚೆನ್ನೈ: ಕಾಡುಗಳ್ಳ ವೀರಪ್ಪನ್ ತಮಿಳುನಾಡು ಮತ್ತು ಕರ್ನಾಟಕದ ಕೆಲವು ಭಾಗಗಳಲ್ಲಿ ಭಯೋತ್ಪಾದಕನೆಂದೇಗುರುತಿಸಲ್ಪಡುತ್ತಾನೆ. ಆದರೆ ಅವನ ಮಗಳುವಿದ್ಯಾರಾಣಿ ಇದೀಗ ಸಮಾಜಕ್ಕೆ ಪ್ರೀತಿಯನ್ನು ಮರಳಿ ನೀಡಲು ಹೊರಟಿದ್ದಾರೆ.

'ಮೊದಲ ಮತ್ತು ಕೊನೆಯ ಭೇಟಿಯ ಕೆಲವೇ ನಿಮಿಷಗಳಲ್ಲಿ ನನ್ನ ತಂದೆ ಬದುಕಿಗೆ ನಿರ್ದೇಶನ ನೀಡಿದ್ದರು. ನನ್ನ ಜೀವನಕ್ಕೆ ನಿರ್ದೇಶನ ನೀಡಿದ ನಾಯಕ, ನನ್ನಪ್ಪ'ಎಂದು ತಂದೆಯನ್ನು ಬಣ್ಣಿಸಿದ್ದಾರೆ.

ಬೆಂಗಳೂರಿನಲ್ಲಿ ಐದು ವರ್ಷ ಕಾನೂನು ಶಿಕ್ಷಣ ವ್ಯಾಸಂಗ ಮಾಡಿರುವ ವಿದ್ಯಾರಾಣಿಯು ಈವರೆಗೆ ವೀರಪ್ಪನ್ ಪುತ್ರಿ ಎಂದೇ ಗುರುತಿಸಿಕೊಂಡವರು. ಇಂದು (ಜುಲೈ 21) ಅವರುತಮಿಳುನಾಡು ಬಿಜೆಪಿ ಯುವ ಘಟಕದ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.

ವಿದ್ಯಾರಾಣಿ ವೀರಪ್ಪನ್ ಎಂದು ತಮ್ಮನ್ನು ಕರೆದುಕೊಳ್ಳುವ ಅವರು, ತಮಿಳುನಾಡು-ಕರ್ನಾಟಕ ಗಡಿಯಲ್ಲಿರುವ ಗೋಪಿನಾಥಂನಲ್ಲಿರುವ ತನ್ನ ಅಜ್ಜನ ಮನೆಯಲ್ಲಿ ತಂದೆಯನ್ನು ಭೇಟಿಯಾದಾಗ ಮೂರನೇ ತರಗತಿ ಓದುತ್ತಿದ್ದರು.

ನಾನು ಅವರನ್ನು ಭೇಟಿಯಾದ ಮೊದಲ ಮತ್ತು ಕೊನೆಯ ಸಮಯ ಅದು. ನಾವು 30 ನಿಮಿಷ ಮಾತನಾಡಿದ್ದೇವೆ ಮತ್ತು ಅಂದಿನ ಸಂಭಾಷಣೆ ನನ್ನ ಮನಸ್ಸಿನಲ್ಲಿ ಇನ್ನೂ ಹಸಿರಾಗಿದೆ. ಅವರು ನನ್ನ ಕೈ ಹಿಡಿದುಕೊಂಡು ವೈದ್ಯಕೀಯ ಶಿಕ್ಷಣವನ್ನು ಪೂರೈಸಲು ಮತ್ತು ಜನರಿಗೆ ಸೇವೆ ಮಾಡಲು ಹೇಳಿದರು. ಅಂದಿನ ಅವರ ಮಾತಿನಿಂದಲೇ ನಾನಿಂದು ಇಲ್ಲಿದ್ದೇನೆ ಎಂದುಪ್ರಜಾವಾಣಿ ಸೋದರ ಪತ್ರಿಕೆ ಡೆಕ್ಕನ್ ಹೆರಾಲ್ಡ್‌ಗೆ ತಿಳಿಸಿದ್ದಾರೆ.

ಜನರಿಗೆ ಸೇವೆ ಸಲ್ಲಿಸಲೆಂದುನಾಗರಿಕ ಸೇವೆಗಳಿಗೆ ಸೇರ್ಪಡೆಯಾಗುವ ಕನಸು ವಿದ್ಯಾರಾಣಿ ಅವರಿಗಿತ್ತು.ಕಾನೂನು ಪದವಿ ಅಧ್ಯಯನ ಮಾಡಿದರು. ಆದರೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತೇರ್ಗಡೆಯಾಗಲು ಸಾಧ್ಯವಾಗಲಿಲ್ಲ.

'ವೀರಪ್ಪನ್ ಬಗ್ಗೆ ಎಲ್ಲರಿಗೂ ಭಯವಿತ್ತು. ಆದರೆ ನನ್ನನ್ನು ಅಂಥವನ ಮಗಳು ಎಂಬಂತೆ ಕೀಳಾಗಿ ಕಾಣಲಿಲ್ಲ.ಅಪಾರ ಪ್ರೀತಿ ಮತ್ತು ವಾತ್ಸಲ್ಯ ನೀಡಿತು. ಸಮಾಜವು ನನಗೆ ಕೊಟ್ಟದ್ದನ್ನು ಹಿಂದಿರುಗಿಸಲು ರಾಜಕೀಯ ಒಂದು ಸಾಧನ ಎಂದು ನಾನು ಭಾವಿಸುತ್ತೇನೆ. ನನ್ನನ್ನು ಜನರು ಸದಾ ಪ್ರೀತಿಸುತ್ತಿದ್ದರು. ನನ್ನ ಬಗ್ಗೆ ಯಾರಿಗೂ ಯಾವುದೇ ಪೂರ್ವಾಗ್ರಹ ಇರಲಿಲ್ಲ.ನಾನು ಇಂದು ಏನಾಗಿದ್ದೇನೋ ಅದಕ್ಕೆಈ ಪ್ರೀತಿ ಸಾಕಷ್ಟು ಸಹಾಯ ಮಾಡಿದೆ' ಎಂದು ಅವರು ಹೇಳಿದರು.

ಅರ್ಧ ದಶಕದಿಂದ ಬೆಂಗಳೂರಿನಲ್ಲಿ ಉಳಿದುಕೊಂಡಿರುವ ಬಗ್ಗೆ ಮಾತನಾಡುತ್ತಾ, ನಗರವು ನನಗೆ ಜೀವಮಾನದ ಸ್ನೇಹಿತರನ್ನು ನೀಡಿತು.ನಾನು ಯಾರೆಂದು ತಿಳಿದಿದ್ದರೂ ನನ್ನನ್ನು ತಾರತಮ್ಯದಿಂದ ನೋಡಿಲ್ಲ. ನನ್ನ ಸ್ನೇಹಿತರು ತುಂಬಾ ಒಳ್ಳೆಯವರು. ಜೀವನವನ್ನು ಧೈರ್ಯವಾಗಿ ಎದುರಿಸುವ ಸ್ಥೈರ್ಯ ರೂಪಿಸಿಕೊಳ್ಳಲು ಸಹಾಯ ಮಾಡಿದರು. ನನ್ನ ತಂದೆಯ ಬಗ್ಗೆ ಜನರ ಅಭಿಪ್ರಾಯ ಏನಾದರೂ ಇರಲಿ, ನನ್ನ ಪ್ರಕಾರ ಅವರೊಬ್ಬ ಒಳ್ಳೆಯ ಮನುಷ್ಯ. ಕಾಡುಗಳ ಬಳಿ ವಾಸಿಸುತ್ತಿದ್ದ ಜನರ ಜೀವನ ಸುಧಾರಿಸುವುದು ಅವರ ಉದ್ದೇಶವಾಗಿತ್ತು ಎಂದು ಹೇಳಿದರು.

ರಾಜಕೀಯಕ್ಕೇ ಸೇರಲು ಬಿಜೆಪಿಯನ್ನೇ ಏಕೆ ಆರಿಸಿಕೊಂಡಿರಿ ಎಂಬ ಪ್ರಶ್ನೆಗೆ ಉತ್ತರಿಸಿದವಿದ್ಯಾರಾಣಿ, ಪ್ರಧಾನಿ ನರೇಂದ್ರ ಮೋದಿಯವರ ರಾಷ್ಟ್ರದ ಬಗೆಗಿನ ದೃಷ್ಟಿಕೋನದಿಂದ ಪ್ರೇರಿತರಾಗಿದ್ದೆ. ಆದ್ದರಿಂದಲೇ ಭಾರತೀಯ ಜನತಾ ಪಕ್ಷವನ್ನು ಆರಿಸಿಕೊಂಡೆ ಎನ್ನುತ್ತಾರೆ. ಸದ್ಯ ತಮಿಳುನಾಡಿನಲ್ಲಿ ಬಿಜೆಪಿ ಯಾವುದೇ ನೆಲೆಯನ್ನು ಹೊಂದಿಲ್ಲ.

ನಿಜ ಹೇಳಬೇಕೆಂದರೆ, ಎರಡು ವರ್ಷಗಳ ಹಿಂದೆ ನಾನು ಮಾಜಿ ಕೇಂದ್ರ ಸಚಿವ ಪೊನ್ ರಾಧಾಕೃಷ್ಣನ್ ಅವರೊಂದಿಗೆ ಮಾತುಕತೆ ನಡೆಸುವವರೆಗೂ ರಾಜಕೀಯಕ್ಕೆ ಸೇರುವ ಉದ್ದೇಶ ನನಗೆ ಇರಲಿಲ್ಲ. ರಾಧಾಕೃಷ್ಣನ್ ಅವರೇ ಮಾತೃಭೂಮಿಯ ಸೇವೆ ಮಾಡಲು ನನ್ನನ್ನು ಪ್ರೇರೇಪಿಸಿದರು ಮತ್ತು ಈ ವರ್ಷದ ಫೆಬ್ರವರಿಯಲ್ಲಿ ನಾನು ಔಪಚಾರಿಕವಾಗಿ ಬಿಜೆಪಿಗೆ ಸೇರಿಕೊಂಡೆ ಎಂದರು.

ಕಾನೂನು ಶಿಕ್ಷಣವನ್ನು ಪಡೆದಿದ್ದರೂ ಕೂಡ, ಕೃಷ್ಣಗಿರಿನಲ್ಲಿ ಮಕ್ಕಳ ಶಾಲೆ ನಡೆಸುವುದು ತನಗೆ ಅಪಾರ ತೃಪ್ತಿಯನ್ನು ನೀಡುತ್ತದೆ. 'ಚಿಕ್ಕ ವಯಸ್ಸಿನಿಂದಲೇ ಮಕ್ಕಳನ್ನು ರೂಪಿಸಲು ಸಹಾಯ ಮಾಡುವುದು ಒಂದು ರೀತಿಯ ಆಶೀರ್ವಾದ. ನಾನು ಇದನ್ನು ನನ್ನ ಪ್ರಾಥಮಿಕ ಸಾಮಾಜಿಕ ಜವಾಬ್ದಾರಿ ಎಂದು ಪರಿಗಣಿಸುತ್ತೇನೆ ಮತ್ತು ಆದ್ದರಿಂದ ಶಾಲೆಯನ್ನು ನಡೆಸುವುದನ್ನು ಆನಂದಿಸುತ್ತೇನೆ' ಎಂದು ವಿದ್ಯಾರಾಣಿ ತಿಳಿಸಿದರು.

ಕುಖ್ಯಾತ ಗಂಧದ ಕಳ್ಳಸಾಗಣೆದಾರ, ದಂತಚೋರನಾಗಿದ್ದ ವೀರಪ್ಪನ್‌ನನ್ನು 2004 ರಲ್ಲಿ ತಮಿಳುನಾಡಿನ ವಿಶೇಷ ಕಾರ್ಯಪಡೆ (STF) ಎನ್‌ಕೌಂಟರ್ ಮಾಡಿತ್ತು. ವೀರಪ್ಪನ್ 2000 ರಲ್ಲಿ ಕನ್ನಡದ ಪ್ರಖ್ಯಾತ ನಟ ರಾಜ್‌ಕುಮಾರ್ ಮತ್ತು ಕರ್ನಾಟಕದ ಮಾಜಿ ಸಚಿವ ಎಚ್.ನಾಗಪ್ಪ ಅವರನ್ನು ಅಪಹರಿಸಿದ್ದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT