ಶುಕ್ರವಾರ, ಜೂನ್ 5, 2020
27 °C
ಚೇತರಿಸುತ್ತಿದೆ ಚೀನಾ

ಕೊರೊನಾ ಮೊದಲು ಪತ್ತೆಯಾದ ವುಹಾನ್‌ನಲ್ಲಿ ಆರಂಭಗೊಳ್ಳುತ್ತಿದೆ ವಾಣಿಜ್ಯ ಚಟುವಟಿಕೆ

ಎಪಿ Updated:

ಅಕ್ಷರ ಗಾತ್ರ : | |

ವುಹಾನ್‌: ಮಾರಕ ಕೊರೊನಾ ವೈರಸ್ ಸೋಂಕು (ಕೋವಿಡ್‌–19) ಮೊದಲಿಗೆ ಪತ್ತೆಯಾಗಿದ್ದ ಚೀನಾದ ವುಹಾನ್‌ ನಗರದಲ್ಲಿ ಸೋಮವಾರ ವಾಣಿಜ್ಯ ಚಟುವಟಿಕೆ ಪುನರಾರಂಭವಾಗತೊಡಗಿದೆ.

ಆದರೆ, ಎರಡು ತಿಂಗಳು ಕಡ್ಡಾಯ ಗೃಹವಾಸದಲ್ಲಿದ್ದ ಲಕ್ಷಾಂತರ ಗ್ರಾಹಕರು ಸೋಂಕು ಪರಿಣಾಮದ ಆತಂಕದಿಂದ ಇನ್ನೂ ಹೊರಬಂದಿಲ್ಲ. ಸ್ಥಳೀಯಾಡಳಿತ ವಿವಿಧ ಸೋಂಕು ನಿರೋಧಕ ಕ್ರಮಗಳನ್ನು ಹಿಂತೆಗೆದುಕೊಂಡಿರುವುದು ಇದಕ್ಕೆ ಕಾರಣ.

‘ನನಗೆ ಹೆಚ್ಚು ಖುಷಿಯಾಗುತ್ತಿದೆ. ಅಳಬೇಕು ಎನಿಸುತ್ತಿದೆ’ ಎಂದು ಚುಹೆ ಹ್ಯಾಂಜಿ ಪೆಡೆಸ್ಟ್ರೀರಿಯನ್ ಮಾಲ್‌ನಲ್ಲಿದ್ದ ಮಹಿಳೆಯೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಸೋಮವಾರ ಶೇ 70 ರಿಂದ 80ರಷ್ಟು ಮಳಿಗೆಗಳು ತೆರೆದಿದ್ದವು. ಮುಂಜಾಗರೂಕತೆಯಾಗಿ ಬಹುತೇಕ ಮಳಿಗೆಗಳು ಒಂದು ಬಾರಿಗೆ ಇಂತಿಷ್ಟೇ ಜನರು ಪ್ರವೇಶಿಸಬಹುದು ಎಂದು ಮಿತಿ ಹೇರಿವೆ. ಅಲ್ಲದೆ, ಗ್ರಾಹಕರ ಕೈಗಳಿಗೆ ಸ್ಯಾನಿಟೈಜರ್ ಅನ್ನು ಸಿಂಪಡಿಸುತ್ತಿವೆ.

ನಗರದಲ್ಲಿ ಬಸ್ ಹಾಗೂ ಸಬ್ ವೇ ಸೇವೆಗಳು ಚಾಲನೆಗೊಂಡಿವೆ. ರೈಲು ಸೇವೆಯು ಶನಿವಾರವೇ ಆರಂಭವಾಗಿತ್ತು. ಚೀನಾದ ಉತ್ಪಾದನೆ ಮತ್ತು ಸಾರಿಗೆ ವ್ಯವಸ್ಥೆಯ ಕೇಂದ್ರ ತಾಣವಾದ ವುಹಾನ್‌ನಲ್ಲಿ ಈ ಮೂಲಕ ಹಲವು ಚಟುವಟಿಕೆಗಳು ಹಳಿಗೆ ಮರಳುತ್ತಿವೆ.

‘ಎರಡು ತಿಂಗಳು ಮನೆಯಲ್ಲಿಯೇ ಬಂಧಿಯಾಗಿದ್ದೆ. ಈಗ ಕುಣಿಯಬೇಕು ಎನಿಸುತ್ತಿದೆ’ ಎಂದು ಕೇಟ್‌ ಎಂಬುವ ಗ್ರಾಹಕ ಪ್ರತಿಕ್ರಿಯಿಸಿದ್ದಾರೆ. ಸೋಂಕು ಹರಡಬಹುದು ಎಂಬ ಆತಂಕವನ್ನು ತಳ್ಳಿಹಾಕಿರುವ ಹಲವು ಕೈಗಾರಿಕೆಗಳ ಪ್ರತಿನಿಧಿಗಳು ಚಟುವಟಿಕೆ ಆರಂಭಿಸುವ ಉತ್ಸಾಹದಲ್ಲಿ ಇದ್ದರು.

ಹ್ಯುಬೆ ಪ್ರಾಂತ್ಯದಲ್ಲಿ ಹೇರಲಾಗಿದ್ದ ಬಹುತೇಕ ನಿರ್ಬಂಧಗಳನ್ನು ಮಾರ್ಚ್‌ 23ರಂದು ತೆಗೆಯಲಾಗಿದೆ. ಚೀನಾದ ರಾಷ್ಟ್ರೀಯ ಆರೋಗ್ಯ ಮಿಷನ್ ಮಾಹಿತಿ ಅನುಸಾರ, ದೇಶದಲ್ಲಿ ಒಟ್ಟು 81,740 ಜನರಿಗೆ ಕೊರೊನಾ ವೈರಸ್ ಸೋಂಕು ತಗುಲಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು