ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Covid-19 World Update | ಅಮೆರಿಕದಲ್ಲಿ ಒಂದೇ ದಿನ 1883 ಸಾವು

ವಿಶ್ವದಾದ್ಯಂತ 33 ಲಕ್ಷಕ್ಕೂ ಹೆಚ್ಚು ಜನರಿಗೆ ಸೋಂಕು
Last Updated 2 ಮೇ 2020, 1:32 IST
ಅಕ್ಷರ ಗಾತ್ರ

ವಾಷಿಂಗ್ಟನ್: ಕೊರೊನಾ ವೈರಸ್ ಸೋಂಕಿನ ಹೊಡೆತಕ್ಕೆ ತತ್ತರಿಸಿರುವ ಅಮೆರಿಕದಲ್ಲಿ ಕಳೆದ 24 ಗಂಟೆಗಳಲ್ಲಿ 1,883 ಜನ ಮೃತಪಟ್ಟಿದ್ದಾರೆ. ಇದರೊಂದಿಗೆ ಮೃತಪಟ್ಟವರ ಸಂಖ್ಯೆ 65 ಸಾವಿರ ಸಮೀಪಿಸಿದೆ.

ಜಾನ್ ಹಾಪ್ಕಿನ್ಸ್ ಮಾಹಿತಿ ಪ್ರಕಾರ, ಅಮೆರಿಕದಾದ್ಯಂತ ಸೋಂಕಿತರ ಸಂಖ್ಯೆ ಈವರೆಗೆ 1,103,115ಕ್ಕೆ ಏರಿಕೆಯಾಗಿದೆ. ಒಟ್ಟಾರೆಯಾಗಿ 64,804 ಜನ ಮೃತಪಟ್ಟಿದ್ದಾರೆ. ಸೋಂಕಿನಿಂದಾಗಿ ಒಂದೇ ದಿನ ಅತಿ ಹೆಚ್ಚು ಜನ ಮೃತಪಟ್ಟ ದೇಶಗಳಲ್ಲಿಯೂ ಅಮೆರಿಕ ಮೊದಲ ಸ್ಥಾನದಲ್ಲಿದೆ. ಮೆಕ್ಸಿಕೊದಲ್ಲಿ 1,515 ಹೊಸ ಪ್ರಕರಣಗಳು ದೃಡಪಟ್ಟಿದ್ದು 113 ಸಾವು ಸಂಭವಿಸಿವೆ. ಅಲ್ಲಿ ಈವರೆಗೆ ಒಟ್ಟು 20,739 ಜನರಿಗೆ ಸೋಂಕು ತಗುಲಿದೆ. 1,972 ಸಾವು ಸಂಭವಿಸಿದೆ.

ವಿಶ್ವದಾದ್ಯಂತ ಈವರೆಗೆ 3,341,311 ಜನರಿಗೆ ಸೋಂಕು ತಗುಲಿದೆ. 238,380 ಜನ ಮೃತಪಟ್ಟಿದ್ದು, 1,051,859 ಮಂದಿ ಚೇತರಿಸಿದ್ದಾರೆ.

ಸ್ಪೇನ್‌ನಲ್ಲಿ 213,435, ಇಟಲಿಯಲ್ಲಿ 207,428 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಎರಡು ದೇಶಗಳಲ್ಲಿ ಕ್ರಮವಾಗಿ 24,543 ಮತ್ತು 28,236 ಜನರು ಸಾವಿಗೀಡಾಗಿದ್ದಾರೆ.

ರಷ್ಯಾದಲ್ಲಿ 114,431 ಜನರಿಗೆ ಈವರೆಗೆ ಸೋಂಕು ತಗುಲಿದ್ದು, 1,169 ಜನ ಮೃತಪಟ್ಟಿದ್ದಾರೆ. ಬ್ರಿಟನ್‌ನಲ್ಲಿ 178,685, ಫ್ರಾನ್ಸ್‌ನಲ್ಲಿ 167,305 ಜನರಿಗೆ ಸೋಂಕು ತಗುಲಿದೆ. ಈ ಎರಡೂ ದೇಶಗಳಲ್ಲಿ ಕ್ರಮವಾಗಿ 27,583 ಹಾಗೂ 24,628 ಜನ ಸಾವಿಗೀಡಾಗಿದ್ದಾರೆ.

ಸೋಂಕು ಮೊದಲು ಕಾಣಿಸಿಕೊಂಡ ಚೀನಾದಲ್ಲಿ ಇದುವರೆಗೆ 83,958 ಜನರಲ್ಲಿ ಸೋಂಕು ಪತ್ತೆಯಾಗಿದ್ದು, 4,637 ಜನರು ಮೃತಪಟ್ಟಿದ್ದಾರೆ. 78 ಸಾವಿರಕ್ಕೂ ಹೆಚ್ಚು ಜನರು ಗುಣಮುಖರಾಗಿರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT