ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ವೈರಸ್‌ ಭೀತಿ ನಡುವೆ ಚೀನಾದಲ್ಲಿ ದಾಂಪತ್ಯ ಪಜೀತಿ!

Last Updated 16 ಮಾರ್ಚ್ 2020, 14:41 IST
ಅಕ್ಷರ ಗಾತ್ರ

ಬೀಜಿಂಗ್‌: ಕೊರೊನಾ ವೈರಸ್‌ ಅಟ್ಟಹಾಸ ಮೆರೆಯುತ್ತಿರುವ ಚೀನಾದಲ್ಲಿ ಹೊಸ ತಲೆನೋವೊಂದು ಕಾಣಿಸಿಕೊಂಡಿದೆ. ಅಲ್ಲಿನ ಯುವ ದಂಪತಿ ವಿಚ್ಛೇದನ ಪಡೆಯುವ ಪ್ರಮಾಣ ಇತ್ತೀಚೆಗೆ ಹೆಚ್ಚಾಗಿದೆ.

ಜೀವ ಉಳಿಸಿಕೊಳ್ಳುವ ಹೋರಾಟದ ನಡುವೆ ಈ ಸಮಸ್ಯೆ ಕಾಣಿಸಿಕೊಂಡಿದ್ದು ಹೇಗೆ ಎಂಬ ಪ್ರಶ್ನೆಗೆ ಅಲ್ಲಿನ ವಿವಾಹ ನೋಂದಣಿ ಇಲಾಖೆಯಿಂದ ಉತ್ತರವೂ ಸಿಕ್ಕಿದೆ. ‘ಕೊರೊನಾ ವೈರಸ್‌ ಕಾರಣದಿಂದಾಗಿ ಜನರನ್ನು ಮನೆ ಬಿಟ್ಟು ಕದಲದಂತೆ ಸೂಚಿಸಲಾಗಿದೆ. ದಂಪತಿ ಹೆಚ್ಚು ಸಮಯ ಮನೆಗಳಲ್ಲೇ ಕಳೆಯುತ್ತಿದ್ದಾರೆ. ಹೀಗಾಗಿ ಅವರ ನಡುವೆ ಕಲಹ, ಮನಸ್ತಾಪ ಹೆಚ್ಚಾಗಿದೆ,’ ಎಂದು ವಿವಾಹ ನೋಂದಣಿ ಇಲಾಖೆಯ ಅಧಿಕಾರಿ ಲು ಶಿಜುನ್‌ ಎಂಬುವವರು ಹೇಳಿರುವುದಾಗಿ ಡೇಲಿ ಮೇಲ್‌ ವರದಿ ಮಾಡಿದೆ.

ಅಲ್ಲಿನ ವಿವಾಹ ನೋಂದಣಿ ಇಲಾಖೆಗೆ ಫೆ.24ರಿಂದ ಈಚೆಗೆ 300 ದಂಪತಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT