ಗುರುವಾರ , ಜನವರಿ 23, 2020
28 °C
ಅಮೆರಿಕ ವಿರುದ್ಧ ಪ್ರತೀಕಾರಕ್ಕಾಗಿ ದಾಳಿ

ಉಕ್ರೇನ್‌ ವಿಮಾನ ಪತನಕ್ಕೆ ಇರಾನ್ ಕ್ಷಿಪಣಿ ದಾಳಿ ಕಾರಣ: ದುರಂತದ ವಿಡಿಯೊ ವೈರಲ್

ಏಜೆನ್ಸಿಸ್ Updated:

ಅಕ್ಷರ ಗಾತ್ರ : | |

ಕೀವ್ (ಉಕ್ರೇನ್): ಉಕ್ರೇನ್‌ ಇಂಟರ್‌ನ್ಯಾಷನಲ್‌ ಏರ್‌ಲೈನ್ಸ್‌ನ ಬೋಯಿಂಗ್ ವಿಮಾನ ಪತನಗೊಳ್ಳಲು ಇರಾನ್‌ ನಡೆಸಿದ ಕ್ಷಿಪಣಿ ದಾಳಿಯೇ ಕಾರಣ ಎಂದು ಅಂತರರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ವಿಮಾನಕ್ಕೆ ಕ್ಷಿಪಣಿ ಬಡಿದ ಸಂದರ್ಭದ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಇರಾಕ್‌ನಲ್ಲಿರುವ ಅಮೆರಿಕ ಸೇನಾ ನೆಲೆಗಳ ಮೇಲೆ ಇರಾನ್‌ ಹಾರಿಸಿದ್ದ ಕ್ಷಿಪಣಿಗಳ ಪೈಕಿ ಒಂದು ಆಕಸ್ಮಿಕವಾಗಿ ವಿಮಾನಕ್ಕೆ ಬಡಿದು ದುರಂತ ಸಂಭವಿಸಿದೆ ಎಂದು ಅಮೆರಿಕ, ಕೆನಡಾ ಹಾಗೂ ಇಂಗ್ಲೆಂಡ್‌ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: 

ಜನವರಿ 8ರಂದು ಇರಾನ್ ರಾಜಧಾನಿ ಟೆಹರಾನ್‌ನಿಂದ ಉಕ್ರೇನ್‌ನ ಕೀವ್‌ಗೆ ಹೊರಟಿದ್ದ ಉಕ್ರೇನ್‌ ಇಂಟರ್‌ನ್ಯಾಷನಲ್‌ ಏರ್‌ಲೈನ್ಸ್‌ನ ಬೋಯಿಂಗ್ 737 ವಿಮಾನವು ಪತನಗೊಂಡಿತ್ತು. ಅದರಲ್ಲಿದ್ದ 168 ಪ್ರಯಾಣಿಕರು ಮತ್ತು 9 ಸಿಬ್ಬಂದಿ ಮೃತಪಟ್ಟಿದ್ದರು. ವಿಮಾನದಲ್ಲಿ 63 ಮಂದಿ ಕೆನಡಾ ಪ್ರಯಾಣಿಕರಿದ್ದರು. ಸದ್ಯದ ಮಾಹಿತಿಯನ್ನು ಉಲ್ಲೇಖಿಸಿ ಮಾತನಾಡಿರುವ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರೂಡಿ, ಅನುಮಾನಗಳನ್ನು ಬದಿಗಿಟ್ಟು, ಉನ್ನತ ಮಟ್ಟದ ತನಿಖೆ ಕೈಗೊಳ್ಳಬೇಕು ಎಂದು ಕರೆ ನೀಡಿದ್ದಾರೆ.

ಒಟ್ಟಾವಾದಲ್ಲಿ ಸುದ್ದಿಗೋಷ್ಠಿ ನಡೆಸಿರುವ ಅವರು, ‘ಇದು ಆಕಸ್ಮಿಕವಾಗಿ ಸಂಭವಿಸಿದ ದುರಂತ ಎಂದು ನಾವು ಪರಿಗಣಿಸುತ್ತೇವೆ. ಸದ್ಯ ದೊರೆತಿರುವ ಸಾಕ್ಷ್ಯಗಳು ಅಪಘಾತಕ್ಕೆ ಸಂಭವನೀಯ ಕಾರಣ ಏನೆಂಬುದನ್ನು ಸ್ಪಷ್ಟವಾಗಿ ಸೂಚಿಸುತ್ತಿವೆ’ ಎಂದೂ ಹೇಳಿದ್ದಾರೆ.

ಜನವರಿ 3ರಂದು ಇರಾಕ್‌ ರಾಜಧಾನಿ ಬಾಗ್ದಾದ್ ವಿಮಾನ ನಿಲ್ದಾಣದ ಸಮೀಪ ಅಮೆರಿಕ ನಡೆಸಿದ್ದ ಮೇಜರ್ ಜನರಲ್ ಖಾಸಿಂ ಸುಲೇಮಾನಿ ಸೇರಿ 8 ಮಂದಿ ಮೃತಪಟ್ಟಿದ್ದರು. ಈ ಪ್ರಕರಣದ ಬಳಿಕ ಉಭಯ ದೇಶಗಳ ನಡುವಣ ಉದ್ವಿಗ್ನ ವಾತಾವರಣ ಸೃಷ್ಠಿಯಾಗಿತ್ತು. ಅಮೆರಿಕ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು ಇರಾನ್‌ ಖಂಡಾಂತರ ಕ್ಷಿಪಣಿಗಳನ್ನು ಉಡಾಯಿಸಿತ್ತು.

ಇನ್ನಷ್ಟು
ಯುದ್ಧಭೀತಿ | ಇರಾಕ್‌ ನೆಲದಲ್ಲಿ ಅಮೆರಿಕ ರಾಕೆಟ್ ದಾಳಿ: ಇರಾನ್‌ ಕಮಾಂಡರ್ ಹತ್ಯೆ
ಇರಾನ್‌ನಲ್ಲಿ ಉಕ್ರೇನ್ ವಿಮಾನ ಪತನ: 177 ಸಾವು ಖಚಿತಪಡಿಸಿದ ಉಕ್ರೇನ್ ಅಧ್ಯಕ್ಷ 
ಕಟು ಪ್ರತೀಕಾರ ಕಾದಿದೆ: ಅಮೆರಿಕಕ್ಕೆ ಇರಾನ್ ನಾಯಕ ಖಮೇನಿ ಎಚ್ಚರಿಕೆ
ಮಧ್ಯಪ್ರಾಚ್ಯಕ್ಕೆ 3500 ಸೈನಿಕರನ್ನು ರವಾನಿಸಲು ಅಮೆರಿಕ ನಿರ್ಧಾರ

 

 

 

 

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು