ಶನಿವಾರ, ಜೂಲೈ 4, 2020
28 °C

Covid-19 World Update | ವಿಶ್ವದಾದ್ಯಂತ ಒಂದೇ ದಿನ 1 ಲಕ್ಷ ಮಂದಿಗೆ ಸೋಂಕು

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

Coronavirus

ಜಿನೀವಾ:  ಜಗತ್ತಿದಾದ್ಯಂತ 5626047 ಸೋಂಕು ಪ್ರಕರಣಗಳು ವರದಿಯಾಗಿವೆ. ಅಮೆರಿಕದಲ್ಲಿ 1684174, ಬ್ರೆಜಿಲ್ -391222,  ರಷ್ಯಾದಲ್ಲಿ 370680, ಬ್ರಿಟನ್‌ನಲ್ಲಿ 268615 ಸೋಂಕು ಪ್ರಕರಣಗಳು ಪತ್ತೆಯಾಗಿವೆ ಎಂದು ಜಾನ್ ಹಾಪ್ಕಿನ್ಸ್ ಕೊರೊನಾವೈರಸ್ ರಿಸೋರ್ಸ್ ಸೆಂಟರ್ ವರದಿ ಮಾಡಿದೆ. 

ಇಲ್ಲಿಯವರಿಗೆ 351815 ಮಂದಿ ಕೋವಿಡ್ -19 ರೋಗದಿಂದ ಸಾವಿಗೀಡಾಗಿದ್ದಾರೆ. ಅಮೆರಿಕದಲ್ಲಿ 99,123 ಮಂದಿ ಸಾವಿಗೀಡಾಗಿದ್ದು, ಬ್ರಿಟನ್‌ನಲ್ಲಿ 37542 ಮತ್ತು ಇಟಲಿಯಲ್ಲಿ 32,955 ಮಂದಿ ಮೃತಪಟ್ಟಿದ್ದಾರೆ.  

24 ಗಂಟೆಗಳ ಅವಧಿಯಲ್ಲಿ ವಿಶ್ವದಾದ್ಯಂತ ಸುಮಾರು 1 ಲಕ್ಷ ಜನರಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಹೇಳಿದೆ.

ಒಂದೇ ದಿನ ಜಗತ್ತಿನಾದ್ಯಂತ 99,780 ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಈ ಪೈಕಿ 1,486 ಮಂದಿ ಮೃತಪಟ್ಟಿದ್ದಾರೆ. ಅಮೆರಿಕದಲ್ಲೇ ಅತಿ ಹೆಚ್ಚು ಪ್ರಕರಣ ಪತ್ತೆಯಾಗಿದೆ ಎಂದು ಡಬ್ಲ್ಯುಎಚ್‌ಒ ತಿಳಿಸಿದೆ.

ಇದನ್ನೂ ಓದಿ: 

ರಷ್ಯಾದಲ್ಲಿ ಕೋವಿಡ್-19 ನಿಂದಾಗಿ 3,807 ಮಂದಿ ಸಾವಿಗೀಡಾಗಿದ್ದು, ಪ್ರಕರಣಗಳ ಸಂಖ್ಯೆ 3.62 ಲಕ್ಷ ದಾಟಿದೆ. ಅಮೆರಿಕ ಮತ್ತು ಬ್ರೆಜಿಲ್ ನಂತರ ಅತಿ ಹೆಚ್ಚು ಸೋಂಕಿತರು ರಷ್ಯಾದಲ್ಲಿ ಇದ್ದಾರೆ.

ಬ್ರೆಜಿಲ್‌ನಲ್ಲಿ ಸೋಂಕಿತರ ಸಂಖ್ಯೆ 3.91 ಲಕ್ಷ ದಾಟಿದ್ದು, 24,512 ಜನ ಈವರೆಗೆ ಸಾವಿಗೀಡಾಗಿದ್ದಾರೆ. ಬ್ರಿಟನ್‌ನಲ್ಲಿ 2.66 ಲಕ್ಷಕ್ಕೂ ಹೆಚ್ಚು ಮಂದಿಗೆ ಸೋಂಕು ತಗುಲಿದ್ದು, 37,130 ಜನ ಈವರೆಗೆ ಮೃತಪಟ್ಟಿದ್ದಾರೆ.

ಇದನ್ನೂ ಓದಿ: 

ಸೊಂಕಿನಿಂದಾಗಿ ಈವರೆಗೆ ಇಟಲಿಯಲ್ಲಿ 32,955, ಫ್ರಾನ್ಸ್‌ನಲ್ಲಿ 28,533, ಸ್ಪೇನ್‌ನಲ್ಲಿ 27,117 ಹಾಗೂ ಜರ್ಮನಿಯಲ್ಲಿ 8,372 ಜನ ಮೃತಪಟ್ಟಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು