ಜಾಗತೀಕರಣದಲ್ಲಿ ಸಂಸ್ಕೃತಿ, ರಾಷ್ಟ್ರಕ್ಕೆ ಹೆಚ್ಚಿನ ಮಹತ್ವ: ಹೊಸಬಾಳೆ

7

ಜಾಗತೀಕರಣದಲ್ಲಿ ಸಂಸ್ಕೃತಿ, ರಾಷ್ಟ್ರಕ್ಕೆ ಹೆಚ್ಚಿನ ಮಹತ್ವ: ಹೊಸಬಾಳೆ

Published:
Updated:
Deccan Herald

ವಾಷಿಂಗ್ಟನ್‌:  ಜಾಗತೀಕರಣಗೊಂಡಿರುವ ವಿಶ್ವದಲ್ಲಿ ಸಂಸ್ಕೃತಿ ಮತ್ತು ರಾಷ್ಟ್ರದ ಪ್ರಸ್ತುತತೆ ಹೆಚ್ಚು ಹೆಚ್ಚು ಮಹತ್ವ ಪಡೆಯುತ್ತಿದೆ ಎಂದು ಆರ್‌ಎಸ್‌ಎಸ್‌ ಜಂಟಿ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಹೇಳಿದ್ದಾರೆ.

ಭಾರತಕ್ಕೆ ಸಂಬಂಧಿಸಿದಂತೆ ಕೆಲಸ ಮಾಡುವ ಅಮೆರಿಕದ ಸಂಸ್ಥೆ ಇಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಹಿಷ್ಣುತೆ, ಸ್ವೀಕಾರ, ಪರಸ್ಪರ ಗೌರವಿಸುವುದು ಇವುಗಳು ಜಾಗತೀಕರಣದ ಪ‍್ರಮುಖ ಅಂಶಗಳು ಎಂದಿದ್ದಾರೆ.

ವೇದಾಂತದ ಮೂಲಕ ಭಾರತವು ಜಾಗತೀಕರಣಕ್ಕೆ ಕೊಡುಗೆ ನೀಡಿದೆ ಎಂದೂ ಅವರು ಹೇಳಿದ್ದಾರೆ.

ಆರ್ಥಿಕ ಮತ್ತು ಸಂವಹನ ತಂತ್ರಜ್ಞಾನ ಕ್ಷೇತ್ರಕ್ಕೆ ಜಾಗತೀಕರಣ ಪರಿಚಯವಾದಾಗ ರಾಷ್ಟ್ರಗಳ ಮತ್ತು ಸಂಸೃತಿಯ ಸಾಮರ್ಥ್ಯ ಎಲ್ಲೆಡೆ ಪಸರಿಸಿದೆ ಎಂದಿದ್ದಾರೆ.

 

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !