ಬುಧವಾರ, ಏಪ್ರಿಲ್ 14, 2021
31 °C

ಅಮೆರಿಕದಲ್ಲಿ ಪಾಕ್‌ ಪ್ರಧಾನಿ ಭಾಷಣಕ್ಕೆ ಬಲೂಚಿಗಳಿಂದ ಪ್ರತಿಭಟನೆ

ಏಜನ್ಸೀಸ್‌ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್‌: ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಅಮೆರಿಕ ಪ್ರವಾಸ ಕೈಗೊಂಡಿದ್ದು, ಅಮೆರಿಕದಲ್ಲಿ ನೆಲಸಿರುವ ಪಾಕಿಸ್ತಾನಿಯರನ್ನು ಉದ್ದೇಶಿಸಿ ಖಾನ್ ಭಾಷಣಕ್ಕೆ ಬಲೂಚಿ ಜನಾಂಗಗಳ ಜನರು ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.

ಭಾನುವಾರ ಖಾನ್ ಭಾಷಣ ವೇಳೆ ಪಾಕ್‌ನ ಅಲ್ಪಸಂಖ್ಯಾತ ಸಿಂಧಿ, ಬಲೂಚಿ ಮತ್ತು ಮೊಹಜಿರ್ಸ್ ಜನಾಂಗಗಳಿಗೆ ಸೇರಿದ ಅನಿವಾಸಿ ಪಾಕಿಸ್ತಾನಿಯರು ಪ್ರತಿಭಟನೆ ವ್ಯಕ್ತಪಡಿಸಿದರು.

ಸಿಂಧ್‌ ಮತ್ತು ಬಲೂಚಿಸ್ತಾನದಲ್ಲಿ ನಡೆಯುತ್ತಿರುವ ಮಾನವಹಕ್ಕುಗಳ ಉಲ್ಲಂಘನೆ ಕುರಿತು ಅಮೆರಿಕ ಕಾಂಗ್ರೆಸ್‌ನ 10 ಸದಸ್ಯರು ಟ್ರಂಪ್‌ ಅವರನ್ನು ಶನಿವಾರ ಭೇಟಿ ಮಾಡಿ ಪಾಕ್‌ ಪ್ರಧಾನಿ ಅವರೊಂದಿಗಿನ ಮಾತುಕತೆಯಲ್ಲಿ ವಿಷಯ ಪ್ರಸ್ತಾಪಿಸುವಂತೆ ಮನವಿ ಮಾಡಿದ್ದಾರೆ.

ಇಮ್ರಾನ್‌ ಖಾನ್‌ ಸೋಮವಾರ ಶ್ವೇತಭವನದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರನ್ನು ಭೇಟಿ ಮಾಡಲಿದ್ದಾರೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು