ಶನಿವಾರ, ಸೆಪ್ಟೆಂಬರ್ 18, 2021
28 °C

ಧಾರಾವಿಯಲ್ಲಿ ಕೈಗೊಂಡ ಕೋವಿಡ್‌ ನಿಯಂತ್ರಣಾ ಕ್ರಮಗಳಿಗೆ ಡಬ್ಲ್ಯುಎಚ್‌ಒ ಮೆಚ್ಚುಗೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಜೆನೆವಾ: ವಿಶ್ವದ ಅತಿದೊಡ್ಡ ಕೊಳೆಗೇರಿಗಳಲ್ಲಿ (ಸ್ಲಂ) ಒಂದಾದ ಮುಂಬೈನ ಧಾರಾವಿಯಲ್ಲಿ ಕೋವಿಡ್‌ ಹರಡುವಿಕೆಯನ್ನು ತಡೆಗಟ್ಟಲು ಕೈಗೊಂಡ ಕ್ರಮಗಳನ್ನು ವಿಶ್ವ ಆರೋಗ್ಯ ಸಂಸ್ಥೆ ಶ್ಲಾಘಿಸಿದೆ. 

ಆನ್‌ಲೈನ್‌  ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ವಿಶ್ವ ಆರೋಗ್ಯ ಸಂಸ್ಥೆಯ ಪ್ರಧಾನ ನಿರ್ದೇಶಕ ಟೆಡ್ರೊಸ್ ಅಧನೋಮ್ ಗೆಬ್ರೇಯೆಸಸ್, ‘ದೊಡ್ಡ ಪ್ರಮಾಣದಲ್ಲಿ ಕೊರೊನಾ ಹರಡಿದ್ದರೂ, ಅದನ್ನು ನಿಯಂತ್ರಣಕ್ಕೆ ತರಬಹುದೆಂಬುದಕ್ಕೆ ಜಗತ್ತಿನಲ್ಲಿ ಹಲವಾರು ನಿದರ್ಶನಗಳಿವೆ. ಇದಕ್ಕೆ ಉತ್ತಮ ಉದಾಹರಣೆ ಇಟಲಿ, ಸ್ಪೇನ್‌, ದಕ್ಷಿಣ ಕೊರಿಯಾ ಹಾಗೂ ಧಾರಾವಿ ಕೊಳೆಗೇರಿ’ ಎಂದು ಹೇಳಿದ್ದಾರೆ. 

‘ರಾಷ್ಟ್ರೀಯ ಏಕತೆ ಮತ್ತು ಜಾಗತಿಕ ಒಗ್ಗಟ್ಟಿನೊಂದಿಗೆ ಸಂಯೋಜಿಸಲ್ಪಟ್ಟ ಆಕ್ರಮಣಕಾರಿ ಕ್ರಮದಿಂದ ಮಾತ್ರ ಮಹಾಮಾರಿ ಕೋವಿಡ್ ಅನ್ನು ನಿಯಂತ್ರಿಸಬಹುದು.‌ ಇದರಲ್ಲಿ  ನಾಯಕತ್ವ, ಸಮುದಾಯ ಭಾಗವಹಿಸುವಿಕೆ ಮತ್ತು ಸಾಮೂಹಿಕ ಒಗ್ಗಟ್ಟಿನ ಪಾತ್ರ ಮಹತ್ವದ್ದು’ ಎಂದು ಹೇಳಿದರು. 

ಧಾರಾವಿಯ ವಿಸ್ತೀರ್ಣ 2.5 ಚದರ ಕಿ.ಮೀ. ಇದ್ದು, ಇಲ್ಲಿ 6.50 ಲಕ್ಷಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದಾರೆ. 

ಮುಂಬೈನಲ್ಲಿ ಮೊದಲ ಕೋವಿಡ್‌ ಪ್ರಕರಣ ದಾಖಲಾದ ಮೂರು ವಾರಗಳ ನಂತರ, ಏ.1 ರಂದು ಧಾರಾವಿಯಲ್ಲಿ ಮೊದಲ ಕೊರೊನಾ ಪ್ರಕರಣ ವರದಿಯಾಗಿದೆ.

ಕೋವಿಡ್‌ ಹಾಟ್‌ಸ್ಪಾಟ್‌ ಆಗಿದ್ದ ಧಾರಾವಿಯಲ್ಲಿ ಜೂನ್‌ 9ರ ವೇಳೆಗೆ 2,347 ಪ್ರಕರಣಗಳು ವರದಿಯಾಗಿದ್ದವು. ಸದ್ಯ ಇಲ್ಲಿ ಕೇವಲ 291 ಸಕ್ರಿಯ ಪ್ರಕರಣಗಳಿದ್ದು, 1,815 ಮಂದಿ ಗುಣಮುಖರಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು