ಬುಧವಾರ, ಜೂನ್ 3, 2020
27 °C

ನಿಲ್ಲದ ಕೊರೊನಾ ಹಾವಳಿ: ಜಗತ್ತಿನಾದ್ಯಂತ ಸತ್ತವರ ಸಂಖ್ಯೆ 76,545ಕ್ಕೆ ಏರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾರಣಾಂತಿಕ ಕೊರೊನಾ ವೈರಸ್‌ ಸೋಂಕು ಹರಡುವಿಕೆ ಮುಂದುವರೆದಿದ್ದು, ಜಗತ್ತಿನಾದ್ಯಂತ 76,545 ಜನರನ್ನು ಬಲಿತೆಗೆದುಕೊಂಡಿದೆ. 

ಕೊರೊನಾ ಸೋಂಕು ಪತ್ತೆಯಾದವರ ಸಂಖ್ಯೆ 13, 66,335ಕ್ಕೆ ಏರಿದ್ದು, 293,910 ಮಂದಿ ಸೋಂಕಿನಿಂದ ಮುಕ್ತಿ ಹೊಂದಿದ್ದಾರೆ. 

ಜಗತ್ತಿನಾದ್ಯಂತ 9,95,880 ಪ್ರಕರಣಗಳು ಸಕ್ರೀಯವಾಗಿದ್ದರೆ, ಅವುಗಳಲ್ಲಿ 47,666 ಪ್ರಕರಣಗಳು ಗಂಭೀರವಾಗಿವೆ. 

ಚೀನಾದಲ್ಲಿ ಮೊದಲು ಕಾಣಿಸಿಕೊಂಡ ಕೊರೊನಾ ಸೋಂಕು ಯುರೋಪಿಯನ್‌ ರಾಷ್ಟ್ರಗಳಾದ ಇಟಲಿ, ಸ್ಪೇನ್‌, ಪ್ರಾನ್ಸ್‌ಗಳಲ್ಲಿ ಸಾವಿರಾರು ಜನರ ಸಾವಿಗೆ ಕಾರಣವಾಗಿದೆ. 

ಅಮೆರಿಕದಲ್ಲಿ ಕೊರೊನಾ ವೈರಸ್‌ಗೆ ಬಲಿಯಾದವರ ಸಂಖ್ಯೆ 11,042 ತಲುಪಿದೆ. ಈವರೆಗೆ 3,70,397 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, 3,39,481 ಪ್ರಕರಣಗಳು ಸಕ್ರೀಯವಾಗಿವೆ. 

ಇಟಲಿಯಲ್ಲಿ 16,523, ಸ್ಪೇನ್‌ನಲ್ಲಿ 13,798, ಪ್ರಾನ್ಸ್‌ನಲ್ಲಿ 8,911, ಇಂಗ್ಲೆಂಡ್‌ನಲ್ಲಿ 5,373 ಜನರು ಕೊರೊನಾ ವೈರಸ್‌ ಸೋಂಕಿನಿಂದ ಮೃತಪಟ್ಟಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು