ಹಾಂಗ್‌ಕಾಂಗ್: ಇಲ್ಲಿ ನಡೆಯುತ್ತಿರುವ ಸಾರ್ವಜನಿಕ ಪ್ರತಿ ಭಟನೆ ಶನಿವಾರ ಹೊಸರೂಪ ಪಡೆ ಯಿತು. ಪ್ರತಿಭಟನೆಯ ಮೇಲೆ ನಿಷೇಧ ಹೇರಿರುವ ಪೊಲೀಸರ ಕ್ರಮವನ್ನು ಖಂಡಿಸಿ ಸಾವಿರಾರು ಹೋರಾಟಗಾರರು ಬೀದಿಗಿಳಿದರು.

ಪ್ರಜಾಪ್ರಭುತ್ವದ ಪರ ಇಲ್ಲಿ 13ನೇ ವಾರವೂ ಪ್ರತಿಭಟನೆ ಮುಂದು ವರಿದಿದೆ. ರಾಜಕೀಯ ಅನಿಶ್ಚಿತತೆಗೆ ಕಾರಣವಾಗಿರುವ ಪ್ರತಿಭಟನೆಯೂ ಈಚೆಗೆ ಹಿಂಸೆಗೆ ತಿರುಗಿತ್ತು. ಹೀಗಾಗಿ ಭದ್ರತಾ ಕಾರಣ ನೀಡಿಪೊಲೀಸರು ಪ್ರತಿಭಟನೆಯನ್ನೇ ನಿಷೇಧಿಸಿದ್ದರು.

ಕಪ್ಪು ವರ್ಣದ ಟೀ ಶರ್ಟ್, ವರ್ಣಮಯ ಕೊಡೆಗಳನ್ನು ಹಿಡಿದಿದ್ದ ಅಸಂಖ್ಯ ಪ್ರತಿಭಟನೆಗಾರರು ರಸ್ತೆ ಗಿಳಿದರು. ‘ಹಾಂಗ್‌ಕಾಂಗ್ ನಮಗೆ ಬೇಕು. ಇದು ನಮ್ಮ ಕಾಲದ ಕ್ರಾಂತಿ’ ಎಂಬ ಘೋಷಣೆಗಳೊಂದಿಗೆ ಪ್ರಮುಖ ರಸ್ತೆಯಲ್ಲಿ ಗುಂಪುಗೂಡಿದರು.

ಇದನ್ನೂ ಓದಿ...ಹಾಂಗ್‌ಕಾಂಗ್: ನಿಲ್ಲದ ಪ್ರತಿಭಟನೆ, ಅಶ್ರುವಾಯು

ಸಂಸತ್ತಿನ ಹೊರಗಡೆ ಗುಂಪು ಚದುರಿಸಲು ಪೊಲೀಸರು ಅಶ್ರುವಾಯು ಹಾಗೂ ಜಲಫಿರಂಗಿಯನ್ನು ಪ್ರಯೋಗಿ ಸಿದರು. ಬೀಜಿಂಗ್ ಬೆಂಬಲಿತ ನಾಯಕ ಕ್ಯಾರಿ ಲ್ಯಾಮ್ ಅವರ ಅಧಿಕೃತ ನಿವಾಸದ ಎದುರು ಗುಂಪೊಂದು ಹಾದುಹೋಯಿತು. ಚೀನಾಗೆ ಹಸ್ತಾಂತರಿಸುವುದಕ್ಕೆ ಅವಕಾಶ ಕಲ್ಪಿಸುವ ವಿವಾದಿತ ಮಸೂದೆಗೆ ಅನುಮೋದನೆ ಪಡೆಯಲು ಯತ್ನಿಸಿದ ಕಾರಣಕ್ಕೆ ಲ್ಯಾಮ್ ಅವರು ಪ್ರತಿಭಟನೆಯ ಕೇಂದ್ರ ಬಿಂದುವಾಗಿದ್ದು, ಆಕ್ರೋಶಕ್ಕೆ ಗುರಿಯಾಗಿದ್ದಾರೆ.

ಕ್ರಿಮಿನಲ್ ಹಾಗೂ ಗಂಭೀರ ಸ್ವರೂಪದ ಆರೋಪಿಗಳನ್ನು ವಿಚಾರಣೆಗಾಗಿ ಚೀನಾಗೆ ಒಪ್ಪಿಸಲು ಅವಕಾಶ ಕಲ್ಪಿಸುವ ಮಸೂದೆ ವಿರೋಧಿಸಿ ಪ್ರತಿಭಟನೆ ನಡೆಯುತ್ತಿದೆ. ಮತ್ತೊಂದು ದೊಡ್ಡ ಗುಂಪು ವಾಣಿಜ್ಯ ದಟ್ಟಣೆಯ ಕಾಸ್‌ವೇ ಬೇ ಜಿಲ್ಲಾ ಕೇಂದ್ರದಲ್ಲಿ ಪ್ರಮುಖ ರಸ್ತೆಯಲ್ಲಿ ಸೇರಿತು. ಪ್ರತಿಭಟನಕಾರರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಪೊಲೀಸರು ಹೆಲಿಕಾಪ್ಟರ್ ಮೂಲಕ ಚಲನವಲನಗಳನ್ನು ಗಮನಿಸಿದ್ದು, ತಕ್ಷಣವೇ ಸ್ಥಳದಿಂದ ನಿರ್ಗಮಿಸಬೇಕು ಎಂದು ಪ್ರತಿಭಟನಕಾರರಿಗೆ ತಾಕೀತು ಮಾಡಿದರು.

‘ನಮ್ಮ ಪಾಲಿಗೆ ಹಾಂಗ್‌ಕಾಂಗ್ ಈಗಿಲ್ಲದಿದ್ದರೆ, ಇನ್ನೆಂದೂ ಇಲ್ಲ, ನಾವು ಯಾವುದೇ ಪರಿಣಾಮ ಎದುರಿಸಲು ಸಿದ್ಧ’ ಎಂದು 33 ವರ್ಷದ ವಾಂಗ್ ಪ್ರತಿಕ್ರಿಯಿಸಿದರು.

ಇದನ್ನೂ ಓದಿ...ಹಾಂಗ್‌ಕಾಂಗ್ ಪ್ರತಿಭಟನೆ; ಷಿ ಆಡಳಿತಕ್ಕೆ ಎದುರಾದ ಪ್ರತಿರೋಧ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.