ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

VIDEO| ಉಕ್ರೇನ್‌ ವಿಮಾನಕ್ಕೆ ಅಪ್ಪಳಿಸಿದ ಕ್ಷಿಪಣಿ ವಿಡಿಯೊ ಬಿಡುಗಡೆ

Last Updated 15 ಜನವರಿ 2020, 17:57 IST
ಅಕ್ಷರ ಗಾತ್ರ

ವಾಷಿಂಗ್ಟನ್‌:ಉಕ್ರೇನ್‌ನ ನಾಗರಿಕ ವಿಮಾನ ದುರಂತಕ್ಕೆ ಸಂಬಂಧಿಸಿದ ಭದ್ರತಾ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯಗಳ ತುಣುಕುಗಳನ್ನು ನ್ಯೂಯಾರ್ಕ್‌ ಟೈಮ್ಸ್‌ ಬಿಡುಗಡೆಗೊಳಿಸಿದೆ.

ಇರಾನ್‌ನ ಎರಡು ಕ್ಷಿಪಣಿಗಳು ಉಕ್ರೇನ್ಜೆಟ್‌ಲೈನರ್‌ಗೆ ಅಪ್ಪಳಿಸಿ ಈ ದುರಂತ ಸಂಭವಿಸಿದೆ ಎಂಬುದನ್ನು ವಿಡಿಯೊ ಸ್ಪಷ್ಟಪಡಿಸುತ್ತದೆ.

ವಿಮಾನದ ಟ್ರಾನ್ಸ್‌ಪಾಂಡರ್‌ ಏಕೆ ಕಾರ್ಯ ನಿರ್ವಹಿಸಲಿಲ್ಲ ಎಂಬ ರಹಸ್ಯವನ್ನು ಇದು ಬೇಧಿಸಿದೆ. ಎರಡು ಕ್ಷಿಪಣಿಗಳು 30 ಸೆಕೆಂಡುಗಳ ಅಂತರದಲ್ಲಿ ಅಪ್ಪಳಿಸಿವೆ. ಮೊದಲ ಕ್ಷಿಪಣಿ ಅಪ್ಪಳಿಸಿದಾಗ ವಿಮಾನ ನಿಷ್ಕ್ರಿಯಗೊಂಡಿದೆ ಎಂದು ಟೈಮ್ಸ್‌ ತಿಳಿಸಿದೆ.

ಬೆಂಕಿ ಹತ್ತಿಕೊಂಡ ವಿಮಾನ ಟೆಹರಾನ್‌ ವಿಮಾನ ನಿಲ್ದಾಣಕ್ಕೆ ಮರಳಿದೆ. ಕೆಲವು ನಿಮಿಷಗಳ ನಂತರ ಅದು ಸ್ಫೋಟಗೊಂಡು, ಅಪ್ಪಳಿಸಿದ ಅಸ್ಪಷ್ಟ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ.

ಈ ದುರಂತಕ್ಕೆ ಕಾರಣರಾದವರನ್ನು ಬಂಧಿಸಲಾಗಿದೆ ಎಂದು ಇರಾನ್‌ ತಿಳಿಸಿದೆ. ಆದರೆ ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.

ಇರಾನ್ ರಾಜಧಾನಿ ಟೆಹರಾನ್‌ನಿಂದ ಉಕ್ರೇನ್‌ ರಾಜಧಾನಿ ಕೀವ್‌ಗೆ ಹೊರಟಿದ್ದ ಉಕ್ರೇನ್‌ ಅಂತರರಾಷ್ಟ್ರೀಯ ವಿಮಾನಯಾನ ಸಂಸ್ಥೆಯ ಬೋಯಿಂಗ್ –737 ವಿಮಾನ ಟೇಕ್‌ಆಫ್‌ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿತ್ತು. ಅದರಲ್ಲಿದ್ದ ಎಲ್ಲ 176 ಮಂದಿ ಮೃತಪಟ್ಟಿದ್ದರು.

ಅಪಾಯದಲ್ಲಿ ಯುರೋಪ್‌ ಯೋಧರು: ಹಸನ್‌ ರೌಹಾನಿ

ಟೆಹರಾನ್‌ (ಎಪಿ):ಮಧ್ಯ ಪ್ರಾಚ್ಯ ದೇಶಗಳಲ್ಲಿ ನಿಯೋಜನೆಗೊಂಡಿರುವ ಯುರೋಪ್‌ ಯೋಧರಿಗೆ ಅಪಾಯದ ಸ್ಥಿತಿ ಎದುರಾಗಬಹುದು ಎಂದು ಇರಾನ್‌ ಅಧ್ಯಕ್ಷಹಸನ್‌ ರೌಹಾನಿಬುಧವಾರ ಎಚ್ಚರಿಸಿದ್ದಾರೆ.

2015ರ ಐತಿಹಾಸಿಕ ಪರಮಾಣು ಒಪ್ಪಂದದಿಂದ ಹಿಂದೆ ಸರಿಯುವುದಾಗಿ ಬ್ರಿಟನ್‌, ಫ್ರಾನ್ಸ್‌ ಮತ್ತು ಜರ್ಮನಿ ಹೇಳಿರುವ ಹಿನ್ನೆಲೆಯಲ್ಲಿ ಅಧ್ಯಕ್ಷರು ಈ ಹೇಳಿಕೆ ನೀಡಿದ್ದಾರೆ.

ಇರಾನ್‌ ಪರಮಾಣು ಒಪ್ಪಂದವು ಹಲವು ನ್ಯೂನತೆಗಳನ್ನು ಹೊಂದಿದೆ ಎಂದು ಈ ರಾಷ್ಟ್ರಗಳು ಟೀಕಿಸಿದ್ದವು.

2018ರಲ್ಲಿಪರಮಾಣು ಒಪ್ಪಂದವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ರದ್ದುಗೊಳಿಸಿದ್ದರು. ಉಭಯ ದೇಶಗಳ ಬಿಕ್ಕಟ್ಟಿನ ನಡುವೆ ಇದೇ ಮೊದಲ ಬಾರಿಗೆ ಯುರೋಪ್‌ಗೆ ಇರಾನ್‌ ಬೆದರಿಕೆ ಹಾಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT