ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯವಾಗಿದ್ದೇನೆ, ಭಾರತಕ್ಕೆ ಕರೆದೊಯ್ಯಿರಿ: ಚೀನಾದಲ್ಲಿ ಆಂಧ್ರ ಮಹಿಳೆ ಆರ್ತನಾದ

ಕೊರೊನಾ ಆತಂಕ | ಜ್ವರದ ಕಾರಣ ಆಂಧ್ರ ಮಹಿಳೆ ಚೀನಾದಲ್ಲಿ ಬಿಟ್ಟು ಬಂದ ಏರ್ ಇಂಡಿಯಾ
Last Updated 3 ಫೆಬ್ರುವರಿ 2020, 13:03 IST
ಅಕ್ಷರ ಗಾತ್ರ
ADVERTISEMENT
""

ಕರ್ನೂಲ್ (ಆಂಧ್ರಪ್ರದೇಶ): ಜ್ವರ ಇದೆಎಂಬ ಕಾರಣಕ್ಕಾಗಿ ಆಂಧ್ರಪ್ರದೇಶದ ಸಾಫ್ಟ್‌‌ವೇರ್ ಎಂಜಿನಿಯರ್‌‌ಳನ್ನು ಏರ್ ಇಂಡಿಯಾ ವಿಮಾನದಲ್ಲಿ ಕರೆತರದೆಚೀನಾದಲ್ಲಿಯೇ ಬಿಟ್ಟು ಬಂದಿರುವ ಪ್ರಸಂಗ ಇದೀಗ ಬೆಳಕಿಗೆ ಬಂದಿದೆ.

ಕರೊನಾ ವೈರಸ್‌‌ನಿಂದ ತತ್ತರಿಸಿರುವ ವುಹಾನ್ ನಗರದಲ್ಲಿರುವಮಹಿಳೆ ನಾನು ಆರೋಗ್ಯವಾಗಿದ್ದು, ನನ್ನನ್ನು ಭಾರತಕ್ಕೆ ಕರೆದೊಯ್ಯಿರಿ ಎಂದು ಪರಿಪರಿಯಾಗಿ ಬೇಡಿಕೊಂಡರೂ ಯಾವುದೇ ಪ್ರಯೋಜನವಾಗದೆ ನರಳುತ್ತಿದ್ದಾರೆ.

ಆಂಧ್ರದ ಕರ್ನೂಲ್ ಮೂಲದ ಅನೆಮ್ ಜ್ಯೋತಿ ವುಹಾನ್ ನಗರದಲ್ಲಿ ಸಿಲುಕಿರುವ ಮಹಿಳೆ. ಈಕೆ ಸಾಫ್ಟ್‌‌ವೇರ್ ಎಂಜಿನಿಯರ್ ಆಗಿದ್ದು ಉದ್ಯೋಗ ನಿಮಿತ್ತ ಚೀನಾಕ್ಕೆ ತೆರಳಿದ್ದರು.

ಕೊರೊನಾ ವೈರಸ್ ಪೀಡಿತಚೀನಾದಲ್ಲಿದ್ದ ಎಲ್ಲಾ ಭಾರತೀಯರನ್ನು ಕರೆತರಲು ಭಾರತ ಸರ್ಕಾರ ಏರ್ ಇಂಡಿಯಾ ವಿಮಾನಗಳನ್ನು ಚೀನಾಕ್ಕೆ ಕಳುಹಿಸಿತ್ತು. ಈ ಸಮಯದಲ್ಲಿ 323 ಮಂದಿ ಭಾರತೀಯರುಮೊದಲ ವಿಮಾನದಲ್ಲಿಯೂ, ಎರಡನೆ ವಿಮಾನದಲ್ಲಿ 7 ಮಂದಿ ಮಾಲ್ಡೀವ್ಸ್ಪ್ರಜೆಗಳೂ ಸೇರಿದಂತೆ 324 ಮಂದಿ ಪ್ರಯಾಣಿಕರು ಭಾರತಕ್ಕೆ ಬಂದರು.

ವುಹಾನ್ ನಲ್ಲಿಯೇ ನೆಲೆಸಿದ್ದ ಆಂಧ್ರಪ್ರದೇಶದ ಆನೆಮ್ ಜ್ಯೋತಿ ಎಂಬ ಮಹಿಳೆ ತಾನು ಭಾರತಕ್ಕೆ ಹಿಂದಿರುಗುವುದಾಗಿ ಹೇಳಿ ಕಳೆದ ಶುಕ್ರವಾರವೇ ರಾಯಭಾರ ಕಚೇರಿಯನ್ನು ಸಂಪರ್ಕಿಸಿದರು.

ರಾಯಭಾರ ಕಚೇರಿಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಜ್ಯೋತಿಗೆ ಜ್ವರ ಇರುವುದು ಕಂಡು ಬಂತು. ಇದೇ ಕಾರಣದಿಂದಾಗಿ ಆಕೆಯನ್ನು ಎರಡನೇ ವಿಮಾನದಲ್ಲಿ ಕರೆದೊಯ್ಯುವುದಾಗಿ ಏರ್ ಇಂಡಿಯಾ ಸಿಬ್ಬಂದಿ ತಿಳಿಸಿದರು.

ಶನಿವಾರ ಎರಡನೆ ವಿಮಾನ ಬಂದಾಗಲೂ ಜ್ಯೋತಿ ಅವರನ್ನು ಕರೆದೊಯ್ಯಲು ನಿರಾಕರಿಸಲಾಯಿತು. ಆಕೆಗೆ ಈಗ ಜ್ವರ ವಾಸಿಯಾಗಿದ್ದರೂ, ಈಗ ಭಾರತಕ್ಕೆ ಬರಲು ರಾಯಭಾರ ಕಚೇರಿಯನ್ನು ಸಂಪರ್ಕಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.ಭಾರತಕ್ಕೆ ಕರೆದೊಯ್ಯುವಂತೆ ಜ್ಯೋತಿ ವಿಡಿಯೋ ಮೂಲಕ ಮನವಿ ಕೇಳಿಕೊಂಡಿದ್ದಾರೆ.

ಇಬ್ಬರು ಆಂಧ್ರಪ್ರದೇಶದವರೂ ಸೇರಿದಂತೆ ಇಡೀ ಆಂಧ್ರದಿಂದ ತೆರಳಿದ್ದ ತಂಡ ವುಹಾನ್‌ನಲ್ಲಿ ಸಿಲುಕಿಕೊಂಡಿದ್ದು,, ಕೊರೊನಾ ವೈರಸ್ ತಮಗೆ ತಗುಲದ ಕಾರಣ ಚೀನಾ ಸರ್ಕಾರ ಕೂಡ ಯಾವುದೇ ಸೌಲಭ್ಯಗಳನ್ನು ನೀಡುತ್ತಿಲ್ಲ. ಅತಂತ್ರರಾಗಿರುವ ನಮ್ಮನ್ನು ಇಲ್ಲಿಂದ ಕರೆದೊಯ್ಯುವಂತೆ ಜ್ಯೋತಿ ಮನೆಯವರ ಬಳಿ ಹೇಳಿಕೊಂಡಿದ್ದಾರೆ.

ಆಂಧ್ರದಲ್ಲಿರುವ ಅನೆಮ್ ಜ್ಯೋತಿ ಕುಟುಂಬದವರು

ಫೆ.18ಕ್ಕೆ ಮಗಳಿಗೆ ಮದುವೆ ಇದೆ, ಬೇಗ ಕರೆತನ್ನಿ

ಮಗಳು ಅನೆಮ್ ಜ್ಯೋತಿಗೆ ಫೆ.18ಕ್ಕೆ ಮದುವೆ ನಿಶ್ಚಯವಾಗಿದೆ. ನಮ್ಮ ಮಗಳು ಆರೋಗ್ಯವಾಗಿದ್ದಾಳೆ. ಆಕೆಗೆ ಯಾವುದೇ ವೈರಸ್ ತಗುಲಿಲ್ಲ. ಅಲ್ಲಿನ ವಾತಾವರಣದಿಂದ ಸ್ವಲ್ಪ ಜ್ವರ ಕಾಣಿಸಿಕೊಂಡಿರಬಹುದು. ಆಕೆಯನ್ನು ಭಾರತಕ್ಕೆ ಕರೆತನ್ನಿ ಎಂದು ಜ್ಯೋತಿ ತಾಯಿ ಪ್ರಮೀಳಾಕೇಂದ್ರಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.ಆಂಧ್ರದ ಉದ್ಯೋಗಿಯೂ ಸೇರಿದಂತೆ 58 ಮಂದಿ ಟಿಎಲ್ ಸಿ ಸಾಫ್ಟ್ ವೇರ್ ಸಂಸ್ಥೆಯ ಉದ್ಯೋಗಿಗಳು ವುಹಾನ್ ನಗರದಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಎಎನ್ ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT