ಗುರುವಾರ , ಆಗಸ್ಟ್ 5, 2021
26 °C
ಸ್ವೀಡನ್‌ನ ಎಸ್‌ಐಪಿಆರ್‌ಐ ವರದಿಯಲ್ಲಿ ಉಲ್ಲೇಖ

ಭಾರತದಲ್ಲಿ ಪಾಕಿಸ್ತಾನಕ್ಕಿಂತಲೂ ಕಡಿಮೆ ಸಿಡಿತಲೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಲಂಡನ್‌: 2019ರಲ್ಲಿ 10 ಹೊಸ ಶಸ್ತ್ರಾಸ್ತ್ರಗಳನ್ನು ಸೇರ್ಪಡೆಗೊಳಿಸುವ ಮೂಲಕ ಭಾರತವು ತನ್ನ ಅಣು ಶಸ್ತ್ರಾಸ್ತ್ರ ಸಂಗ್ರಹವನ್ನು ಹಿಗ್ಗಿಸಿಕೊಂಡಿದ್ದರೂ, ಚೀನಾ ಮತ್ತು ಪಾಕಿಸ್ತಾನಕ್ಕೆ ಹೋಲಿಸಿದರೆ ಭಾರತದಲ್ಲಿ ಸಿಡಿತಲೆಗಳ(ವಾರ್‌ಹೆಡ್‌) ಸಂಖ್ಯೆ ಕಡಿಮೆ ಇದೆ ಎಂದು ವರದಿಯೊಂದರಿಂದ ಬಹಿರಂಗವಾಗಿದೆ. 

ಸ್ವೀಡನ್‌ ಮೂಲದ ‘ದಿ ಸ್ಟಾಕ್‌ಹೊಮ್‌ ಇಂಟರ್‌ನ್ಯಾಷನಲ್‌ ಪೀಸ್‌ ರಿಸರ್ಚ್‌ ಇನ್‌ಸ್ಟಿಟ್ಯೂಟ್‌’ (ಎಸ್‌ಐಪಿಆರ್‌ಐ) ವರದಿ ಅನ್ವಯ, ‘2019ರಲ್ಲಿ ಭಾರತ ಹಾಗೂ ಚೀನಾ ತನ್ನ ಅಣು ಶಸ್ತ್ರಾಸ್ತ್ರ ಸಂಗ್ರಹವನ್ನು ಹೆಚ್ಚಿಸಿಕೊಂಡಿದೆ. ಚೀನಾ ಬಳಿ ಒಟ್ಟು 320 ಸಿಡಿತಲೆಗಳು ಇದ್ದರೆ, ಪಾಕಿಸ್ತಾನದ ಬಳಿ 160 ಸಿಡಿತಲೆಗಳಿವೆ. ಭಾರತದ ಬತ್ತಳಿಕೆಯಲ್ಲಿ 150 ಸಿಡಿತಲೆಗಳು ಇವೆ’ ಎಂದು ಉಲ್ಲೇಖಿಸಲಾಗಿದೆ.

2019ರ ವರದಿಯ ಅನ್ವಯ ಚೀನಾ ಬಳಿ 290 ಸಿಡಿತಲೆಗಳು ಇದ್ದವು. ಭಾರತದಲ್ಲಿ 130–140 ಹಾಗೂ ಪಾಕಿಸ್ತಾನದಲ್ಲಿ 150–160 ಸಿಡಿತಲೆಗಳು ಇವೆ ಎಂದು ಸಿಐಪಿಆರ್‌ಐ ತಿಳಿಸಿತ್ತು. 

‘ತನ್ನ ಅಣು ಶಸ್ತ್ರಾಸ್ತ್ರ ಸಂಗ್ರಹವನ್ನು ಆಧುನೀಕರಣಗೊಳಿಸುವತ್ತ ಚೀನಾ ಹೆಜ್ಜೆ ಇರಿಸಿದೆ. ಚೀನಾ ಇದೇ ಮೊದಲ ಬಾರಿಗೆ ಭೂಮಿಯಿಂದ, ಸಬ್‌ಮೆರಿನ್‌ಗಳಿಂದ ಮತ್ತು ಯುದ್ಧವಿಮಾನಗಳಿಂದ ಉಡಾವಣೆಗೊಳ್ಳುವ ಅಣು ಕ್ಷಿಪಣಿಗಳ ಅಭಿವೃದ್ಧಿಯತ್ತ(ನ್ಯೂಕ್ಲಿಯರ್‌ ಟ್ರಯಾಡ್‌) ಚಿತ್ತಹರಿಸಿದೆ’ ಎಂದು ವರದಿ ಎಚ್ಚರಿಸಿದೆ. 

***

ಅಂಕಿ ಅಂಶ

5,800: ಅಮೆರಿಕದ ಸಂಗ್ರಹದಲ್ಲಿರುವ ಸಿಡಿತಲೆಗಳು 

6,375: ರಷ್ಯಾ ಬಳಿ ಇರುವ ಸಿಡಿತಲೆಗಳು 

13,400: ಹತ್ತು ಅಣು ರಾಷ್ಟ್ರಗಳ ಬಳಿ 2020ರ ಆರಂಭದಲ್ಲಿ ಇರುವ ಅಣು ಶಸ್ತ್ರಾಸ್ತ್ರಗಳು 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು