ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಯಾನನ್ಮೆನ್‌ ವರ್ಷಾಚರಣೆ | ಮಾನವ ಹಕ್ಕುಗಳನ್ನು ಚೀನಾ ಗೌರವಿಸಲಿ: ಅಮೆರಿಕ ಆಗ್ರಹ

Last Updated 5 ಜೂನ್ 2020, 4:01 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಚೀನಾದ ಬೀಜಿಂಗ್‌ನಲ್ಲಿರುವ ಟಿಯಾನನ್ಮೆನ್‌ ಸ್ಕ್ವೇರ್‌ನ 31ನೇ ವರ್ಷಾಚರಣೆಯನ್ನುದ್ದೇಶಿಸಿ ಅಭಿಪ್ರಾಯ ವ್ಯಕ್ತಪಡಿಸಿರುವ ಅಮೆರಿಕ, ಮಾನವ ಹಕ್ಕುಗಳನ್ನು ಚೀನಾ ಗೌರವಿಸಬೇಕು. ಹಾಂಗ್‌ಕಾಂಗ್‌ ವಿಚಾರದಲ್ಲಿ ನೀಡಿರುವ ಭರವಸೆಗಳಿಗೆ ಬದ್ಧವಾಗಿರಬೇಕು ಹಾಗೂ ಅಲ್ಪಸಂಖ್ಯಾತರ ವಿರುದ್ಧದ ಕಿರುಕುಳವನ್ನು ಕೊನೆಗೊಳಿಸಬೇಕು ಎಂದು ಆಗ್ರಹಿಸಿದೆ.

‘ನಿರಾಯುಧರಾದ ಚೀನಾ ನಾಗರಿಕರ ಹತ್ಯೆಮಾಡುತ್ತಿರುವುದು ದುರಂತದ ಸಂಗತಿಯಾಗಿದ್ದು, ಅದನ್ನು ಮರೆಯಲಾಗದು’ ಎಂದು ಶ್ವೇತಭವನ ಹೇಳಿಕೆ ಬಿಡುಗಡೆ ಮಾಡಿದೆ. ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆ ಅಡಿಯಲ್ಲಿ ಹಾಂಗ್‌ಕಾಂಗ್‌ನ ಸ್ಥಾನಮಾನ ರಕ್ಷಣೆಗೆ ಸಂಬಂಧಿಸಿದಂತೆ ಬದ್ಧವಾಗಿರಬೇಕು ಎಂದು ಆಗ್ರಹಿಸಿದೆ.

‘ಚೀನಾದ ಸಂವಿಧಾನದಡಿಯಲ್ಲಿ ದೇಶದ ಎಲ್ಲ ನಾಗರಿಕರಿಗೆ ಖಚಿತಪಡಿಸಿರುವ ಹಕ್ಕುಗಳು ಮತ್ತು ಸ್ವಾತಂತ್ರ್ಯವನ್ನು ಎತ್ತಿಹಿಡಿಯಬೇಕು. ಮಾತ್ರವಲ್ಲದೆ, ಲಕ್ಷಾಂತರ ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧದ ಜನಾಂಗೀಯ ಕಿರುಕುಳವನ್ನು ವ್ಯವಸ್ಥಿತವಾಗಿ ಕೊನೆಗೊಳಿಸಬೇಕು' ಎಂದು ಒತ್ತಾಯಿಸಿದೆ.

ಚೀನಾದಲ್ಲಿ ಪ್ರಜಾಪ್ರಭುತ್ವ ಜಾರಿಗೊಳಿಸುವಂತೆ ಆಗ್ರಹಿಸಿ 1989ರಲ್ಲಿ ಪ್ರತಿಭಟನೆ ನಡೆಸುತ್ತಿದ್ದವರನ್ನು ಟಿಯಾನನ್ಮೆನ್‌ ಸ್ಕ್ವೇರ್‌ನಲ್ಲಿ ಹತ್ತಿಕ್ಕಲಾಗಿತ್ತು. ಆದರೆ, ಇದರ ವರ್ಷಾಚರಣೆ ಹೊತ್ತಿನಲ್ಲೇ ಅಮೆರಿಕದಲ್ಲಿ ಜನಾಂಗೀಯ ದ್ವೇಷದ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿವೆ.

ಆಫ್ರಿಕಾ ಮೂಲದ ಅಮೆರಿಕನ್‌ ಪ್ರಜೆ, ಜಾರ್ಜ್‌ ಫ್ಲಾಯ್ಡ್‌ ಅವರು ಪೊಲೀಸ್‌ ಕಸ್ಟಡಿಯಲ್ಲಿ ಕಳೆದವಾರ ಮೃತಪಟ್ಟಿರುವುದನ್ನು ಖಂಡಿಸಿನಡೆಯುತ್ತಿರುವ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿದೆ.ಪ್ರತಿಭಟನಾಕಾರರನ್ನು ನಿಯಂತ್ರಿಸಲುಮಿಲಿಟರಿಯನ್ನು ನಿಯೋಜಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಬೆದರಿಕೆ ಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT