ಬುಧವಾರ, ಏಪ್ರಿಲ್ 1, 2020
19 °C

ಕೊರೊನಾ ಭೀತಿ | ಒಲಿಂಪಿಕ್ ಆಯೋಜನೆಯಲ್ಲಿ ಸಣ್ಣ ಬದಲಾವಣೆಯೂ ಇಲ್ಲ: ಸಿದ್ಧತಾ ಸಮಿತಿ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಟೋಕಿಯೊ: ಈ ವರ್ಷ ಜಪಾನ್‌ನಲ್ಲಿ ನಡೆಯಬೇಕಿರುವ ಟೊಕಿಯೊ ಒಲಿಂಪಿಕ್‌ ಕ್ರೀಡಾಕೂಟಕ್ಕೆ ಕೊರೊನಾ ವೈರಸ್‌ ಭೀತಿ ಎದುರಾಗಿದ್ದು, ಕ್ರೀಡಾಕೂಟವನ್ನು ಬೇರೆ ಕಡೆಗೆ ಸ್ಥಳಾಂತರಿಸಲಾಗುತ್ತದೆ ಎಂಬ ವದಂತಿಗಳು ಹರಿದಾಡುತ್ತಿವೆ. ಆದರೆ, ಒಲಿಂಪಿಕ್‌ ಸಿದ್ಧತಾ ಸಮಿತಿಯು ಎಲ್ಲ ವದಂತಿಗಳನ್ನೂ ಅಲ್ಲಗಳೆದಿದೆ.

‘ಕ್ರೀಡಾಕೂಟವನ್ನು ಆಯೋಜಿಸುವ ವಿಚಾರದಲ್ಲಿ ಸಣ್ಣ ಬದಲಾವಣೆಯೂ ಇಲ್ಲ’ ಎಂದು ಟೋಕಿಯೊಒಲಿಂಪಿಕ್‌ ಸಿದ್ಧತಾ ಸಮಿತಿಯ ಉಪನಿರ್ದೇಶಕ ಕಸ್ತುರ ಎನ್ಯೊ ತಿಳಿಸಿದ್ದಾರೆ. ಮುಂದುವರಿದು, ವೈರಸ್‌ ಸಮಸ್ಯೆಯನ್ನು ಈವರೆಗೂ ಎದುರಿಸುತ್ತಿದ್ದೇವೆಯಾದರೂ, ಜುಲೈ 24ರಿಂದ ಆಗಸ್ಟ್‌ 9ರವರೆಗೆ ನಡೆಯಲಿರುವ ಒಲಿಂಪಿಕ್‌ಗೆ ಯಾವುದೇ ತೊಂದರೆಯಾಗದು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಒಲಿಂಪಿಕ್‌ ಸಿದ್ಧತೆಗಾಗಿ ಸುಮಾರು ₹ 8,600 ($ 12 ಬಿಲಿಯನ್‌) ಕೋಟಿಗೂ ಹೆಚ್ಚು ಹಣ ವ್ಯಯಿಸಿರುವ ಜಪಾನ್‌, ಕೊರೊನಾ ವೈರಸ್‌ನಿಂದಾಗಿ ಮೂಡಿರುವ ಆತಂಕವನ್ನು ದೂರಮಾಡಲು ಪ್ರಯತ್ನಿಸುತ್ತಿದೆ.

ಕ್ರೀಡಾಕೂಟವು ಆರು ತಿಂಗಳಿನಿಂದ 1 ವರ್ಷದ ಅವಧಿಯವರೆಗೆ ಮುಂದೂಡಿಕೆಯಾಗಬಹುದು ಎಂದು ಕೆಲವು ಜಪಾನ್‌ ಮಾಧ್ಯಮಗಳು ವರದಿ ಮಾಡಿವೆ. ಅದನ್ನು ಅಲ್ಲಗಳೆದಿರುವ ಎನ್ಯೊ, ‘ಅಂತಹ ಯಾವುದೇ ಮಾತುಕತೆ ನಡೆದಿಲ್ಲ’ ಎಂದು ತಿಳಿಸಿದ್ದಾರೆ.

‘ಕ್ರೀಡಾಕೂಟವನ್ನು ನಿಗದಿಯಂತೆ ಆಯೋಜಿಸಲು ಬದ್ಧವಾಗಿದ್ದೇವೆ’ ಎಂದು ಅಂತರರಾಷ್ಟ್ರೀಯ ಒಲಿಂಪಿಕ್‌ ಸಮಿತಿ ಅಧ್ಯಕ್ಷ ಥಾಮಸ್‌ ಬಾಚ್‌ ಗುರುವಾರ ಹೇಳಿದ್ದರು.

ಜಾಪನ್‌ನಲ್ಲಿ ಸದ್ಯ 200ಕ್ಕೂ ಹೆಚ್ಚು ಕೊರೊನಾ ವೈರಸ್‌ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, 4 ಮಂದಿ ಮೃತಪಟ್ಟಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು