ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದಲ್ಲಿ ವರ್ಷಾಂತ್ಯಕ್ಕೆ 2 ಕೋಟಿ ಶಿಶುಗಳ ಜನನ: ಯುನಿಸೆಫ್‌

ಕೋವಿಡ್‌–19ನಿಂದಾಗಿ ತಾಯಂದಿರು, ಮಕ್ಕಳಿಗೆ ಸಮರ್ಪಕ ವೈದ್ಯಕೀಯ ಸೇವೆ ಕಷ್ಟ
Last Updated 7 ಮೇ 2020, 11:36 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ: ಜನವರಿಯಿಂದ ಡಿಸೆಂಬರ್ ವರೆಗಿನ ಅವಧಿಯಲ್ಲಿ ಭಾರತದಲ್ಲಿ 2.41 ಕೋಟಿ ಶಿಶುಗಳು ಜನಿಸುತ್ತವೆ. ಕೋವಿಡ್‌–19 ಅನ್ನು ಪಿಡುಗು ಎಂಬುದಾಗಿ ಘೋಷಿಸಿದ್ದು ಮಾರ್ಚ್‌ನಲ್ಲಿ. ಹೀಗಾಗಿ ಮಾರ್ಚ್‌ನಿಂದ ಡಿಸೆಂಬರ್ ವರೆಗಿನ ಅವಧಿಯನ್ನು ಪರಿಗಣಿಸಿದರೆ, 2.01 ಕೋಟಿ ಶಿಶುಗಳು ಜನಿಸಲಿವೆ ಎಂದು ಯುನಿಸೆಫ್‌ ಅಂದಾಜಿಸಿದೆ.

ಕೋವಿಡ್‌–19 ಪಿಡುಗಿನ ವಿರುದ್ಧದ ಹೋರಾಟದಿಂದಾಗಿ ಈ ಅವಧಿಯಲ್ಲಿ ಗರ್ಭಿಣಿಯರಿಗೆ, ತಾಯಂದಿರಿಗೆ ಹಾಗೂ ನವಜಾತ ಶಿಶುಗಳಿಗೆ ಸಮರ್ಪಕ ವೈದ್ಯಕೀಯ ಸೇವೆ, ಆರೈಕೆ ಸಿಗುವುದು ಕಷ್ಟ. ಆನೇಕ ಆರೋಗ್ಯ ಸಮಸ್ಯೆಗಳು ಸಹ ಇವರನ್ನು ಬಾಧಿಸಲಿವೆ ಎಂದು ಯುನಿಸೆಫ್‌ ಎಚ್ಚರಿಸಿದೆ.

‘ಕೋವಿಡ್‌–19ನ ಸೋಂಕು ತಮಗೂ ತಗುಲಬಹುದು ಎಂಬ ಆತಂಕದಿಂದ ಗರ್ಭಿಣಿಯರು, ತಾಯಂದಿರು ಈ ಅವಧಿಯಲ್ಲಿ ಆಸ್ಪತ್ರೆಗಳಿಗೆ ಭೇಟಿ ನೀಡಲು ಹೆದರುತ್ತಾರೆ. ಕೆಲವರಿಗೆ ತುರ್ತು ಚಿಕಿತ್ಸೆ ಸಹ ಸಿಗದೇ ಇರಬಹುದು’ ಎಂದು ಸಂಘಟನೆಯ ಕಾರ್ಯನಿರ್ವಾಹಕ ನಿರ್ದೇಶಕಿ ಹೆನ್ರೀಟಾ ಫೋರ್‌ ಹೇಳಿದ್ದಾರೆ.

‘ಮಹಿಳೆಗೆ ತಾಯ್ತನ ಬಹುಮುಖ್ಯ. ಆದರೆ, ಕೋವಿಡ್‌–19ನಿಂದಾಗಿ ಎಷ್ಟರ ಮಟ್ಟಿಗೆ ಸುರಕ್ಷಿತ ತಾಯ್ತನ ಸಾಧ್ಯವಾಗಲಿದೆ ಎಂಬುದನ್ನು ಊಹಿಸುವುದು ಕಷ್ಟ’ ಎಂದೂ ಫೋರ್‌ ಆತಂಕ ವ್ಯಕ್ತಪಡಿಸಿದ್ದಾರೆ.

ಚೀನಾದಲ್ಲಿ 1.3 ಕೋಟಿ ಶಿಶುಗಳ ಜನನವಾಗಲಿದ್ದರೆ, ನೈಜೀರಿಯಾ– 60.4 ಲಕ್ಷ, ಪಾಕಿಸ್ತಾನ– 50 ಲಕ್ಷ ಹಾಗೂ ಇಂಡೊನೇಷ್ಯಾದಲ್ಲಿ 40 ಲಕ್ಷ ಶಿಶುಗಳ ಜನನವಾಗಲಿದೆ ಎಂದು ಅಂದಾಜಿಸಲಾಗಿದೆ.

‘ಈ ದೇಶಗಳಲ್ಲಿ ನವಜಾತ ಶಿಶುಗಳ ಮರಣ ಪ್ರಮಾಣ ಹೆಚ್ಚು. ಈಗ ಕೋವಿಡ್‌–19 ಪಿಡುಗಿನ ಆರ್ಭಟ. ಹೀಗಾಗಿ ಈ ದೇಶಗಳಲ್ಲಿ ನವಜಾತ ಶಿಶುಗಳ ಮರಣ ಪ್ರಮಾಣ ಇನ್ನೂ ಅಧಿಕವಾಗಬಹುದು’ ಎಂದು ಯುನಿಸೆಫ್‌ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT