ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇರಾಕ್‌ ವಾಯುನೆಲೆಗೆ ರಾಕೆಟ್‌ ದಾಳಿ

Last Updated 12 ಜನವರಿ 2020, 20:20 IST
ಅಕ್ಷರ ಗಾತ್ರ

ಸಮರ್‍ರಾ (ಇರಾಕ್‌) : ಬಾಗ್ದಾದ್‌ನ ಉತ್ತರ ಭಾಗದಲ್ಲಿ ಅಮೆರಿಕ ಸೇನೆಗೆ ನೆಲೆಯಾಗಿದ್ದ ಇರಾಕ್‌ನ ವಾಯುನೆಲೆ ‘ಅಲ್‌ ಬಲಾದ್’ ಮೇಲೆ ಭಾನುವಾರ 8 ರಾಕೆಟ್‌ಗಳು ಅಪ್ಪಳಿಸಿವೆ.

ಇಬ್ಬರು ಅಧಿಕಾರಿಗಳು ಸೇರಿ ನಾಲ್ವರು ಗಾಯಗೊಂಡಿದ್ದಾರೆ. ಇದು, ಇರಾಕ್‌ ವೈಮಾನಿಕ ಸಾಮರ್ಥ್ಯವನ್ನು ಮೇಲ್ದರ್ಜೆಗೆ ಏರಿಸಲು ಅಮೆರಿಕದಿಂದ ತಂದಿದ್ದ ಎಫ್‌–16 ಯುದ್ಧವಿಮಾನದ ಮುಖ್ಯ ವಾಯುನೆಲೆಯಾಗಿತ್ತು.

ಅಮೆರಿಕ ವಾಯುಪಡೆಯ ತುಕಡಿ ಇಲ್ಲಿ ನೆಲೆಸಿತ್ತು. ಉದ್ವಿಗ್ನ ಪರಿಸ್ಥಿತಿ ನಂತರ ಯೋಧರು ನಿರ್ಗಮಿಸಿದ್ದರು.

ಪ್ರಸ್ತುತ, ಅಲ್‌ ಬಲಾದ್‌ ನೆಲೆಯಲ್ಲಿ ಒಂದೂ ವಿಮಾನವಿಲ್ಲ. 15ಕ್ಕಿಂತಲೂ ಹೆಚ್ಚು ಯೋಧರೂ ಇಲ್ಲ ಎಂದು ಮೂಲಗಳು ಸ್ಪಷ್ಟಪಡಿಸಿವೆ.

ಟೆಹರಾನ್‌ ವರದಿ: ‘ನಾವು ಈ ಭಾಗದ ಭದ್ರತೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತೇವೆ.ಹೀಗಾಗಿ ಈ ವಲಯದ ಭದ್ರತೆಗಾಗಿ ಹೆಚ್ಚಿನ ಮಾತುಕತೆ ನಡೆಸಲು ನಾವು ಒತ್ತು ನೀಡುತ್ತೇವೆ’ ಎಂದು ಇರಾನ್‌ ಅಧ್ಯಕ್ಷ ಹಸನ್‌ ರೌಹಾನಿ ಹೇಳಿದರು.

ಇರಾನ್‌ ಮತ್ತು ಅಮೆರಿಕ ನಡುವಣ ಉದ್ವಿಗ್ನ ಪರಿಸ್ಥಿತಿ ತಿಳಿಯಾಗಿಸುವ ನಿಟ್ಟಿನಲ್ಲಿ ಇರಾನ್‌ ಅಧ್ಯಕ್ಷ ಹಸನ್‌ ರೌಹಾನಿ ಮತ್ತು ಎಮಿರ್‌ನ ಶೇಖ್‌ ತಮಿಮ್‌ ಬಿನ್‌ ಹಮದ್‌ ಅಲ್‌ ತಾನಿ ನಡುವೆ ಸಭೆ ನಡೆಯಿತು.

‘ನಮ್ಮ ಗುರಿ ಕೇವಲ ವೈರಿ ದೇಶದ ಯೋಧರನ್ನು ಕೊಲ್ಲುವುದಷ್ಟೇ ಅಲ್ಲ. ಅದು ನಮಗೆ ಮುಖ್ಯವಲ್ಲ. ಈ ವಲಯದ ಭದ್ರತೆಗಾಗಿ ಹೆಚ್ಚಿನ ಮಾತುಕತೆ ನಡೆಸುವುದೇ ಮುಖ್ಯವಾಗಿದೆ’ ಎಂದು ರೌಹಾನಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT