ಗುರುವಾರ , ಡಿಸೆಂಬರ್ 3, 2020
19 °C

ಕೋವಿಡ್‌ ಭೀತಿ ಮಧ್ಯೆ ಚುನಾವಣೆ ಗೆದ್ದ ದಕ್ಷಿಣ ಕೊರಿಯಾ ಆಡಳಿತ ಪಕ್ಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಯೋಲ್‌: ಕೊರೊನಾ ವೈರಸ್‌ ಪಿಡುಗು ವ್ಯಾಪಿಸುತ್ತಿರುವ ನಡುವೆಯೇ ದಕ್ಷಿಣ ಕೊರಿಯಾದ ಸಂಸತ್‌ಗೆ ನಡೆದ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಮೂನ್‌ ಜೇ –ಇನ್‌ ಅವರ ನೇತೃತ್ವದ ಅಡಳಿತಾರೂಢ ಪಕ್ಷ ಭರ್ಜರಿ ಗೆಲುವು ದಾಖಲಿಸಿ, ಅಧಿಕಾರ ಭದ್ರಪಡಿಸಿಕೊಂಡಿದೆ. 

ಮೂನ್‌ ಅವರ ನೇತೃತ್ವದ ಆಡಳಿತಾರೂಢ ಡೆಮಾಕ್ರಟಿಕ್ ಪಕ್ಷ ಮತ್ತು ಅದರ ಮಿತ್ರಪಕ್ಷಗಳು 300 ಸದಸ್ಯ ಬಲದ ಸಂಸತ್‌ನಲ್ಲಿ 180 ಸ್ಥಾನಗಳನ್ನು ಪಡೆದಿದ್ದು, ಮತ್ತೊಂದು ಅವಧಿಗೆ ಸರ್ಕಾರ ಉಳಿಸಿಕೊಂಡಿದೆ. 

ದೇಶದಲ್ಲಿ ಒಟ್ಟಾರೆ 66.2% ರಷ್ಟು ಮತದಾನವಾಗಿತ್ತು. 1992ರ ನಂತರ ಈ ಪ್ರಮಾಣದಲ್ಲಿ ಮತದಾನ ನಡೆದಿದ್ದು ಇದೇ ಮೊದಲು. 

ಸದ್ಯ ದಕ್ಷಿಣ ಕೊರಿಯಾದಲ್ಲಿ 10,613 ಕೊರೊನಾ ವೈರಸ್‌ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, 229 ಮಂದಿ ಮೃತಪಟ್ಟಿದ್ದಾರೆ. 7,757 ಮಂದಿ ಗುಣಮುಖರಾಗಿದ್ದಾರೆ ಎಂದು ಅಧಿಕೃತ ಅಂಕಿ ಸಂಖ್ಯೆಗಳಿಂದ ಗೊತ್ತಾಗಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು