ಮಂಗಳವಾರ, ಜೂನ್ 2, 2020
27 °C

ಅಮೆರಿಕಕ್ಕೆ ಔಷಧಿ ರಫ್ತು: ಡೊನಾಲ್ಡ್‌ ಟ್ರಂಪ್‌ರಿಂದ ಪ್ರಧಾನಿ ಮೋದಿ ಗುಣಗಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್‌: ಮೊನ್ನೆಯಷ್ಟೇ ಭಾರತದ ವಿರುದ್ಧ ವಾಣಿಜ್ಯ ಪ್ರತೀಕಾರದ ಮಾತುಗಳನ್ನಾಡಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಬುಧವಾರ ತಮ್ಮ ವರಸೆ ಬದಲಿಸಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೊಂಡಾಡಿದ್ದಾರೆ.

ಗುಜರಾತ್‌ ಕಾರ್ಖಾನೆಗಳಿಂದ ಹೈಡ್ರಾಕ್ಸಿಕ್ಲೋರೋಕ್ವಿನ್ ಸೇರಿದಂತೆ ವಿವಿಧ 24 ಬಗೆಯ ಔಷಧಿಗಳು ಅಮೆರಿಕಕ್ಕೆ ರಫ್ತಾಗಿರುವ ವಿಷಯ ತಿಳಿಯುತ್ತಿದ್ದಂತೆ ಡೊನಾಲ್ಡ್‌ ಟ್ರಂಪ್‌ ಮೋದಿಯವರನ್ನು ಹೊಗಳಿದ್ದಾರೆ. ಒಟ್ಟು 2.9ಕೋಟಿ ಔಷಧಿಯ ಡೊಸೇಜ್‌ ರಫ್ತಾಗಿದ್ದು ಶೀಘ್ರದಲ್ಲೇ ಅಮೆರಿಕ ತಲುಪಲಿದೆ.

ಅಮೆರಿಕದಲ್ಲಿ ಕೊರೊನಾ ಪಿಡುಗು ವ್ಯಾಪಕವಾಗಿ ಹರಡತ್ತಿದ್ದು ಇಲ್ಲಿಯವರೆಗೂ 4 ಲಕ್ಷ ಜನರು ಸೋಂಕಿಗೆ ತುತ್ತಾಗಿದ್ದು 13 ಸಾವಿರ ಜನರು ಮೃತಪಟ್ಟಿದ್ದಾರೆ. ಟ್ರಂಪ್‌ ಸರ್ಕಾರ ಸೋಂಕಿತರಿಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿ ನೀಡಲು ಶಿಫಾರಸು ಮಾಡಿದೆ.

’ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತನಾಡಿ ಇಷ್ಟು ಪ್ರಮಾಣದ ಔಷಧಿಯನ್ನು ತರಿಸಿದ್ದೇನೆ, ಮೋದಿ ಒಳ್ಳೆಯವರು, ಅವರು ತುಂಬಾ ಗ್ರೇಟ್‌’ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಸೋಮವಾರ ಶ್ವೇತ ಭವನದಲ್ಲಿ ಮಾತನಾಡಿದ್ದ ಟ್ರಂಪ್‌, ಭಾರತ ತಮ್ಮ ನಿಲುವು ಸಡಿಲಿಸಿ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿಯನ್ನು ರಫ್ತು ಮಾಡಬೇಕು, ಇಲ್ಲವಾದಲ್ಲಿ ವಾಣಿಜ್ಯ ಪ್ರತೀಕಾರವನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದ್ದರು.

ಭಾರತ ಈ ಸಹಾಯ ಮಾಡಿದ ಬೆನ್ನಲ್ಲೇ, ಮೋದಿ ಓರ್ವ ಶ್ರೇಷ್ಠ ನಾಯಕರಾಗಿದ್ದು, ಅವರು ನಮ್ಮ ಆತ್ಮೀಯ ಸ್ನೇಹಿತ ಎಂದು ಟ್ರಂಪ್ ಹೊಗಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು