ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಲಿಗೆ ಬಸವಳಿದ ಪ್ಯಾರಿಸ್‌

ತಾಪಮಾನ ಹೆಚ್ಚಳಕ್ಕೆ ಯುರೋಪ್‌ ತತ್ತರ
Last Updated 25 ಜುಲೈ 2019, 19:50 IST
ಅಕ್ಷರ ಗಾತ್ರ

ಪ್ಯಾರಿಸ್‌: ಈ ಬಾರಿ ಬೇಸಿಗೆಯಲ್ಲಿನ ಬಿಸಿಲಿಗೆ ಯುರೋಪ್‌ ಬಸವಳಿದಿದೆ. ಪ್ಯಾರಿಸ್‌, ಲಂಡನ್‌ ಸೇರಿದಂತೆ ಯುರೋಪ್‌ನ ಪ್ರಮುಖ ನಗರ, ಪಟ್ಟಣಗಳಲ್ಲಿ ಬೀಸುತ್ತಿರುವ ಬಿಸಿಗಾಳಿಯಿಂದಾಗಿ ಜನರು ಹೈರಾಣಾಗಿದ್ದಾರೆ.

ಪ್ಯಾರಿಸ್‌ನಲ್ಲಿ ಗುರುವಾರ 41 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದೆ. 1947ರಲ್ಲಿ 40.4 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿತ್ತು. ಈಗ ಈ ದಾಖಲೆಯನ್ನೂ ಹಿಂದಿಕ್ಕಿದಂತಾಗಿದೆ.

ಹವಾಮಾನದಲ್ಲಿನ ವ್ಯತ್ಯಾಸದಿಂದಾಗಿ ತಾಪಮಾನದಲ್ಲಿನ ಈ ಹೆಚ್ಚಳ, ಯುರೋಪ್‌ನ ಬಹುತೇಕ ಭಾಗಗಳಲ್ಲಿ ಸಾಮಾನ್ಯ ಎಂಬಂತೆ ಮುಂದುವರಿಯಬಹುದು ಎಂದು ಹವಾಮಾನ ತಜ್ಞರು ಎಚ್ಚರಿಸಿದ್ದಾರೆ.

ಲಂಡನ್‌ನಲ್ಲಿ 39 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದೆ. ಉತ್ತರ ಆಫ್ರಿಕಾದಿಂದ ಬೀಸುತ್ತಿರುವ ಬಿಸಿಗಾಳಿಯೇ ಈ ವಿದ್ಯಮಾನಕ್ಕೆ ಕಾರಣ. ಬಿಸಿಗಾಳಿ ಪರಿಣಾಮ ಈ ದೇಶಗಳಲ್ಲಿ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

ಜನರು ಮನೆಯಲ್ಲಿಯೇ ಇರುವಂತೆ ಫ್ರಾನ್ಸ್‌ ಸರ್ಕಾರ ಸಲಹೆ ನೀಡಿದೆ. ಮುಂದಿನ ದಿನಗಳಲ್ಲಿ ಜರ್ಮನಿ, ಬೆಲ್ಜಿಯಂ, ನೆದರ್ಲೆಂಡ್ಸ್‌ ಹಾಗೂ ಸ್ವಿಟ್ಜರ್ಲೆಂಡ್‌ ನಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್‌ ದಾಟಬಹುದು ಎಂದೂ ಅಂದಾಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT