ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಹರಡುವಿಕೆಗೆ ಚೀನಾ ಹೊಣೆ: ಟ್ರಂಪ್

Last Updated 23 ಜೂನ್ 2020, 7:29 IST
ಅಕ್ಷರ ಗಾತ್ರ

ವಾಷಿಂಗ್ಟನ್‌:ಜಾಗತಿಕವಾಗಿ 4.56 ಲಕ್ಷಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿರುವ ಕೊರೊನಾ ವೈರಸ್ ಹರಡಲು ಚೀನಾ ಹೊಣೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಭಿಪ್ರಾಯಪಟ್ಟಿದ್ದಾರೆ ಎಂದು ಅವರ ವಕ್ತಾರ ತಿಳಿಸಿದ್ದಾರೆ.

‘ಕೊರೊನಾ ವೃದ್ಧಿಗೆ ಚೀನಾ ಕಾರಣ ಎಂದು ಅಮೆರಿಕ ಸೇನೆ ಸುಳ್ಳು ಸುದ್ದಿ ಹಬ್ಬಿಸುತ್ತಿದೆ ಎಂದು ಚೀನಾ ದೂರಿತ್ತು. ಆದರೆ, ಸೇನೆಯ ಬೆನ್ನಿಗೆ ನಿಂತ ಡೊನಾಲ್ಡ್‌ ಟ್ರಂಪ್,‌ ಜಗತ್ತಿನೆಲ್ಲೆಡೆ ಕೊರೊನಾ ವೃದ್ಧಿಗೆ ಚೀನಾ ದೇಶ ಕಾರಣ ಎಂದು ಹೇಳಿದ್ದಾರೆ ಎಂದು ವೈಟ್‌ ಹೌಸ್‌ ಮಾದ್ಯಮ ಕಾರ್ಯದರ್ಶಿ ಕೇಯ್ಲಿ ಮೆಕ್‌ ಎನಾನಿ ಅವರುಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಕೊರೊನಾ ಹುಟ್ಟಿಗೆ ಚೀನಾ ಕಾರಣ. ಇದಕ್ಕೂ ಏಷ್ಯನ್‌ ಅಮೆರಿಕನ್ನರಿಗೂ ಸಂಬಂಧವಿಲ್ಲ.ಇದರಲ್ಲಿ ಅವರದ್ದೇನು ತಪ್ಪಿಲ್ಲ ಏಷ್ಯನ್‌ ಅಮೆರಿಕನ್ನರು ನಮ್ಮ ಜೊತೆ ಸೇರಿಕೊರೊನಾ ವಿರುದ್ಧ ಹೋರಾಡುತ್ತಿದ್ದಾರೆ ಎಂಬುದು ಟ್ರಂಪ್‌ ಅವರ ಅಭಿಪ್ರಾಯ ಎಂದುಕೇಯ್ಲಿ ಮೆಕ್‌ ಎನಾನಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT