ಭಾನುವಾರ, ಜನವರಿ 26, 2020
28 °C
ಮಹಿಳೆ ಅಧಿಕಾರದಲ್ಲಿದ್ದರೆ ಜೀವನ ಮಟ್ಟ ಸುಧಾರಣೆ

ಅಧಿಕಾರಿಶಾಹಿ ಪುರುಷರಿಂದಲೇ ಸಮಸ್ಯೆ: ಒಬಾಮ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಸಿಂಗಪುರ: ಜಗತ್ತು ಎದುರಿಸಿದ ಹೆಚ್ಚಿನ ಸಮಸ್ಯೆಗಳು ವೃದ್ಧರಿಂದ ಅದರಲ್ಲೂ ಅಧಿಕಾರ ದಾಹದ ಪುರುಷರಿಂದ ಉದ್ಭವಿಸಿವೆ ಎಂದು ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ (58) ಅಭಿಪ್ರಾಯಪಟ್ಟಿದ್ದಾರೆ.

ಬಿಬಿಸಿ ಆಯೋಜಿಸಿದ್ದ ನಾಯಕತ್ವ ಕುರಿತ ಖಾಸಗಿ ಕಾರ್ಯಕ್ರಮದಲ್ಲಿ ಸೋಮವಾರ ಭಾಗವಹಿಸಿ ಮಾತನಾ
ಡಿದ ಅವರು, ನಾಯಕ ತನ್ನ ಸಮಯ ಬಂದಾಗ ಅಧಿಕಾರದಿಂದ, ನಾಯಕತ್ವ
ದಿಂದ ಕೆಳಗಿಳಿಯಬೇಕು ಎಂದಿದ್ದಾರೆ.

ವಿಶ್ವದಲ್ಲಿನ ಪ್ರತಿ ದೇಶವನ್ನೂ ಮಹಿಳೆಯರು ನಡೆಸಿದಲ್ಲಿ ಜನರ ಜೀವನ ಮಟ್ಟ ದಲ್ಲಿ ಸುಧಾರಣೆ ಕಂಡು ಬರುತ್ತದೆ ಎಂದು ಒಬಾಮ ಸಲಹೆ ನೀಡಿದ್ದಾರೆ. 

‘ನೀವು ಮತ್ತೆ ರಾಜಕೀಯಕ್ಕೆ ಮರಳಲು ಯೋಚಿಸುತ್ತಿದ್ದೀರಾ’ ಎಂದು ಪ್ರಶ್ನಿಸಿದಾಗ ಸಮಯ ಬಂದಾಗ ನಾಯಕರು ಕೆಳಗಿಳಿಯಬೇಕು ಎನ್ನುವುದರಲ್ಲಿ ನನಗೆ ನಂಬಿಕೆ ಇದೆ ಎಂದು ಉತ್ತರಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು