ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಷ್ಯಾ ಪ್ರಧಾನಿ ಮಿಖಾಯಿಲ್ ಮಿಶುಸ್ಟಿನ್‌ಗೆ ಕೊರೊನಾ ಸೋಂಕು

Last Updated 1 ಮೇ 2020, 1:24 IST
ಅಕ್ಷರ ಗಾತ್ರ

ಮಾಸ್ಕೊ: ರಷ್ಯಾದ ಪ್ರಧಾನಿ ಮಿಖಾಯಿಲ್ ಮಿಶುಸ್ಟಿನ್‌ಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಹೀಗಾಗಿ ಸ್ವಯಂ ಐಸೋಲೇಷನ್‌ಗೆ ಒಳಪಡುವುದಾಗಿ ಅವರು ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ಗೆ ವಿಡಿಯೊ ಕರೆ ಮೂಲಕ ತಿಳಿಸಿದ್ದಾರೆ.

54 ವರ್ಷ ವಯಸ್ಸಿನ ಮಿಖಾಯಿಲ್ ಜನವರಿಯಲ್ಲಿ ಪ್ರಧಾನಿ ಹುದ್ದೆ ಅಲಂಕರಿಸಿದ್ದರು. ಸದ್ಯ, ಉಪ ಪ್ರಧಾನಿ ಆಂಡ್ರೇ ಬೆಲೊಸೊವ್ ಅವರು ತಾತ್ಕಾಲಿಕವಾಗಿ ಮಿಖಾಯಿಲ್ ಕರ್ತವ್ಯಗಳನ್ನು ನಿರ್ವಹಿಸಲಿದ್ದಾರೆ. ಆದಾಗ್ಯೂ, ಪ್ರಮುಖ ವಿದ್ಯಮಾನಗಳ ಬಗ್ಗೆ ನಿಗಾ ವಹಿಸುವುದಾಗಿಯೂ ಮಿಖಾಯಿಲ್ ತಿಳಿಸಿದ್ದಾರೆ.

ಕೊರೊನಾದಿಂದಾಗಿ ಸಂಕಷ್ಟಕ್ಕೀಡಾದ ರಷ್ಯಾದ ಆರ್ಥಿಕತೆಗೆ ಪುನಶ್ಚೇತನ ನೀಡಲು ನೀತಿಗಳನ್ನು ರೂಪಿಸುವಲ್ಲಿ ಮಿಖಾಯಿಲ್ ಪಾತ್ರ ಮುಂದುವರಿಯುವುದಾಗಿ ಭಾವಿಸಿದ್ದೇನೆ ಎಂದು ಅಧ್ಯಕ್ಷ ಪುಟಿನ್ ವಿಡಿಯೊ ಕರೆ ವೇಳೆ ಭರವಸೆ ವ್ಯಕ್ತಪಡಿಸಿದ್ದಾರೆ.

ರಷ್ಯಾದಲ್ಲಿ ಆರ್ಥಿಕತೆ ವಿಚಾರಗಳ ಬಗ್ಗೆ ಮೇಲ್ವಿಚಾರಣೆ ನಡೆಸುವುದು ಮತ್ತು ಅಧ್ಯಕ್ಷರಿಗೆ ಮಾಹಿತಿ ನೀಡುವುದು ಪ್ರಧಾನಿಯ ಜವಾಬ್ದಾರಿಯಾಗಿದೆ.

ಪುಟಿನ್ ಅವರನ್ನು ಇತ್ತೀಚೆಗೆ ಮಿಖಾಯಿಲ್ ಭೇಟಿಯಾಗಿಲ್ಲ ಎನ್ನಲಾಗಿದೆ. ಕೊರೊನಾ ಪಿಡುಗು ಆರಂಭವಾದ ಬಳಿಕ ಅವರು ಹೆಚ್ಚಾಗಿ ವಿಡಿಯೊ ಕಾನ್ಫರೆನ್ಸ್‌ ಮೂಲಕವೇ ಸಭೆಗಳನ್ನು ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT